ನವದೆಹಲಿ:ಪ್ರತಿ ತಿಂಗಳ ಕೊನೆಯ ಭಾನುವಾರದಂದು ನಡೆಯುವ ಮನ್​ ಕೀ ಬಾತ್ ಬಾನುಲಿ ರೆಡಿಯೋ ಕಾರ್ಯಕ್ರಮದ 85ನೇ ಹಾಗೂ ಈ ವರ್ಷದ ಮೊದಲನೇ ಆವೃತ್ತಿಯನ್ನು ಉದ್ದೇಶಿಸಿ ಹಲವು ವಿಷಯಗಳ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ಪ್ರಧಾನಿ ಭಾಷಣದ ಮುಖ್ಯಾಂಶಗಳು ಈ ಕೆಳಕಂಡಂತಿವೆ….ದೇಶ ಮತ್ತು ಪ್ರಪಂಚದಾದ್ಯಂತ ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ಮನ್ ಕಿ ಬಾತ್ ಅನ್ನು ಪೋಸ್ಟ್ ಕಾರ್ಡ್ ಮೂಲಕ ನನಗೆ ಕಳುಹಿಸಿದ್ದಾರೆ. ಈ ಪೋಸ್ಟ್‌ಕಾರ್ಡ್‌ಗಳು ನಮ್ಮ ದೇಶದ ಭವಿಷ್ಯಕ್ಕಾಗಿ ನಮ್ಮ ಹೊಸ ಪೀಳಿಗೆಯ ವಿಶಾಲ ಮತ್ತು ಸಮಗ್ರ ದೃಷ್ಟಿಕೋನವನ್ನು ನೀಡುತ್ತವೆ ಎಂದು ಪ್ರಧಾನಿ ಹೇಳಿದರು.
ದೇಶದಲ್ಲಿ ಪದ್ಮ ಪ್ರಶಸ್ತಿಗಳು ಘೋಷಣೆಯಾಗಿವೆ. ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಅನೇಕ ಹೆಸರುಗಳಿವೆ. ಆದರೆ, ಅವರ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ. ಇವರು ನಮ್ಮ ದೇಶದ ಅಸಾಧಾರಣ ವೀರರು. ಇವರು ಸಾಮಾನ್ಯ ಸಂದರ್ಭಗಳಲ್ಲಿ ಅಸಾಮಾನ್ಯ ಕೆಲಸಗಳನ್ನು ಮಾಡಿದ್ದಾರೆ ಎಂದು ಪ್ರಶಸ್ತಿ ಪುರಸ್ಕೃತರನ್ನು ಪ್ರಧಾನಿ ಶ್ಲಾಘಿಸಿದರು.
‘ರಾಷ್ಟ್ರೀಯ ಯುದ್ಧ ಸ್ಮಾರಕ’ದಲ್ಲಿ ಸ್ವಾತಂತ್ರ್ಯ ನಂತರ ಹುತಾತ್ಮರಾದ ದೇಶದ ಎಲ್ಲಾ ವೀರರ ಹೆಸರುಗಳನ್ನು ಕೆತ್ತಲಾಗಿದೆ. ಹುತಾತ್ಮರ ನೆನಪಿನ ಮುಂದೆ ಬೆಳಗುತ್ತಿರುವ ‘ಅಮರ್ ಜವಾನ್ ಜ್ಯೋತಿ’ ಹುತಾತ್ಮರ ಅಮರತ್ವದ ಸಂಕೇತವಾಗಿದೆ ಎಂದು ಸೇನೆಯ ಕೆಲವು ಮಾಜಿ ಸೈನಿಕರು ನನಗೆ ಪತ್ರ ಬರೆದಿದ್ದಾರೆ. ‘ಅಮರ್ ಜವಾನ್ ಜ್ಯೋತಿ’ಯಂತೆ ನಮ್ಮ ಹುತಾತ್ಮರ ಸ್ಫೂರ್ತಿ ಮತ್ತು ಅವರ ಕೊಡುಗೆಯೂ ಅಮರವಾಗಿದೆ. ನಿಮಗೆಲ್ಲರಿಗೂ ಹೇಳುವುದೇನೆಂದರೆ, ಅವಕಾಶ ಸಿಕ್ಕಾಗಲೆಲ್ಲಾ ತಪ್ಪದೇ ‘ರಾಷ್ಟ್ರೀಯ ಯುದ್ಧ ಸ್ಮಾರಕ’ಕ್ಕೆ ಭೇಟಿ ನೀಡಿ. ಇಂಡಿಯಾ ಗೇಟ್ ಬಳಿಯ ‘ಅಮರ್ ಜವಾನ್ ಜ್ಯೋತಿ’ ಮತ್ತು ಹತ್ತಿರದ ‘ರಾಷ್ಟ್ರೀಯ ಯುದ್ಧ ಸ್ಮಾರಕ’ದಲ್ಲಿ ಬೆಳಗಿದ ಜ್ಯೋತಿ ವಿಲೀನಗೊಂಡಿರುವುದನ್ನು ನಾವು ನೋಡಿದ್ದೇವೆ. ಈ ಭಾವನಾತ್ಮಕ ಸಂದರ್ಭದಲ್ಲಿ ದೇಶಕ್ಕಾಗಿ ಪ್ರಾಣ ನೀಡಿದವರ ಕುಟುಂಬಗಳು ಮತ್ತು ದೇಶವಾಸಿಗಳ ಕಣ್ಣಲ್ಲಿ ನೀರು ತುಂಬಿತ್ತು. ಭದ್ರತಾ ಪಡೆಗಳ ಅನೇಕ ಯೋಧರು ನನಗೆ ಪತ್ರಗಳನ್ನು ಬರೆದು ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಅಮರ್ ಜವಾನ್ ಜ್ಯೋತಿಯ ಜ್ವಾಲೆಯನ್ನು ವಿಲೀನಗೊಳಿಸುವ ಕ್ರಮವನ್ನು ಶ್ಲಾಘಿಸಿದರು ಎಂದರು.
ಭ್ರಷ್ಟಾಚಾರ ಎಂಬುದು ಗೆದ್ದಲುಗಳಂತೆ, ಅದನ್ನು ತೆಗೆದುಹಾಬೇಕು. ಇಲ್ಲವಾದಲ್ಲಿ ಎಲ್ಲವನ್ನು ಆವರಿಸಿ ನಾಶ ಮಾಡುತ್ತದೆ ಎಂದು ಅಭಿಪ್ರಾಯಪಟ್ಟ ಪ್ರಧಾನಿ ಮೋದಿ, ಎಲ್ಲಿ ಕರ್ತವ್ಯವೆಂಬ ಭಾವನೆ ಮತ್ತು ಕರ್ತವ್ಯವೇ ಪ್ರಧಾನ ಎಂದು ತಿಳಿದಿರುತ್ತಾರೋ ಅಲ್ಲಿ ಭ್ರಷ್ಟಾಚಾರ ನಡೆಯುವುದಿಲ್ಲ ಎಂದು ಹೇಳಿದರು.
ನನ್ನ ಪ್ರೀತಿಯ ದೇಶವಾಸಿಗಳೇ ಭಾರತವು ಶಿಕ್ಷಣ ಮತ್ತು ಜ್ಞಾನದ ಪವಿತ್ರ ಭೂಮಿಯಾಗಿದೆ. ನಾವು ಶಿಕ್ಷಣವನ್ನು ಪುಸ್ತಕದ ಜ್ಞಾನಕ್ಕೆ ಸೀಮಿತಗೊಳಿಸಿಲ್ಲ, ಆದರೆ ಅದನ್ನು ಜೀವನದ ಸಮಗ್ರ ಅನುಭವವಾಗಿ ನೋಡಿದ್ದೇವೆ. ಪ್ರಕೃತಿಯ ಮೇಲಿನ ಪ್ರೀತಿ ಮತ್ತು ಪ್ರತಿ ಜೀವಿಯ ಬಗ್ಗೆ ಸಹಾನುಭೂತಿಯು ನಮ್ಮ ಸಂಸ್ಕೃತಿ ಮತ್ತು ಸಹಜ ಸ್ವಭಾವವಾಗಿದೆ. ಭಾರತೀಯ ಸಂಸ್ಕೃತಿಯ ವೈವಿಧ್ಯತೆ ಮತ್ತು ಆಧ್ಯಾತ್ಮಿಕ ಶಕ್ತಿಯು ಯಾವಾಗಲೂ ಪ್ರಪಂಚದಾದ್ಯಂತ ಜನರನ್ನು ಆಕರ್ಷಿಸುತ್ತದೆ. ನಮ್ಮ ಸಂಸ್ಕೃತಿ ನಮಗೆ ಮಾತ್ರವಲ್ಲ, ಇಡೀ ಜಗತ್ತಿಗೆ ಅಮೂಲ್ಯವಾದ ಪರಂಪರೆಯಾಗಿದೆ ಎಂದು ಹೇಳಿದರು.
ಸ್ವಚ್ಛತಾ ಅಭಿಯಾನವನ್ನು ನಾವು ಮರೆಯಬಾರದು. ಏಕ ಬಳಕೆಯ ಪ್ಲಾಸ್ಟಿಕ್ ವಿರುದ್ಧದ ಅಭಿಯಾನವನ್ನು ನಾವು ವೇಗಗೊಳಿಸಬೇಕಿದೆ. ‘ಲೋಕಲ್ ಫಾರ್ ವೋಕಲ್’ ಮಂತ್ರ ನಮ್ಮ ಜವಾಬ್ದಾರಿಯಾಗಿದೆ. ಆತ್ಮನಿರ್ಭರ ಭಾರತ ಅಭಿಯಾನಕ್ಕಾಗಿ ನಾವು ಪೂರ್ಣ ಹೃದಯದಿಂದ ಕೆಲಸ ಮಾಡಬೇಕು ಎಂದು ಪ್ರಧಾನಿ ಮೋದಿ ಅವರು ಕರೆ ನೀಡಿದರು. ನಮ್ಮೆಲ್ಲರ ಪ್ರಯತ್ನದಿಂದ ದೇಶವು ಅಭಿವೃದ್ಧಿಯ ಹೊಸ ಎತ್ತರವನ್ನು ತಲುಪುತ್ತದೆ ಎಂದು ಹೇಳಿದರು.(ಏಜೆನ್ಸೀಸ್​)
U19 World Cup: ಬಾಂಗ್ಲಾ ಬಗ್ಗು ಬಡಿದ ಭಾರತ.. 2 ವರ್ಷದ ಹಿಂದಿನ ಸೇಡು ತೀರಿಸಿಕೊಂಡು ಸೆಮೀಸ್​ಗೆ ಲಗ್ಗೆ

ಅಂಡರ್​ 19 ವಿಶ್ವಕಪ್​ ಪಂದ್ಯದ ವೇಳೆ ಭೂಕಂಪನ: ಕ್ಯಾಮೆರಾದಲ್ಲಿ ಸೆರೆಯಾಯ್ತು ಭಯಾನಕ ದೃಶ್ಯ

VIDEO: ಈತನ ದೇಹಕ್ಕಿದೆ ವಿಶೇಷ ಶಕ್ತಿ- 85 ಚಮಚ ಇಟ್ಟುಕೊಂಡು ಗಿನ್ನೆಸ್‌ ದಾಖಲೆ ನಿರ್ಮಾಣ!

ನಾಯಿ ಹುಡುಕುವುದು ಕಷ್ಟವೆಂದ ಪೊಲೀಸರಿಗೆ ಶಾಕ್​ ಕೊಟ್ಟ ಇಂಜಿನಿಯರ್​ ಬ್ರದರ್ಸ್: ಹತ್ತೇ ದಿನದಲ್ಲಿ ಶ್ವಾನ ಪತ್ತೆ​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + six =
Remember me
