ನವದೆಹಲಿ​:ದೇಶದ ಮೊದಲ ಕೋವಿಡ್​ 19 ಔಷಧ ಕೋವಾಕ್ಸಿನ್​​ ಅನ್ನು 2 ವರ್ಷದ ಮಕ್ಕಳಿಂದ 18 ವರ್ಷದ ವಯೋಮಾನದವರಿಗೆ ತುರ್ತುಬಳಕೆಗೆ ತಜ್ಞರ ಸಮಿತಿ ಮಂಗಳವಾರ ಅನುಮೋದನೆ ನೀಡಿದೆ.
ಹೈದರಾಬಾದ್ ಮೂಲದ ಭಾರತ್ ಬಯೋಟೆಕ್​ ಎಂಬ ಲಸಿಕೆ ಉತ್ಪಾದಕ ಕಂಪನಿ ಕೋವಾಕ್ಸಿನ್​ ಅನ್ನು ಅಭಿವೃದ್ಧಿಪಡಿಸಿದೆ. ಸೆಪ್ಟೆಂಬರ್‌ನಲ್ಲಿ 18 ವರ್ಷದೊಳಗಿನ ಮಕ್ಕಳ ಮೇಲೆ ಕೋವಾಕ್ಸಿನ್‌ನ 2 ಮತ್ತು 3ನೇ ಹಂತದ ಪ್ರಯೋಗಗಳನ್ನು ಭಾರತ್​ ಬಯೋಟೆಕ್​ ಪೂರ್ಣಗೊಳಿಸಿತು. ಈ ತಿಂಗಳ ಆರಂಭದಲ್ಲಿ ಪ್ರಯೋಗದ ವರದಿಯನ್ನು ಡ್ರಗ್ಸ್ ಮತ್ತು ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಗೆ ಸಲ್ಲಿಸಲಾಗಿತ್ತು
ಪ್ರಯೋಗದ ವರದಿಯ ಮೇಲೆ ನಡೆದ ವಿವರವಾದ ಚರ್ಚೆಯ ಬಳಿಕ 2 ರಿಂದ 18 ವರ್ಷದ ವಯೋಮಾನದವರಿಗೆ ತುರ್ತು ಬಳಕೆಗೆ ಕೋವಾಕ್ಸಿನ್​ ಲಸಿಕೆಗೆ ತಜ್ಞರ ಸಮಿತಿ ಅನುಮೋದನೆ ನೀಡಿದೆ. ಮೊದಲು ಮತ್ತು ಎರಡನೇ ಡೋಸ್​ಗಳ ನಡುವಿನ ಅಂತರ 20 ದಿನಗಳಿರಬೇಕೆಂದು ಸಮಿತಿ ಸಲಹೆ ನೀಡಿದೆ.
ಆದರೆ, ಡಬ್ಲ್ಯುಎಚ್‌ಒ ಕೋವಾಕ್ಸಿನ್‌ಗೆ ತುರ್ತು ಬಳಕೆಯ ಅಧಿಕಾರವನ್ನು ಇನ್ನೂ ನೀಡಿಲ್ಲ. ಭಾರತ್ ಬಯೋಟೆಕ್ ಜುಲೈ 9 ರೊಳಗೆ ಡಬ್ಲ್ಯುಎಚ್‌ಒಗೆ ಪಟ್ಟಿ ಮಾಡಲು ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಸಲ್ಲಿಸಿದೆ ಎಂದು ವರದಿಯಾಗಿದೆ. ಆದರೆ. ಈವರೆಗೂ ಅನುಮತಿ ನೀಡಿಲ್ಲ. ಅಂದಾಜು ಆರು ವಾರಗಳು ತೆಗೆದುಕೊಳ್ಳುವ ಡಬ್ಲ್ಯುಎಚ್‌ಒ ಪರಿಶೀಲನಾ ಪ್ರಕ್ರಿಯೆಯು ಜುಲೈ ಅಂತ್ಯದ ವೇಳೆಗೆ ಆರಂಭವಾಗಿದೆ.(ಏಜೆನ್ಸೀಸ್​)
ಜನರ- ಜನಪ್ರತಿನಿಧಿಗಳ ದೂರವಾಣಿ ಕರೆ ಸ್ವೀಕರಿಸದ ಸರ್ಕಾರಿ ಅಧಿಕಾರಿಗಳಿಗೆ ಕಾದಿದೆ ಆಪತ್ತು

ಟಿ20 ವಿಶ್ವಕಪ್​ಗೆ ಕೆಲವೇ ದಿನಗಳಿರುವಾಗಲೇ ಭಾರತದ ಬಗ್ಗೆ ಶಾಕಿಂಗ್​ ಹೇಳಿಕೆ ನೀಡಿದ ಪಾಕ್​ ಪ್ರಧಾನಿ

ಸೋಲದೇವನಹಳ್ಳಿಯ ನಾಲ್ವರು ಮಕ್ಕಳು ಪತ್ತೆ: ಪೊಲೀಸರ ಬಳಿ ಮನದ ನೋವನ್ನ ಎಳೆಎಳೆಯಾಗಿ ಬಿಚ್ಚಿಟ್ಟ ಮಕ್ಕಳು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − five =
Remember me
