ತಿರುವನಂತಪುರಂ:ಬಾಕಿ ಒಂದು ರೂಪಾಯಿ ಕೇಳಿದ್ದಕ್ಕೆ ಬಸ್​ ಕಂಡಕ್ಟರ್​ ಪ್ರಯಾಣಿಕರೊಬ್ಬರಿಗೆ ಹಿಗ್ಗಾಮುಗ್ಗಾ ಥಳಿಸಿರುವ ಅಮಾನವೀಯ ಘಟನೆ ಕೇರಳದ ಪೆರೂರ್ಕಡದಲ್ಲಿ ನಡೆದಿದೆ.
ಸಂತ್ರಸ್ತ ಪ್ರಯಾಣಿಕನನ್ನು ಕಲ್ಲಂಬಳಂ ಮೂಲದ ಶಿರಾಸ್ ಎಂದು ಗುರುತಿಸಲಾಗಿದೆ. ಹೊಡೆತ ತಿಂದ ಶಿರಾಸ್​ಗೂ ಮುನ್ನವೇ ಕಂಡಕ್ಟರ್​ ಆತನ ವಿರುದ್ಧ ದೂರು ದಾಖಲಿಸಿದ್ದು, ನನ್ನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಡ್ರಾಮಾ ಮಾಡಿದ್ದಾನೆ.
ಬಾಕಿ ಹಣ ಕೇಳಿದ್ದಕ್ಕೆ ಇತರೆ ಪ್ರಯಾಣಿಕರ ಎದುರಲ್ಲೇ ಶಿರಾಸ್​ ಮೇಲೆ ಕಂಡಕ್ಟರ್​ ಹಲ್ಲೆ ಮಾಡಿದ್ದಾರೆ. ಈ ಘಟನೆ ಒಂದು ದಿನದ ಹಿಂದೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಬೆಳಕಿಗೆ ಬಂದಿದೆ. ಸಂತ್ರಸ್ತ ಯುವಕ ಕಂಡಕ್ಟರ್​ ವಿರುದ್ಧ ದೂರು ದಾಖಲಿಸಿದ್ದಾನೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆದಾಗ ಆರೋಪಿ ಕಂಡಕ್ಟರ್​ ಕೂಡ ಸಂತ್ರಸ್ತ ಶಿರಾಸ್​ ವಿರುದ್ಧ ದೂರು ದಾಖಲಿಸಿದ್ದಾನೆ. ಎರಡು ಕಡೆ ದೂರು ದಾಖಲಾಗಿರುವುದರಿಂದ ಗೊಂದಲಕ್ಕೀಡಾಗಿರುವ ಪೊಲೀಸರು ಸಹ ಪ್ರಯಾಣಿಕರ ಹೇಳಿಕೆ ಪಡೆದುಕೊಂಡಿದ್ದಾರೆ.
ಮೇಲ್ನೋಟಕ್ಕೆ ಕಂಡಕ್ಟರ್​ನದ್ದೇ ತಪ್ಪು ಎಂದು ತಿಳಿದುಬಂದಿದ್ದು, ಆತನ ವಿರುದ್ಧ ಸೂಕ್ತ ಕ್ರಮ ಜರುಗಿಸುವ ಸಾಧ್ಯತೆ ಇದೆ.(ಏಜೆನ್ಸೀಸ್​)
ಮಕ್ಕಿ ಕಾ ಮಕ್ಕಿಯಂತೆ‌ ಇರಬೇಡಿ: ಡಿಸಿಗಳಿಗೆ ಸಿಎಂ ಬೊಮ್ಮಾಯಿ‌ ಬೂಸ್ಟರ್ ಡೋಸ್

ಮದರ್ಸ್​ ಡೇ ದಿನದಂದೇ ಮಗುವಿನ ಜತೆ ಮೊದಲ ಫೋಟೋ ಹಂಚಿಕೊಂಡ ನಟಿ ಕಾಜಲ್​ ಅಗರ್​ವಾಲ್​

ಬೀಚ್​​ನಲ್ಲಿ ಪತ್ತೆಯಾದವು ಡೈನೋಸಾರ್​ ಮರಿಗಳು: ಭಾರೀ ವೈರಲ್​ ಆದ ಈ ವಿಡಿಯೋದಲ್ಲಿರುವ ಪ್ರಾಣಿ ಯಾವುದು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + 18 =
Remember me
