ಹೈದರಾಬಾದ್​:ಭೀಕರ ಕಾರು ಅಪಘಾತದಲ್ಲಿ ಕಾಂಗ್ರೆಸ್​ ನಾಯಕನ ಮಗಳು ದುರಂತ ಸಾವಿಗೀಡಾಗಿರುವ ಘಟನೆ ಸೋಮವಾರ ಮುಂಜಾನೆ ಹೈದರಾಬಾದ್​​ ಹೊರವಲಯದ ಶಂಶಾಬಾದ್​ನಲ್ಲಿ ನಡೆದಿದೆ.
ಮೃತಳನ್ನು ತಾನ್ಯಾ ಕಾಕಡೆ (25) ಎಂದು ಗುರುತಿಸಲಾಗಿದೆ. ವೃತ್ತಿಯಲ್ಲಿ ಬ್ಯೂಟಿಷಿಯನ್​ ಆಗಿರುವ ತಾನ್ಯಾ, ಕಾಂಗ್ರೆಸ್​ ನಾಯಕ ಮೊಹಮ್ಮದ್​ ಫಿರೋಜ್ ಖಾನ್​ ಅವರ ಮಗಳು.​ ಫ್ರೆಂಡ್ಸ್​ ಜೊತೆ ಕಾರಿನಲ್ಲಿ ಪ್ರಯಾಣ ಮಾಡುವಾಗ ನಿಯಂತ್ರಣ ತಪ್ಪಿದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು, ಪಲ್ಟಿ ಹೊಡೆದು ದುರಂತ ಸಂಭವಿಸಿದೆ.

ಪೊಲೀಸರ ಪ್ರಕಾರ ತಾನ್ಯಾ, ರಾಜೀವ್​ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಮನೆಗೆ ಮರಳುತ್ತಿದ್ದರು. ಈ ವೇಳೆ ಆಕೆಯೊಂದಿಗೆ ಇನ್ನಿಬ್ಬರು ಸ್ನೇಹಿತರು ಸಹ ಇದ್ದರು. ಅವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ತಾನ್ಯಾಳ ಮೃತದೇಹವನ್ನು ಹೈದರಾಬಾದ್​ನ ಒಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಕಾರು ಚಲಾಯಿಸುತ್ತಿದ್ದ ಮಿರ್ಜಾ ಅಲಿ ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಡಿವೈಡರ್‌ಗೆ ಡಿಕ್ಕಿ ಹೊಡೆದಿದ್ದರಿಂದ ಕಾರು ಜಖಂಗೊಂಡಿದೆ. ಆರ್‌ಜಿಐ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಅಂದಹಾಗೆ ಮೃತ ತಾನ್ಯಾಳ ತಂದೆ ಫಿರೋಜ್ ಖಾನ್, ಹೈದರಾಬಾದ್​ನ ನಾಂಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಉಸ್ತುವಾರಿ. ಅವರು 2019 ರಲ್ಲಿ ಹೈದರಾಬಾದ್ ಲೋಕಸಭಾ ಸ್ಥಾನಕ್ಕೆ ಸ್ಪರ್ಧಿಸಿ ಸೋಲುಂಡಿದ್ದಾರೆ.(ಏಜೆನ್ಸೀಸ್​)
ಕಾಬೂಲ್​ನಲ್ಲಿ ಅಮೆರಿಕ ನಡೆಸಿದ ವಾಯುದಾಳಿಗೆ ಅಲ್​ಖೈದಾ ನಾಯಕ ಐಮನ್​ ಅಲ್-ಜವಾಹಿರಿ ಬಲಿ

ಟೆಂಡರ್ ಅಕ್ರಮಕ್ಕೆ ಬ್ರೇಕ್: ನಕಲಿ ದಾಖಲೆಗಳ ಪತ್ತೆಗೆ ಡಿಬಾರ್​ಮೆಂಟ್​ ಸಮಿತಿ ರಚನೆ

ಅದೃಷ್ಟದ ನೆಲ ತರಬಲ್ಲದೆ ಸಿದ್ದುಗೆ ಬಲ: ರಾಜಕೀಯ ಪಕ್ಷಗಳಿಗೆ ಮರುಹುಟ್ಟು ನೀಡಿದ ದಾವಣಗೆರೆ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 × 5 =
Remember me
