ಲಖನೌ:ಮುಂಬರುವ ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಕಷ್ಟು ರಣತಂತ್ರ ಹೆಣೆಯುತ್ತಿರುವ ಕಾಂಗ್ರೆಸ್​, ಚುನಾವಣೆಯಲ್ಲಿ ಉನ್ನಾವೋ ಅತ್ಯಾಚಾರ ಸಂತ್ರಸ್ತೆಯ ತಾಯಿಯನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಈಗಾಗಲೇ ಆಯ್ಕೆಯಾಗಿರುವ ಅಭ್ಯರ್ಥಿಗಳ ಪಟ್ಟಿಯನ್ನು ಕಾಂಗ್ರೆಸ್​ ಬಿಡುಗಡೆ ಮಾಡಿದ್ದು, ಅದರಲ್ಲಿ ಸಂತ್ರಸ್ತೆಯ ತಾಯಿ ಆಶಾ ಸಿಂಗ್​ ಹೆಸರು ಕೂಡ ಇದೆ. ಕಿರುಕುಳ ಮತ್ತು ದೌರ್ಜನ್ಯಕ್ಕೆ ಒಳಗಾದವರ ಬೆನ್ನಿಗೆ ಕಾಂಗ್ರೆಸ್​ ಸದಾ ನಿಲ್ಲಲಿದೆ ಎಂಬ ಸಂದೇಶವನ್ನು ನಮ್ಮ ಹೊಸ ಅಭ್ಯರ್ಥಿಗಳ ಪಟ್ಟಿ ಸಾರಿದೆ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
2017ರಲ್ಲಿ ಉಚ್ಛಾಟಿತ ಬಿಜೆಪಿ ಶಾಸಕ ಕುಲದೀಪ್​ ಸೆಂಗಾರ್, ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದರು. ಈ ಆರೋಪದ ಮೇಲೆ 2019ರಲ್ಲಿ ಸೆಂಗಾರ್​ನನ್ನು ಕೋರ್ಟ್​ ಅಪರಾಧಿ ಎಂದು ಘೋಷಿಸಿದೆ. ​
ಈ ಘಟನೆ ಉನ್ನಾವೋ ಎಂಬಲ್ಲಿ ನಡೆದಿದ್ದರಿಂದ, ಉನ್ನಾವೋ ಅತ್ಯಾಚಾರ ಪ್ರಕರಣ ಎಂದು ರಾಷ್ಟ್ರಾದ್ಯಂತ ಸುದ್ದಿಯಾಯಿತು. ಅದರಲ್ಲೂ ಸಂತ್ರಸ್ತೆಯು ಪ್ರಕರಣದಲ್ಲಿ ಪೊಲೀಸರು ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ನಿವಾಸದ ಬಳಿ ಆತ್ಮಹತ್ಯೆಗೆ ಯತ್ನಿಸಿದಾಗ ಈ ಪ್ರಕರಣ ಇಡೀ ರಾಷ್ಟ್ರಾದ್ಯಂತ ಭಾರೀ ಚರ್ಚೆಯಾಯಿತು. ಅಂದಿನಿಂದಲೂ ಈ ಪ್ರಕರಣ ದೇಶದ ಕರಾಳ ಅಧ್ಯಯಗಳಲ್ಲಿ ಒಂದಾಗಿದೆ.
ಸೆಂಗಾರ್​ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆ ತನ್ನ ರಾಜಕೀಯ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಸೆಂಗಾರ್​, ಸಂತ್ರಸ್ತೆಯ ತಂದೆಯನ್ನು ಶಸ್ತ್ರಾಸ್ತ್ರ ಕಾಯಿದೆ ಅಡಿಯಲ್ಲಿ ಬಂಧಿಸಿದ್ದ. ಪೊಲೀಸ್​ ಕಸ್ಟಡಿಯಲ್ಲಿ ತೀವ್ರ ಕಿರುಕುಳದಿಂದಾಗಿ ಆತ ಮೃತಪಟ್ಟಿದ್ದ. ಈ ಎಲ್ಲ ಆರೋಪಗಳು ಸಾಬೀತಾದ್ದರಿಂದ 2020ರಲ್ಲಿ ಸೆಂಗಾರ್​ಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು 10 ಲಕ್ಷ ರೂ. ದಂಡವನ್ನು ವಿಧಿಸಿ ಕೋರ್ಟ್​ ಆದೇಶ ಹೊರಡಿಸಿದೆ.(ಏಜೆನ್ಸೀಸ್​)
ಇನ್ಫೋಸಿಸ್​ ಕಂಪನಿ ಹೆಸರಲ್ಲಿ ಸೈಬರ್​ ಖದೀಮರಿಂದ ಲಕ್ಷಾಂತರ ರೂಪಾಯಿ ವಂಚನೆ

VIDEO: ಈತ ಭಾರತೀಯ, ಆತ ಪಾಕಿಸ್ತಾನಿ… 74 ವರ್ಷಗಳ ಬಳಿಕ ಒಂದಾದ ಸಹೋದರರು! ಭಾವನಾತ್ಮಕ ವಿಡಿಯೋ ವೈರಲ್‌

ಡಿಕೆಶಿಯನ್ನು ಇಂದು ಅರೆಸ್ಟ್ ಮಾಡ್ಲೇ ಬೇಕು, ಇಲ್ಲವಾದಲ್ಲಿ ‘ನಮ್ಮದು ದುರ್ಬಲ ಸರ್ಕಾರ’ ಎಂದು ಒಪ್ಪಿಕೊಳ್ಳುವೆ: ಯೋಗೇಶ್ವರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 + fifteen =
Remember me
