ನವದೆಹಲಿ:ಕರೊನಾ ಸಾಂಕ್ರಮಿಕವು ಇನ್ನು ಅಂತ್ಯಗೊಂಡಿಲ್ಲ ಮತ್ತು ಅಂತ್ಯಗೊಳ್ಳುವ ಹತ್ತಿರದಲ್ಲಿಯೂ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಎಚ್​ಒ)ಯ ಮುಖ್ಯಸ್ಥ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಮಂಗಳವಾರ​ ಎಚ್ಚರಿಸಿದ್ದಾರೆ.
ಕೆಲವು ದೇಶಗಳಲ್ಲಿ ಕಡಿಮೆ ಲಸಿಕೀಕರಣ ಕುರಿತು ಕಾಳಜಿ ವ್ಯಕ್ತಪಡಿಸಿರುವ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರು ಕರೊನಾ ರೂಪಾಂತರಿ ಒಮಿಕ್ರಾನ್​ ವೇಗದ ಹರಡುವಿಕೆಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಇಡೀ ವಿಶ್ವವನ್ನು ಗುಡಿಸಿ ಗುಂಡಾಂತರ ಮಾಡುವುದನ್ನು ಒಮಿಕ್ರಾನ್​ ಮುಂದುವರಿಸಿದೆ. ಕಡಿಮೆ ಲಸಿಕೀಕರಣ ಹೊಂದಿರುವ ದೇಶಗಳ ಮೇಲೆ ಕಳವಳ ವ್ಯಕ್ತವಾಗಿದೆ. ಲಸಿಕೆ ಪಡೆಯದ ಜನರಲ್ಲಿ ಗಂಭೀರವಾದ ಅನಾರೋಗ್ಯ ಮತ್ತು ಸಾವಿನ ಅಪಾಯದ ಪ್ರಮಾಣ ಹೆಚ್ಚಾಗಿರುತ್ತದೆ ಎಂದಿದ್ದಾರೆ.
ಸೋಂಕಿನ ಅಪಾಯವನ್ನು ತಗ್ಗಿಸುವಲ್ಲಿ ನಿಮ್ಮ ಪ್ರಯತ್ನವೂ ಇರಬೇಕೆಂದು ಜನರನ್ನು ಕೋರಿರುವ ಘೆಬ್ರೆಯೆಸಸ್ ಅವರು ಆರೋಗ್ಯ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆಗೊಳಿಸಲು ಮನವಿ ಮಾಡಿದ್ದಾರೆ.
Omicron continues to sweep the 🌍. I remain concerned about countries with low vaccination rates, as unvaccinated people are many times more at risk of severe illness & death. I urge everyone to do their best to reduce risk of infection & help take pressure off health systems.pic.twitter.com/CymL7Vxvel
— Tedros Adhanom Ghebreyesus (@DrTedros)January 18, 2022

ಒಮಿಕ್ರಾನ್​ ಸೋಂಕು ಸೌಮ್ಯ ಸ್ವಭಾವದ್ದು ಅಂತಾ ಕೆಲವರು ಅಂದುಕೊಂಡಿದ್ದಾರೆ. ಆದರೆ, ಇದು ಸೌಮ್ಯ ಸ್ವಭಾವದ್ದಲ್ಲ. ಇದು ನವೆಂಬರ್​ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾಗಿದ್ದು, ತೀವ್ರ ವೇಗವಾಗಿ ಕಾಡ್ಗಿಚ್ಚಿನಂತೆ ಇಡೀ ವಿಶ್ವವನ್ನೇ ಆವರಿಸುತ್ತಿದೆ. ಈ ಹೊಸ ರೂಪಾಂತರವು ಹಿಂದಿನ ತಳಿಗಳಿಗಿಂತ ಹೆಚ್ಚು ಸಾಂಕ್ರಾಮಿಕವಾಗಿದೆ ಆದರೆ, ಕಡಿಮೆ ಗಂಭೀರವಾದ ರೋಗವನ್ನು ಉಂಟುಮಾಡುತ್ತದೆ. ಆದರೂ, ಇದನ್ನು ನಿರ್ಲಕ್ಷಿಸುವಂತಿಲ್ಲ. ಈಗಲೇ ಬಿಟ್ಟುಕೊಡುವುದು ಸರಿಯಿಲ್ಲ. ಇನ್ನು ಸಾಂಕ್ರಮಿಕ ಅಂತ್ಯವಾಗಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
ಸಂಕ್ರಾಂತಿ ಹಬ್ಬ ಮುಗಿಸಿ ರೈಲನ್ನೇರಿದ ಜೂ. ಕಲಾವಿದೆ ದುರಂತ ಸಾವು: ಸವಿನಿದ್ದೆಯೇ ಸಾವಾಗಿ ಬಂತು!

ಬರೋಬ್ಬರಿ 10 ವರ್ಷ ಸರ್ಕಾರದ ಕಣ್ಣಿಗೆ ಮಣ್ಣೆರಚಿ ಸರ್ಕಾರಿ ಸಂಬಳ ಗಿಟ್ಟಿಸಿದ ಈತ ಸಿಕ್ಕಿಬಿದ್ದಿದ್ದೇ ರೋಚಕ!

ಧನುಷ್​-ಐಶ್ವರ್ಯಾ ನಡುವೆ ನಡೆಯುತ್ತಿತ್ತು ಜಗಳ: ಡಿವೋರ್ಸ್​ಗೆ ಅಸಲಿ ಕಾರಣ ಬಿಚ್ಚಿಟ್ಟ ಸ್ನೇಹಿತರು!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:19 − 10 =
Remember me
