ಭೋಪಾಲ್​:ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ರಾಜಸ್ಥಾನದ ಕಾಂಗ್ರೆಸ್ ಶಾಸಕ ಭರತ್​ ಸಿಂಗ್​ ಕುಂದನ್​ಪುರ್​​, 500 ಮತ್ತು 2000 ರೂಪಾಯಿ ಮೇಲಿರುವ ಮಹಾತ್ಮ ಗಾಂಧಿಯ ಫೋಟೋವನ್ನು ತೆಗೆಯುವಂತೆ ಮನವಿ ಮಾಡಿಕೊಂಡಿದ್ದಾರೆ.
ಗಾಂಧಿ ಫೋಟೋ ಯಾಕೆ ತೆಗೆಯಬೇಕೆಂಬ ಕಾರಣವನ್ನು ಕಾಂಗ್ರೆಸ್​ ಶಾಸಕ ನೀಡಿದ್ದಾರೆ. 500 ಮತ್ತು 2000 ರೂಪಾಯಿ ನೋಟುಗಳನ್ನು ಹೆಚ್ಚಾಗಿ ಭ್ರಷ್ಟಾಚಾರಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇದು ಗಾಂಧಿ ಅವರ ತತ್ವಕ್ಕೆ ವಿರುದ್ಧವಾಗಿದ್ದು, ನೋಟಿನಲ್ಲಿರುವ ಫೋಟೋ ಗಾಂಧಿಗೆ ಮಾಡಿದ ಅಪಮಾನವಾಗಿದೆ ಎಂದಿದ್ದಾರೆ. ಅಲ್ಲದೆ, ರಾಜಸ್ಥಾನದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಪ್ರಕರಣಗಳ ಮೇಲೆ ಬೆಳಕು ಚೆಲ್ಲಿರುವ ಶಾಸಕ, ಜನವರಿ 2019 ರಿಂದ 2020ರ ಡಿಸೆಂಬರ್​ 31ರವರೆಗೆ 616 ಪ್ರಕರಣಗಳು ದಾಖಲಾಗಿವೆ. ಇದರ ಪ್ರಕಾರ ದಿನವೊಂದಕ್ಕೆ ಸರಾಸರಿ 2 ಪ್ರಕರಣಗಳಾದರೂ ದಾಖಲಾಗುತ್ತಿವೆ ಎಂಬ ಮಾಹಿತಿ ನೀಡಿದ್ದಾರೆ.
ಅಕ್ಟೋಬರ್​ 2ರ 152ನೇ ಗಾಂಧಿ ಜಯಂತಿ ದಿನದಂದೇ ಶಾಸಕ ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದಿದ್ದಾರೆನ್ನಲಾಗಿದೆ. ಕೇವಲ 5, 10, 20, 50, 100 ಮತ್ತು 200 ರೂಪಾಟಿ ನೋಟುಗಳಲ್ಲಿ ಮಾತ್ರ ಗಾಂಧಿ ಫೋಟೋ ಇರಲಿ. ಏಕೆಂದರೆ, ಈ ನೋಟುಗಳನ್ನು ಹೆಚ್ಚಾಗಿ ಬಡ ಜನರು ಉಪಯೋಗಿಸುತ್ತಾರೆ. ಅಲ್ಲದೆ, ಗಾಂಧಿ ತಮ್ಮ ಇಡೀ ಜೀವನ ಬಡವರಿಗಾಗಿಯೇ ಕೆಲಸ ಮಾಡಿದರು ಎಂದಿದ್ದಾರೆ.
500 ಮತ್ತು 2000 ರೂಪಾಯಿ ನೋಟಿನಲ್ಲಿ ಗಾಂಧಿಯ ಫೋಟೋವನ್ನು ತೆಗೆದು ಕೇವಲ ಅವರ ಕನ್ನಡಕ ಮತ್ತು ಅಶೋಕ ಚಕ್ರವನ್ನು ಬಳಕೆ ಮಾಡಿ ಎಂದು ಪ್ರಧಾನಿ ಮೋದಿಗೆ ಸಲಹೆ ನೀಡಿದ್ದಾರೆ. ಸದ್ಯ ಭ್ರಷ್ಟಾಚಾರ ದೇಶದ ಮೂಲೆ ಮೂಲೆಗೂ ಹರಡಿದೆ. 500 ಮತ್ತು 2000 ರೂಪಾಯಿಯನ್ನು ಲಂಚ ನೀಡಲು ಮತ್ತು ತೆಗೆದುಕೊಳ್ಳಲು ಬಯಸುತ್ತಾರೆ. ಅಲ್ಲದೆ, ಬಾರ್​ಗಳಲ್ಲಿಯು ಗಾಂಧಿ ನೋಟುಗಳು ಹರಿದಾಡುವುದರಿಂದ ಅದು ಗಾಂಧಿಗೆ ಮಾಡಿದ ಅಪಮಾನ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಮನೆ ಖಾಲಿ ಇದೆ ಎಂಬ ಫಲಕವೇ ಇವರ ಬಂಡವಾಳ: ಮಾಡಬಾರದನ್ನ ಮಾಡಿ ಸಿಕ್ಕಿಬಿದ್ದ ಪ್ರೇಮಿಗಳು..!

https://www.vijayavani.net/r-sa-ra-mahesh-rohini-sindhuri-apology-jds-mla-ias-officer-mysuru/
ಟಿ20 ವಿಶ್ವಕಪ್​: ಭಾರತವನ್ನು ಸೋಲಿಸಿದ್ರೆ PCB ಮುಖ್ಯಸ್ಥರಿಗೆ ಸಿಗುವ ಆಫರ್ ಬಗ್ಗೆ​ ಕೇಳಿದ್ರೆ ದಂಗಾಗ್ತೀರಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + seven =
Remember me
