ನ್ಯೂಯಾರ್ಕ್​​:ನೆರೆಮನೆಯವರಿಂದ ಸ್ವೀಕರಿಸಿದ ಪತ್ರವೊಂದರಲ್ಲಿದ್ದ ಬರವಣಿಗೆಯನ್ನು ನೋಡಿ ದಂಪತಿಯ ಮುಖ ಕೆಂಪಾದ ಪ್ರಸಂಗವೊಂದು ಬೆಳಕಿಗೆ ಬಂದಿದೆ.
“ಕಾಂಡೋ ಕಟ್ಟಡದಲ್ಲಿ ವಾಸಿಸುವುದು ಎಂದರೆ ನೀವು ಸಾಮಾನ್ಯವಾಗಿ ನಿಮ್ಮ ನೆರೆಹೊರೆಯವರಿಗಿಂತ ಹತ್ತಿರವಾಗಲು ಒಲವು ತೋರುತ್ತೀರಿ” ಎಂಬ ಪದದೊಂದಿಗೆ ಪತ್ರವು ಆರಂಭವಾಗುತ್ತದೆ.
ನಮ್ಮ ಕಟ್ಟಡದ ಸಂಪೂರ್ಣ ವಿಭಿನ್ನ ಪ್ರದೇಶದಲ್ಲಿ ನಾನು ವಾಸಿಸುತ್ತಿದ್ದರೂ ನೀವು ಸೆಕ್ಸ್​ ಮಾಡುವಾಗ ನಿಮ್ಮ ಉದ್ಘಾರದ ಜೋರಾದ ಶಬ್ದ ಈಗಲೂ ನನ್ನ ಕಿವಿಗೆ ಬಡಿಯುತ್ತಿದೆ. ನನ್ನ ಬಗ್ಗೆ ತಪ್ಪು ತಿಳಿದುಕೊಳ್ಳಬೇಡಿ. ನೀವು ಶ್ರೇಷ್ಠ ಲೈಂಗಿಕ ಜೀವನ ಹೊಂದಿರುವ ಬಗ್ಗೆ ನನಗೂ ಖುಷಿ ಇದೆ. ಆದರೆ, ನಿಮ್ಮನ್ನು ನಿಶ್ಯಬ್ದವಾಗಿ ಇರಲು ಹೇಳಿದಾಗ ನಮ್ಮ ಕಟ್ಟಡದ ಅನೇಕರೊಂದಿಗೆ ನಾನು ಮಾತನಾಡಬಹುದೆಂದು ಭಾವಿಸಿದ್ದೇನೆ ಎಂದು ಪತ್ರದಲ್ಲಿ ಉಲ್ಲೇಖಿಸಿದಲಾಗಿದೆ.
ಹೊರಭಾಗದಲ್ಲಿ ಆ ಮಹಿಳೆ ಯಾಕೆ ಆ ರೀತಿ ಕಿರುಚುತ್ತಿದ್ದಾಳೆಂದು ನನ್ನ 5 ವರ್ಷದ ಮಗಳು ಪ್ರಶ್ನಿಸಿದಾಗ ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ. ಯಾವ ರೀತಿ ಉದ್ಘಾರದ ಶಬ್ದ ಬರುತ್ತಿದೆ ಅಂದರೆ, ಅದರಿಂದ ಯಾರು ಸಹ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪತ್ರದಲ್ಲಿ ಬರೆಯಲಾಗಿದೆ.
ಸೆಕ್ಸ್​ ಮಾಡುವಾಗ ನರಳುವಿಕೆ ಮತ್ತು ಲೈಂಗಿಕ ಶಬ್ದಗಳನ್ನು ದಯವಿಟ್ಟು ಮೇಲ್ವಿಚಾರಣೆ ಮಾಡಿ ಎಂದು ನಿಮ್ಮ ಬಳಿ ಕೇಳಿಕೊಳ್ಳುತ್ತೇವೆ ಎನ್ನುವ ಮೂಲಕ ಪತ್ರದ ಬರವಣಿಗೆಗೆ ಅಂತ್ಯವಾಡಿದ್ದಾರೆ.
ಇದೀಗ ಆ ಪತ್ರವನ್ನು ರೆಡಿಟ್​ ಜಾಲತಾಣದಲ್ಲಿ ಶೇರ್​ ಮಾಡಿಕೊಂಡಿದ್ದು, ಭಾರಿ ವೈರಲ್​ ಆಗಿದೆ. ಶಬ್ದ ಕಡಿಮೆ ಮಾಡದಿದ್ದರೆ, ದೂರು ನೀಡಿ ಪೊಲೀಸರನ್ನು ಕರೆಯಿಸಿ ಎಂದು ನೆಟ್ಟಿಗನೊಬ್ಬ ಸಲಹೆ ನೀಡಿದ್ದಾನೆ. ಇನ್ನೊಬ್ಬ ನೀವು ಕೇಳುವುದನ್ನು ಮೊದಲು ನಿಲ್ಲಿಸಬೇಕೆಂದಿದ್ದಾನೆ. ಹೀಗೆ ಸಾಕಷ್ಟು ಕಾಮೆಂಟ್​ಗಳು ಹರಿದುಬರುತ್ತಿದೆ.(ಏಜೆನ್ಸೀಸ್​)
ಹೆಚ್ಚುತ್ತಿದೆ ಅವಧಿಪೂರ್ವ ಶಿಶುಗಳ ಜನನ: ಮರಣ ಪ್ರಮಾಣವೂ ಏರಿಕೆ

ಪತಿ ಶಾಸಕ, ಪತ್ನಿ ಅದೇ ಕ್ಷೇತ್ರದ ತಹಸೀಲ್ದಾರ್!

ಕರೊನಾ ನಿಯಂತ್ರಣಕ್ಕೆ ಗೋಮೂತ್ರ ಸೇವಿಸಲು ಕರೆ ಕೊಟ್ಟ ಬಿಜೆಪಿ ಶಾಸಕ: ಕುಡಿಯುವ ಕ್ರಮ ಹೀಗಿರಬೇಕಂತೆ!

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:2 × 2 =
Remember me
