ಮಲಪ್ಪುರಂ:ಪತ್ನಿಗೆ ಹಿಗ್ಗಾಮುಗ್ಗಾ ಥಳಿಸಿದ ಆರೋಪದ ಮೇಲೆ ಕೇರಳದ ಪೊಲೀಸ್​ ಅಧಿಕಾರಿಯೊಬ್ಬರನ್ನು ಕೆಲಸದಿಂದ ಅಮಾನತು ಮಾಡಲಾಗಿದೆ.
ಎನ್​. ಶೈಲೇಶ್​ ಅಮಾನತಗೊಂಡು ಅಧಿಕಾರಿ. ಕೊಂಡಟ್ಟಿಯ ಮೊರಾಯುರ್ ಮೂಲದ ಶೈಲೇಶ್​, ಮಲಪ್ಪುರಂನ ತಿರೂರ್​ ಪೊಲೀಸ್​ ಠಾಣೆಯಲ್ಲಿ ಸಿವಿಲ್​ ಪೊಲೀಸ್​ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ತನಿಖೆಯಲ್ಲಿ ಆರೋಪ ಸಾಬೀತಾದ ಬೆನ್ನಲ್ಲೇ ಅವರನ್ನು ಅಮಾನತು ಮಾಡಲಾಗಿದೆ.
ಶೈಲೇಶ್​ ಮಾರಕವಾಗಿ ದಾಳಿ ಮಾಡಿದ ಪರಿಣಾಮ ಆತನ ಪತ್ನಿ ಗಂಭೀರವಾಗಿ ಗಾಯಗೊಂಡಿದ್ದಲ್ಲದೆ, ಪ್ರಜ್ಞೆಯಿಲ್ಲದೆ ಬಿದ್ದಿದ್ದರು. ಇದನ್ನು ನೋಡಿದ ಮಗ  ತಾಯಿಯ ಸಂಬಂಧಿಕರಿಗೆ ಮಾಹಿತಿ ತಿಳಿಸಿದ್ದಾನೆ. ತಾಯಿಯನ್ನು ಎಷ್ಟೇ ಏಳಿಸಲು ಪ್ರಯತ್ನಿಸಿದರು ಯಾವುದೇ ಪ್ರತಿಕ್ರಿಯೆ ಇಲ್ಲ ಎಂದು ಹೇಳಿದ್ದಾನೆ. ಇದನ್ನು ಕೇಳಿ ತಕ್ಷಣ ಸಂಬಂಧಿಕರು ಸ್ಥಳಕ್ಕೆ ಆಗಮಿಸಿ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಆರೋಪಿ ಶೈಲೇಶ್ ತನ್ನ ಪತ್ನಿಯ ತಲೆಯನ್ನು ಗೋಡೆಗೆ ಬಡಿದಿದ್ದಾನೆ. ಅಲ್ಲದೆ, ಆಕೆಯನ್ನು ಮೃಗದಂತೆ ಕಚ್ಚಿದ್ದಾನೆ. ಪರಿಣಾಮ ಆಕೆಯ ದೇಹದಾದ್ಯಂತ ಗಾಯಗಳಿದ್ದವು. ಆಕೆಯ ಬೆರಳುಗಳೂ ಸಹ ಮುರಿದಿವೆ.
ಸದ್ಯ ಆಕೆಯನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ ಬೆನ್ನಲ್ಲೇ ಪ್ರಕರಣದ ತನಿಖೆಯನ್ನು ಅಪರಾಧ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ. ದಂಪತಿ 2014 ರಲ್ಲಿ ವಿವಾಹವಾದರು.(ಏಜೆನ್ಸೀಸ್​)
BBMPಯ ಲಕ್ಷಾಂತರ ಹಣ ಪ್ರೇಯಸಿ ಖಾತೆಗೆ ಜಮೆ! ಎಸ್​​ಡಿಎ ಸೇರಿ ಇಬ್ಬರ ಬಂಧನ

ಪೈಗಂಬರ್ ವಿರುದ್ಧ ಹೇಳಿಕೆ ಆರೋಪ: ಅಮಾನತುಗೊಂಡ ಶಾಸಕನಿಗೆ ಒಂದೇ ಗಂಟೆಯಲ್ಲಿ ಸಿಗ್ತು ಜಾಮೀನು- ಕೋರ್ಟ್​ ಹೇಳಿದ್ದೇನು?

ದೋಷ ನಿವಾರಣೆ ನೆಪದಲ್ಲಿ ನಕಲಿ ಹೇಯ ಕೃತ್ಯವೆಸಗಿದ ಸ್ವಾಮೀಜಿ-ಪತ್ನಿ! ಐದು ವರ್ಷದಿಂದ ಯುವತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 8 =
Remember me
