ಚೆನ್ನೈ:ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯ ನಡುವೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ವ್ಯಕ್ತಿಯೊಬ್ಬನನ್ನು ಹೆಗಲ ಮೇಲೆ ಹೊತ್ತು ಸಾಗಿ, ಆಟೋ ಹತ್ತಿಸಿ ಆಸ್ಪತ್ರೆಗೆ ದಾಖಲಿಸಿದ್ದ ಮಹಿಳಾ ಪೊಲೀಸ್​ ಅಧಿಕಾರಿಗೆ ಮುಖ್ಯಮಂತ್ರಿ ಸ್ಟಾಲಿನ್​ ಅವರು ಅಭಿನಂದನೆ ಸಲ್ಲಿಸಿದರು.
ತಮಿಳುನಾಡು ರಾಜಧಾನಿ ಚೆನ್ನೈನ ಟಿಪಿ ಛತ್ರಂ ಏರಿಯಾದಲ್ಲಿ ಸ್ಮಶಾನದಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಉದಯ್​ ಕುಮಾರ್​ ಎಂಬುವರನ್ನು ಇನ್ಸ್​ಪೆಕ್ಟರ್​ ರಾಜೇಶ್ವರಿ ಅವರು ನ.11 ರಂದು ರಕ್ಷಿಸಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ರಾಜೇಶ್ವರಿ ಅವರ ಮಾನವೀಯತೆಗೆ ನೆಟ್ಟಿಗರು ಬಹುಪರಾಕ್​ ಹೇಳಿದ್ದರು.
ಪ್ರಜ್ಞೆ ತಪ್ಪಿ ಬಿದ್ದಿದ್ದ ಉದಯ್​ ಕುಮಾರ್​ನನ್ನು ತಮ್ಮ ಹೆಗಲ ಮೇಲೆ ಹೊತ್ತು ಆಟೋ ಒಳಗೆ ಹಾಕಿ ರಾಜೇಶ್ವರಿ ಅವರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಉದಯ್​ ಕುಮಾರ್​ ಪರಿಸ್ಥಿತಿ ತುಂಬಾ ಗಂಭೀರವಾಗಿದ್ದರಿಂದ ಶುಕ್ರವಾರ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಮಳೆಯಿಂದ ಧರೆಗುರುಳಿದ ಮರವೊಂದು ಉದಯ್​ ಕುಮಾರ್​ ಮೇಲೆ ಬಿದ್ದಿತ್ತು. ಸ್ಥಳದಲ್ಲಿ ಯಾರೋ ಸತ್ತು ಬಿದ್ದಿರುವುದಾಗಿ ಠಾಣೆಗೆ ಬಂದ ಕರೆಯನ್ನು ಆಧರಿಸಿ ಘಟನಾ ಸ್ಥಳಕ್ಕೆ ತೆರಳಿದಾಗ ಉದಯ್​ ಕುಮಾರ್​ ಇನ್ನು ಬದುಕಿದ್ದ. ತಕ್ಷಣ ರಾಜೇಶ್ವರಿ ಅವರು ಹೆಗಲ ಮೇಲೆ ಹಾಕಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.
ರಾಜೇಶ್ವರಿ ಮಾನವೀಯತೆಗೆ ಮೆಚ್ಚುಗೆ ಸೂಚಿಸಿರುವ ತಮಿಳುನಾಡು ಸಿಎಂ ಸ್ಟಾಲಿನ್​, ರಾಜೇಶ್ವರಿ ಅವರ ಕಾರ್ಯಗಳು ದೀನದಲಿತರಿಗೆ ಪೊಲೀಸರ ಸಹಾಯ ಹಸ್ತವಾಗಿದೆ ಎಂದು ಶ್ಲಾಘಿಸಿ, ಅಭಿನಂದನೆ ಸಲ್ಲಿಸಿದ್ದಾರೆ.
ತಮಿಳುನಾಡಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಗೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಎಗ್ಮೋರ್ ಮತ್ತು ಪೆರಂಬೂರ್​ ಸೇರಿದಂತೆ ಹಲವು ಕಡೆ ಮರಗಳು ಧರಶಾಹಿಯಾಗಿದ್ದು, ವರುಣನ ಅಬ್ಬರಕ್ಕೆ ಜನ ತತ್ತರಿಸಿ ಹೋಗಿದ್ದಾರೆ. ಈವರೆಗೂ 12ಕ್ಕೂ ಮಂದಿ ಮಳೆ ಕಾರಣದಿಂದಾಗಿ ತಮಿಳುನಾಡಿನಲ್ಲಿ ಮೃತಪಟ್ಟಿರುವುದಾಗಿ ತಮಿಳುನಾಡಿನ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಕುಮಾರ್​ ಜಯಂತ್​ ಮಾಹಿತಿ ನೀಡಿದ್ದಾರೆ.
ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ತಮಿಳುನಾಡಿನಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲೂ ಸಮುದ್ರ ತೀರಕ್ಕೆ ಹೊಂದಿಕೊಂಡಿರುವ ಚೆನ್ನೈನಲ್ಲಿ ವರುಣ ಅಬ್ಬರಿಸುತ್ತಿದ್ದು ನಗರದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ.(ಏಜೆನ್ಸೀಸ್​)
ಪ್ರಧಾನಿ ಮೋದಿ 4 ಗಂಟೆಗಳ ಭೇಟಿಗೆ ಮಧ್ಯಪ್ರದೇಶ ಸರ್ಕಾರ ಖರ್ಚು ಮಾಡ್ತಿರೋ ಹಣ ಕೇಳಿದ್ರೆ ಬೆರಗಾಗ್ತೀರಾ!

ಜಗಮೆಚ್ಚಿದ ‘ಪುನೀತ್​’ಗೆ ಇದೆಂಥಾ ಅವಮಾನ? ಅಪ್ಪು ಫೋಟೋ ಮುಂದೆ ಹುಚ್ಚಾಟ ಮೆರೆದ ಚಿತ್ರತಂಡ!

ತಾಯಿಗೆ ಪಂಗನಾಮ ಹಾಕಿದ ಮಗಳು: ಮಾಡಬಾರದ್ದನ್ನು ಮಾಡಿ ಎಸ್ಕೇಪ್​ ಆದವಳಿಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − four =
Remember me
