ನವದೆಹಲಿ:ಶಿವರಾತ್ರಿ ಹಬ್ಬದ ದಿನದಂದೇ ವಾಣಿಜ್ಯ ಬಳಕೆಯ ಎಲ್​​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದು, ಇಂದು ಬೆಳಗ್ಗೆ (ಮಾ.1) ರಾಷ್ಟ್ರದ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು ಎಲ್​ಪಿಜಿ ಸಿಲಿಂಡರ್​ ಬೆಲೆಯ ಪರಿಷ್ಕೃತ ಪಟ್ಟಿಯನ್ನು ಬಿಡುಗಡೆ ಮಾಡಿವೆ.
ದೆಹಲಿಯಲ್ಲಿ ವಾಣಿಜ್ಯ ಬಳಕೆಯ ಎಲ್​ಪಿಜಿ ಸಿಲಿಂಡರಿನ ಬೆಲೆಯಲ್ಲಿ ಬರೋಬ್ಬರಿ 105 ಏರಿಕೆ ಕಂಡಿದ್ದು, 19 ಕೆಜಿ ಸಿಲಿಂಡರಿನ ಬೆಲೆ 2012 ರೂಪಾಯಿ ಆಗಿದೆ. 5 ಕೆಜಿ ಸಿಲಿಂಡರಿನ ಬೆಲೆಯಲ್ಲಿ 27 ರೂಪಾಯಿ ಏರಿಕೆ ಕಂಡಿದ್ದು, 569 ರೂ. ಮುಟ್ಟಿದೆ.
ಫೆ. 1ರಂದು ಕೇಂದ್ರ ಬಜೆಟ್​ ಮಂಡನೆಗೆ ಒಂದು ಗಂಟೆ ಬಾಕಿ ಇರುವಾಗಲೇ ವಾಣಿಜ್ಯ ಬಳಕೆಯ ಎಲ್​​ಪಿಸಿ ಸಿಲಿಂಡರಿನ ಬೆಲೆಯಲ್ಲಿ 19.5 ರೂಪಾಯಿ ಇಳಿಕೆಯಾಗಿದ್ದು, ಇದೀಗ 105 ರೂಪಾಯಿ ಏರಿಕೆಯಾಗಿದ್ದು, ಹೋಟೆಲ್​ ಉದ್ಯಮ ಮೇಲೆ ಪರಿಣಾಮ ಬೀರಲಿದ್ದು, ಗ್ರಾಹಕರ ಜೇಬಿಗೂ ಇದರ ಬಿಸಿ ತಟ್ಟಲಿದೆ.
ಇನ್ನು ಖುಷಿಯ ವಿಚಾರವೇನೆಂದರೆ 14 ಕೆಜಿಯ ಗೃಹಬಳಕೆಯ ಎಲ್​ಪಿಜಿ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಈಗಾಗಲೇ ಗೃಹಬಳಕೆಯ ಎಲ್​ಪಿಜಿ ದರ ಗಗನಮುಖಿಯಾಗಿದ್ದು, ಮತ್ತೆ ಏರಿಕೆಯಾದರೆ ಸಾಮಾನ್ಯ ಜನರ ಮೇಲೆ ತೀವ್ರ ಪರಿಣಾಮ ಬೀರಲಿದೆ. ಸದ್ಯ ಬೆಲೆಯಲ್ಲಿ ಸ್ಥಿರತೆ ಇರುವುದು ಕೊಂಚ ಸಮಾಧಾನಕರ ಸಂಗತಿಯಾಗಿದೆ. ಎಲ್‌ಪಿಜಿ ಸಿಲಿಂಡರ್ ದರವನ್ನು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಪ್ರತಿ ತಿಂಗಳು ಪರಿಷ್ಕರಿಸಲಾಗುತ್ತದೆ.(ಏಜೆನ್ಸೀಸ್​)
ಮಾನವನ ದೇಹಗಳೇ ಆವಿಯಾಗುತ್ತಿದೆ… ಯೂಕ್ರೇನ್​ ವಿರುದ್ಧ ರಷ್ಯಾ ಇಂಥಾ ಕೀಳುಮಟ್ಟಕ್ಕೆ ಇಳಿಯಿತಾ!?

ಅದೃಷ್ಟದ ಬೆನ್ನಲ್ಲೇ ಕಚ್ಚಾ ಬಾದಾಮ್​ ಗಾಯಕನಿಗೆ ದುರಾದೃಷ್ಟ: ಕಾರು ಖರೀದಿಸಿದವನಿಗೆ ಕಾದಿತ್ತು ಶಾಕ್!​​​

ಮೀನುಗಾರರ ಬಲೆಗೆ ಬಿದ್ದ 800 ಕೆಜಿ ತೂಕದ ಈ ದೈತ್ಯ ಮೀನಿನ ಬೆಲೆ ಕೇಳಿದ್ರೆ ನಿಜಕ್ಕೂ ದಂಗಾಗ್ತೀರಾ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:one × one =
Remember me
