ಚೆನ್ನೈ:ನಮ್ಮ ರಾಜ್ಯದ ಯಾರೊಬ್ಬರಿಗು ಶ್ರೀರಾಮ ಯಾರೆಂಬುದು ಗೊತ್ತೇ ಇಲ್ಲ ಎನ್ನುವ ಮೂಲಕ ತಮಿಳುನಾಡಿನ ಕಾಂಗ್ರೆಸ್​ ಸಂಸದೆ ಜ್ಯೋತಿಮಣಿ ವಿವಾದಕ್ಕೆ ಗುರಿಯಾಗಿದ್ದಾರೆ.
ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಮಣಿ ನಾನು ತಮಿಳುನಾಡು ಮೂಲದವಳು. ನನಗೆ ರಾಮ ಯಾರೆಂಬುದು ಗೊತ್ತಿಲ್ಲ. ತಮಿಳುನಾಡಿನಲ್ಲಿ ನೀವು ಯಾರನ್ನೇ ಕೇಳಿ ಅವರು ಕೂಡ ಇದೇ ಮಾತನ್ನು ಹೇಳುತ್ತಾರೆ. ನಾವು ಯಾವುದೇ ರಾಮ ದೇವಸ್ಥಾನವನ್ನು ನೋಡಿಲ್ಲ ಎಂದಿದ್ದಾರೆ.
ಜ್ಯೋತಿಮಣಿ ಅವರ ಸಂದರ್ಶನದ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿದ್ದಾರೆ ಎಂದು ಸಂಸದೆ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ.
ಸಂಸದೆ ಜ್ಯೋತಿಮಣಿ ಅವರಿಗೆ ನಂದಗೋಪಾಲ್​ ಕೆ. ಎಂ. ಹೆಸರಿನ ನೆಟ್ಟಿಗ ಸರಿಯಾದ ತಿರುಗೇಟು ನೀಡಿದ್ದು, ತಮಿಳುನಾಡಿನಲ್ಲಿ ರಾಮನಿಗೆ ಸಮರ್ಪಿಸಿದ ದೇವಸ್ಥಾನಗಳಿವೆ. ತಿರುಚಿಯ ಶ್ರೀರಂಗಂ ಬಳಿ ಇರುವ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ, ತಿರುವಣಾಮಲೈ ಸಮೀಪದ ಆದಿ ಶ್ರೀ ರಂಗಂ, ಪಲ್ಲಿಕೊಂಡದ ಶ್ರೀರಂಗನಾಥ ದೇವಸ್ಥಾನ. ಮದುರಂತಂಗಮ್​ನ ಏರಿ ಕತಾ ರಾಮರ್​ ದೇವಸ್ಥಾನ, ರಾಮೇಶ್ವರಂನ ರಾಮನಾಥ ಸ್ವಾಮಿ ದೇವಸ್ಥಾನ ಹೀಗಾಗಿ ಸಾಕಷ್ಟು ದೇವಸ್ಥಾನಗಳು ತಮಿಳುನಾಡಿನಲ್ಲಿ ಇವೆ ಎಂದು ಟ್ವೀಟ್​ ಮಾಡಿದ್ದಾರೆ. ಹೀಗೆ ಸಾಕಷ್ಟು ನೆಟ್ಟಿಗರು ಸಂಸದೆ ವಿರುದ್ಧ ಕಿಡಿಕಾರಿದ್ದಾರೆ. (ಏಜೆನ್ಸೀಸ್​)
I’m from Tamil Nadu, I don’t know Ram
You ask anybody in Tamil NaduWe don’t see any Ram Temple
TN Congress MP, Jothimanipic.twitter.com/cmCTevhCwP
— Tinku | ಟಿಂಕು (@tweets_tinku)April 19, 2022

ಯುವತಿ ಜತೆ ಎಸ್ಕೇಪ್​ ಆಗಿದ್ದ ವಿವಾಹಿತನಿಗೆ ಬಿಗ್​ ಶಾಕ್​ ಕೊಟ್ಟ ಗುಜರಾತ್​​ ಹೈಕೋರ್ಟ್​!

ಕೆಜಿಎಫ್​-2 ಕುರಿತ ಸರಣಿ ಟ್ವೀಟ್​ ಡಿಲೀಟ್​ ಮಾಡಿ ಉಲ್ಟಾ ಹೊಡೆದ ವಿಮರ್ಶಕ ಯಶ್​​ ಬಗ್ಗೆ ಹೇಳಿದ್ದಿಷ್ಟು…

ಎರಡು ವರ್ಷ ಅಲೆದ್ರೂ ಸಿಗದ ಕೆಲಸ: ಟೀ ಮಾರಾಟಕ್ಕಿಳಿದ ಅರ್ಥಶಾಸ್ತ್ರ ಪದವೀಧರೆಯ ಮನಕಲಕುವ ಕತೆಯಿದು

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 + fourteen =
Remember me
