ಆಲಪ್ಪುಳ:ಇಲ್ಲಿನ ಮೆಡಿಕಲ್​ ಕಾಲೇಜಿನ ಕರೊನಾ ವಾರ್ಡಿನಲ್ಲಿ ಮದುವೆಯಾಗಿದ್ದ ದಂಪತಿ ಇದೀಗ ತಮ್ಮ ಕುಟುಂಬಗಳ ಎದುರು ಮತ್ತೊಮ್ಮೆ ಸಪ್ತಪದಿ ತುಳಿದಿದ್ದಾರೆ.
ವಧು ಅಭಿರಾಮಿ ಪಿಪಿಇ ಕಿಟ್ ಧರಿಸಿ ಕೋವಿಡ್​ ವಾರ್ಡ್​ಗೆ ತೆರಳಿ ವರ ಸರತ್​ ಮೊನ್​ರನ್ನು ವರಿಸಿದ್ದರು. ಕಳೆದ ಏಪ್ರಿಲ್​ನಲ್ಲಿ ಕರೊನಾ ಪಾಸಿಟಿವ್​ನಿಂದ ಆಸ್ಪತ್ರೆಗೆ ದಾಖಲಾಗಿದ್ದ ವೇಳೆ ಮದುವೆ ನಡೆದಿತ್ತು. ಇದೀಗ ಮತ್ತೊಮ್ಮೆ ತಮ್ಮ ಕುಟುಂಬಸ್ಥರ ಆಶೀರ್ವಾದದೊಂದಿಗೆ ಮತ್ತೆ ವಿವಾಹವಾಗಿದ್ದಾರೆ.
ಕಳೆದ ಏಪ್ರಿಲ್​ 25ರಂದೇ ಸರತ್​ ಮತ್ತು ಅಭಿರಾಮಿ ಮದುವೆ ನಡೆಯಬೇಕಿತ್ತು. ಆದರೆ, ಸರತ್​ ಕರೊನಾ ಬಂದಿದ್ದರಿಂದ ಸಾಧ್ಯವಾಗಿರಲಿಲ್ಲ. ಇದೇ ವೇಳೆಗೆ ಸರತ್​ ತಾಯಿಗೂ ಕರೊನಾ ಸೋಂಕು ತಗುಲಿತ್ತು. ಆದರೂ ಅದೇ ದಿನ ಪಿಪಿಇ ಕಿಟ್​ ಧರಿಸಿಕೊಂಡು ಹೋಗಿದ್ದ ಅಭಿರಾಮಿ ಕೋವಿಡ್​ ವಾರ್ಡಿನಲ್ಲೇ ಮದುವೆ ಆಗಿದ್ದರು.
ಬಳಿಕ ಅಭಿರಾಮಿ ತನ್ನ ಆಂಟಿ ಮನೆಗೆ ಬಂದು ಉಳಿದುಕೊಂಡಿದ್ದರು. ಇತ್ತ ಸರತ್​ ಸಹ ಗುಣಮುಖರಾಗಿ ಮನೆಗೆ ಮರಳಿದ್ದರು. ಅಂತಿಮವಾಗಿ ಇಬ್ಬರು ತಮ್ಮ ಕನಸಿನಂತೆಯೇ ಹಿರಿಯ ಆಶೀರ್ವಾದದೊಂದಿಗೆ ಸಾಂಪ್ರದಾಯುತವಾಗಿ ಇಂದು ಮದುವೆ ಆಗಿದ್ದಾರೆ. ಅಭಿರಾಮಿ ಅವರ ಮನೆಯಲ್ಲೇ ಮದುವೆ ನಡೆದಿದೆ.
ಸರತ್​ ಮೊನ್ ಕತಾರ್​ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸರತ್​ ಆಲಪ್ಪುಳ ಮೂಲದವರಾಗಿದ್ದು, ಅಭಿರಾಮಿ ತೆಕ್ಕಾನಾರ್ಯಡು ಮೂಲದವರು.(ಏಜೆನ್ಸೀಸ್​)
ಒಂದೇ ರಾಜ್ಯದ ನಾಲ್ವರು ಶಾಸಕರನ್ನು ಬಲಿ ಪಡೆದ ಕರೊನಾ! ಬಿಜೆಪಿಯ ಗೋತಮ್‌ ಲಾಲ್‌ ಸಾವು

ಮಳೆಯಲ್ಲಿ ನೆನೆದು ಕೂಲ್‌ ಕೂಲ್‌ ಆದ ನಟಿ ದೀಪಿಕಾ ವಿಡಿಯೋ ನೋಡಿ ಗರಂ ಗರಂ ಆದ ನೆಟ್ಟಿಗರು!

ಪುರುಷ ಮೃತಪಟ್ಟರೆ ಎರಡನೆಯ ಹೆಂಡತಿ, ಮಕ್ಕಳಿಗೆ ಆಸ್ತಿ ಸಿಗತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:sixteen + four =
Remember me
