ಭೋಪಾಲ್​:ಸಹೋದರಿ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಆಕ್ರೋಶಗೊಂಡ ಸಹೋದರನೊಬ್ಬ ಅವರನ್ನು ಮಿನಿ ಟ್ರಕ್​ನಲ್ಲಿ ಹಿಂಬಾಲಿಸಿ ಹೋಗಿ ಡಿಕ್ಕಿ ಹೊಡೆದಿರುವ ಸಿನಿಮೀಯ ಘಟನೆ ಮಧ್ಯಪ್ರದೇಶದ ಭೋಪಾಲ್​ನ ಅಯೋಧ್ಯ ನಗರದಲ್ಲಿ ನಡೆದಿದೆ.
ತಂಗಿಯ ಮೇಲಿನ ಅನುಮಾನದಿಂದ ಆಕೆ ಮನೆಯಿಂದ ಹೊರ ಹೋದಾಗ ಸಹೋದರ ಆಕೆಯನ್ನು ಹಿಂಬಾಲಿಸಿದ್ದಾನೆ. ಆಕೆ ತನ್ನ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುವುದನ್ನು ನೋಡಿ ಹೇಗಾದರೂ ಮಾಡಿ ಇಬ್ಬರನ್ನು ಹಿಡಿಯಬೇಕೆಂದು ಮಿನಿ ಟ್ರಕ್​ನಲ್ಲಿ ಚೇಸ್​ ಮಾಡಿದ್ದಾನೆ.
ಮೊದಲು ಇಬ್ಬರನ್ನು ತಡೆಯಬೇಕೆಂದು ಯತ್ನಿಸಿದ್ದಾನೆ. ಆದರೆ, ಅಣ್ಣನನ್ನು ನೋಡಿದ ತಂಗಿ ಬೈಕ್​ ಅನ್ನು ವೇಗವಾಗಿ ಓಡಿಸುವಂತೆ ಹೇಳಿದ್ದಾಳೆ. ಕೊನೆಗೆ ಹೇಗಾದರೂ ಮಾಡಿ ಹಿಡಿಯಲೇ ಬೇಕೆಂಬ ನಿರ್ಧಾರಕ್ಕೆ ಬಂದ ಸಹೋದರ ವೇಗವಾಗಿ ಹೋಗಿ ಬೈಕ್​ಗೆ ಡಿಕ್ಕಿ ಹೊಡೆದು ಇಬ್ಬರನ್ನು ಕೆಳಗೆ ಬೀಳಿಸಿದ್ದಾನೆ. ಈ ದೃಶ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸರೆಯಾಗಿದ್ದು, ಜಾಲತಾಣದಲ್ಲಿ ವೈರಲ್​ ಆಗಿದೆ.
ಘಟನೆಯಲ್ಲಿ ಯುವತಿ ಮತ್ತು ಬಾಯ್​ಫ್ರೆಂಡ್​ಗೆ ಗಾಯಗಳಾಗಿವೆ. ಇಬ್ಬರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರು ಕೂಡ ದೂರು ದಾಖಲಿಸಿದ್ದು, ಕೊಲೆಗೆ ಯತ್ನಿಸಿದ ಆರೋಪದ ಮೇಲೆ ಯುವತಿಯ ಸಹೋದರನನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಭೋಪಾಲ್​: ಸಹೋದರಿ ಬಾಯ್​ಫ್ರೆಂಡ್​ ಜತೆ ಬೈಕ್​ನಲ್ಲಿ ಹೋಗುತ್ತಿರುವುದನ್ನು ನೋಡಿ ಆಕ್ರೋಶಗೊಂಡ ಸಹೋದರನೊಬ್ಬ ಅವರನ್ನು ಮಿನಿ ಟ್ರಕ್​ನಲ್ಲಿ ಹಿಂಬಾಲಿಸಿ ಹೋಗಿ ಡಿಕ್ಕಿ ಹೊಡೆದಿರುವ ಸಿನಿಮೀಯ ಘಟನೆ ಮಧ್ಯಪ್ರದೇಶದ ಭೋಪಾಲ್​ನ ಅಯೋಧ್ಯ ನಗರದಲ್ಲಿ ನಡೆದಿದೆ.#BhopalLovers#Bike#Brother#Sister#Lovers#Accidentpic.twitter.com/wUnBat8suf
— Vijayavani (@VVani4U)April 22, 2022

ಲಕ್ಷಾಂತರ ಮೌಲ್ಯದ ಅವಧಿ ಮೀರಿದ ಮಾತ್ರೆಗಳು ಹೊಸಪೇಟೆ ಹೊರವಲಯದಲ್ಲಿ ಪತ್ತೆ: ಸಾರ್ವಜನಿಕರ ಆಕ್ರೋಶ

ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ

5 ವರ್ಷದ ಮಕ್ಕಳಿಗೂ ಲಸಿಕೆ; ಕೊರ್ಬೆವ್ಯಾಕ್ಸ್ ನೀಡಲು ಕೇಂದ್ರದ ತಜ್ಞರ ಸಮಿತಿ ಶಿಫಾರಸು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
