ತಂಜಾವೂರು:ತಮಿಳುನಾಡಿನ ಬ್ಯಾಂಕ್​ ಲಾಕರ್​ ಒಂದರಲ್ಲಿ ಭಾರೀ ಬೆಲೆ ಬಾಳುವ ಪಚ್ಚೆ ಹರಳಿನಿಂದ ಮಾಡಲಾದ ಶಿವಲಿಂಗವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಶಿವಲಿಂಗ ತಂಜಾವೂರು ನಿವಾಸಿಯೊಬ್ಬರಿಗೆ ಸೇರಿದ್ದು ಎಂದು ತಿಳಿದುಬಂದಿದೆ.
ವಶಕ್ಕೆ ಪಡೆದ ಪಚ್ಚೆ ಹರಳಿನ ಶಿವಲಿಂಗದ ಬೆಲೆ ಬರೋಬ್ಬರಿ 500 ಕೋಟಿ ರೂ. ಎಂದು ನಂಬಲಾಗಿದೆ. ದೇವಸ್ಥಾನದ ಮೂರ್ತಿಗಳು ತಂಜಾವೂರಿನ ಅರುಲಂದ ನಗರದ 7ನೇ ಸ್ಟ್ರೀಟ್​ನಲ್ಲಿರುವ ಮನೆಯೊಂದರಲ್ಲಿ ಇದೆ ಎಂಬ ಮಾಹಿತಿ ಪೊಲೀಸರಿಗೆ ಮಾಹಿತಿ ಬಂದಿತ್ತು. ತಕ್ಷಣ ಆ ಮನೆಗೆ ತೆರಳಿದ ಪೊಲೀಸರ ಮನೆ ಮಾಲೀಕ ಎನ್​. ಎಸ್​. ಅರುಣ ಭಾಸ್ಕರ್​ ಎಂಬುವರನ್ನು ವಿಚಾರಿಸಿದ್ದಾರೆ. ತನ್ನ ತಂದೆ ಎನ್.ಎ.ಸಮಿಯಪ್ಪನ್ ಅವರ ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆ ಲಿಂಗವಿದೆ ಎಂದು ಅರುಣ ಭಾಸ್ಕರ್​ ಪೊಲೀಸರಿಗೆ ತಿಳಿಸಿದ್ದಾರೆ ಮೂಲಗಳು ಮಾಹಿತಿ ನೀಡಿವೆ.
ಪಚ್ಚೆ ಲಿಂಗಕ್ಕೆ ತಮ್ಮ ಬಳಿ ಯಾವುದೇ ದಾಖಲೆಗಳು ಇಲ್ಲ ಎಂದು ಭಾಸ್ಕರ್​ ಪೊಲೀಸರಿಗೆ ಹೇಳಿದ್ದಾರೆ. ಇದರ ಬೆನ್ನಲ್ಲೇ ಪೊಲೀಸರು 8 ಸೆ.ಮಿ ಎತ್ತರ ಮತ್ತು 500 ಗ್ರಾಂ ತೂಕದ ಶಿವಲಿಂಗವನ್ನು ಬ್ಯಾಂಕ್​ ಲಾಕರ್​ನಿಂದ ವಶಕ್ಕೆ ಪಡೆದುಕೊಂಡಿದ್ದಾರೆ. ಮೂಲಗಳ ಪ್ರಕಾರ, ತಿರುವರೂರ್ ಜಿಲ್ಲೆಯ ತಿರುಕ್ಕುವಲೈನಲ್ಲಿರುವ ದೇವಾಲಯದಿಂದ ಪಚ್ಚೆ ಲಿಂಗವು ನಾಪತ್ತೆಯಾಗಿರುವ ಬಗ್ಗೆ ಈ ಹಿಂದೆ ದಾಖಲಾಗಿದ್ದ ಎಫ್‌ಐಆರ್ ಬಾಕಿ ಉಳಿದಿದ್ದು, ವಶಪಡಿಸಿಕೊಂಡ ಕಲಾಕೃತಿಯೇ ಅದಕ್ಕೆ ಸಂಬಂಧಿಸಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ಸಿಆರ್​ಪಿಸಿ ಯ ಸೆಕ್ಷನ್ 41 (1) (d) (ಶಂಕಿತ ಕಳುವಾದ ಆಸ್ತಿಯ ಸ್ವಾಧೀನ) ಮತ್ತು ಕಲಂ 102 (ಕದ್ದಿರುವ ಯಾವುದೇ ಆಸ್ತಿಯನ್ನು ಪೊಲೀಸ್ ಅಧಿಕಾರಿ ವಶಪಡಿಸಿಕೊಳ್ಳುವುದು) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹೆಚ್ಚಿನ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ನಿಮಗೆ ಇದುವರೆಗೂ ಎಷ್ಟು ಬ್ರೇಕಪ್​ ಆಗಿದೆ ಎಂದು ಪ್ರಶ್ನಿಸಿದವನಿಗೆ ನಟಿ ಶ್ರುತಿ ಕೊಟ್ಟ ಉತ್ತರ ಹೀಗಿತ್ತು…

ಹೊಸ ವರ್ಷದಂದೇ ತಮ್ಮ ಪ್ರೀತಿಗೆ ಎಳ್ಳು ನೀರು ಬಿಟ್ಟ ನಟಿ ದೀಪ್ತಿ ಸುನೈನಾ: ಎಲ್ಲವೂ ಬಿಗ್​ಬಾಸ್​ ಮಹಿಮೆ!

ಹುಟ್ಟುತ್ತಲೇ ದತ್ತುಪುತ್ರನಾದ ಮಗು: ಲವ್‌ ಸ್ಟೋರಿಗೆ ಟರ್ನಿಂಗ್‌ ಪಾಯಿಂಟ್‌- ಹೆತ್ತವರ ಮದುವೆ ಮಾಡಿಸಿದ ಕಂದಮ್ಮ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × one =
Remember me
