ಭೋಪಾಲ್​:ವಯಸ್ಸಾದ ವ್ಯಕ್ತಿಯ ಮೇಲೆ ಪೊಲೀಸ್​ ಕಾನ್ಸ್​ಟೇಬಲ್​ ಓರ್ವ ಮನಬಂದಂತೆ ಥಳಿಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ವಿಡಿಯೋ ವೈರಲ್​ ಆದ ಬೆನ್ನಲ್ಲೇ ರೇವಾ ಜಿಲ್ಲೆಯ ಪೊಲೀಸ್​ ಕಾನ್ಸ್​ಟೇಬಲ್​ನನ್ನು ಅಮಾನತು ಮಾಡಲಾಗಿದೆ. ಮೂಲಗಳ ಪ್ರಕಾರ ಕಾನ್ಸ್​ಟೇಬಲ್​ ತನ್ನ ಸಹ ಪ್ರಯಾಣಿಕರ ಜೊತೆ ರೈಲು ನಿಲ್ದಾಣದಲ್ಲಿ ಇರುವಾಗ ಪಾನಮತ್ತ ವಯಸ್ಸಾದ ವ್ಯಕ್ತಿ ಅಸಭ್ಯವಾಗಿ ವರ್ತಿಸಿದ್ದಾರೆ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಕಾನ್ಸ್​ಟೇಬಲ್​ ಹಿರಿಯ ವ್ಯಕ್ತಿ ಎಂಬುದನ್ನು ನೋಡದೇ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಕಾನ್ಸ್​ಟೇಬಲ್​ನನ್ನು ಅನಂತ್​ ಮಿಶ್ರಾ ಎಂದು ಗುರುತಿಸಲಾಗಿದೆ. ಈ ಘಟನೆ ಮಧ್ಯಪ್ರದೇಶದ ಜಬಲ್​ಪುರ ರೈಲು ನಿಲ್ದಾಣದಲ್ಲಿ ನಡೆದಿದೆ. ಹಿರಿಯ ವ್ಯಕ್ತಿಯ ಮುಖಕ್ಕೆ ಪಂಚ್​ ಮಾಡಿದ್ದಲ್ಲದೆ, ಆತನ ಕಾಲಿಡಿದು ಎಳೆದುಕೊಂಡು ರೈಲ್ವೆ ಪ್ಲಾಟ್​ಫಾರ್ಮ್​ ಮೇಲೆ ನಿಂತು ತೆಲೆಕೆಳಗೆ ಮಾಡಿ ಹಳಿಯ ಮೇಲೆ ಬೀಳಸುವುದಾಗಿ ಎದರಿಸಿದ್ದಾನೆ. ಅಲ್ಲದೆ, ಕಾಲಿನಿಂದ ಒದ್ದಿರುವುದು ವಿಡಿಯೋದಲ್ಲಿದೆ.
Pathetic & Horrible(Jabalpur Station Incidence)pic.twitter.com/JMh356IgXF
— J.J.SaidaiahBabu सैदय्या बाबू సైదయ్యబాబు (@SaidaiahBabuINC)July 29, 2022

ಈ ವಿಡಿಯೋ ವೈರಲ್​ ಆಗುತ್ತಿದ್ದಂತೆ ನೆಟ್ಟಿಗರು ಕಾನ್ಸ್​ಟೇಬಲ್​ ವಿರುದ್ಧ ಕೆಂಡಾಮಂಡಲರಾಗಿದ್ದು, ತರಾಟೆಗೆ ತೆಗೆದುಕೊಂಡಿದ್ದಾರೆ. ತೊಂದರೆ ಕೊಟ್ಟಿದ್ದರೆ, ಬುದ್ಧಿ ಹೇಳಬೇಕು, ಅದನ್ನು ಬಿಟ್ಟು ಈ ರೀತಿ ದೌರ್ಜನ್ಯ ಎಸಗುವುದು ಸರಿಯಲ್ಲ ಎಂದಿದ್ದಾರೆ. ತಕ್ಷಣವೇ ಕಾನ್ಸ್​ಟೇಬಲ್​ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಆಗ್ರಹಿಸಿದ್ದಾರೆ.
ಜಬಲ್‌ಪುರ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರ ಮೇಲೆ ಕಾನ್‌ಸ್ಟೆಬಲ್ ಅನಂತ್ ಮಿಶ್ರಾ ಹಲ್ಲೆ ನಡೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ತನಿಖೆ ನಡೆಸಿದಾಗ, ಕಾನ್‌ಸ್ಟೆಬಲ್ ಅನಂತ್ ಮಿಶ್ರಾ, ರೇವಾ ಜಿಲ್ಲಾ ಪೊಲೀಸ್ ಠಾಣೆಯ ಕಾನ್ಸ್​ಟೇಬಲ್​ ಎಂದು ತಿಳಿದಿದೆ. ಅವರನ್ನು ತಕ್ಷಣ ಅಮಾನತುಗೊಳಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರತಿಮಾ ಪಟೇಲ್ ತಿಳಿಸಿದ್ದಾರೆ.(ಏಜೆನ್ಸೀಸ್​)
ಡಬಲ್ ಎಂಜಿನ್ ಸರ್ಕಾರದಿಂದ ಡಬಲ್ ಗೇಮ್: ಮಾಜಿ ಸಿಎಂ ಎಚ್​.ಡಿ. ಕುಮಾರಸ್ವಾಮಿ ವಾಗ್ದಾಳಿ

ಟಿವಿ ನೋಡುತ್ತಾ ಮ್ಯಾಗಿ ಮಾಡಿ ತಿಂದ ಮಹಿಳೆ ದುರಂತ ಸಾವು! ಇದರ ಮಧ್ಯೆ ನಡೆದಿದ್ದು ಮಹಾ ಎಡವಟ್ಟು

ಚಿಕ್ಕ ವಯಸ್ಸಿನಲ್ಲೇ ಪ್ರೀತಿಸಿ 18 ವರ್ಷ ತುಂಬಿದ ಬಳಿಕ ಮದ್ವೆಯಾದ ಯುವತಿಯ ಬದುಕು ದುರಂತ ಅಂತ್ಯ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − two =
Remember me
