ಬರಿಪದಾ:ಶೌಚಗೃಹದ ಬಳಿ ಕರೊನಾ ರೋಗಿಗಳು ನಗ್ನವಾಗಿ ಮಲಗಿರುವುದು ಮತ್ತು ರೋಗಿಯ ಹಾಸಿಗೆಯ ಮೇಲೆ ಊಟದ ತಟ್ಟೆಗಳು ಹರಡಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಘಟನೆ ಒಡಿಶಾದ ಬರಿಪದಾ ಪಟ್ಟಣದ ಬಂಕಿಶೋಲಾದಲ್ಲಿರುವ ಕಿಮ್ಸ್​ ಕೋವಿಡ್​ ಆಸ್ಪತ್ರೆಯಲ್ಲಿ ನಡೆದಿದ್ದು, ವೈರಲ್​ ವಿಡಿಯೋ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ಆಸ್ಪತ್ರೆಗೆ ದಾಖಲಾಗಿರುವ ರೋಗಿಯ ಸಂಬಂಧಿಕರೊಬ್ಬರು ಈ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ವಿಡಿಯೋ ಖಚಿತತೆ ಬಗ್ಗೆ ಆಸ್ಪತ್ರೆಯ ಆಡಳಿತ ಮಂಡಳಿ ಇನ್ನು ಹೇಳಿಕೆ ನೀಡಬೇಕಿದೆ. ಘಟನೆಯಿಂದ ಆತಂಕಗೊಂಡಿರುವ ಸ್ಥಳೀಯರು ಜಿಲ್ಲೆಯಲ್ಲಿರುವ ಕೋವಿಡ್​ ಮ್ಯಾನೇಜ್​ಮೆಂಟ್​ ಕುರಿತು ಪ್ರಶ್ನೆಯೆತ್ತಿದ್ದಾರೆ.
ಆಸ್ಪತ್ರೆಯಲ್ಲಿ ಸಾವಿಗೀಡಾದ ರೋಗಿಯೊಬ್ಬರ ಸೇವಕರು ರೋಗಿಗಳನ್ನು ನೋಡಿಕೊಳ್ಳಲು ದಾದಿಯರಾಗಲಿ ಅಥವಾ ವೈದ್ಯರಾಗಲಿ ಇಲ್ಲ ಎಂದು ಹೇಳಿದ್ದಾರೆ. ಕೆಲವು ಆಮ್ಲಜನಕ ಸಿಲಿಂಡರ್‌ಗಳಿವೆ ಆದರೆ ಅವುಗಳನ್ನು ನಿರ್ವಹಿಸಲು ಯಾರೂ ಇಲ್ಲ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಬರಿಪಡಾದ ಬಿಜೆಪಿ ಶಾಸಕ ಪ್ರಕಾಶ್ ಸೊರೆನ್, ಬ್ಯಾಂಕಿಸೋಲ್‌ನ ಕೋವಿಡ್ ಆಸ್ಪತ್ರೆಯಲ್ಲಿ ರೋಗಿಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದಾರೆ. ಆಮ್ಲಜನಕದ ಬೆಂಬಲವಿಲ್ಲದ, ಹಲವಾರು ರೋಗಿಗಳು ಸಾಯುತ್ತಿದ್ದಾರೆ. ದಾದಿಯರು ಸೋಂಕಿನ ಭಯದಿಂದ ಅವರ ಹತ್ತಿರ ಬರುತ್ತಿಲ್ಲ. ಈ ಪರಿಸ್ಥಿತಿಯಿಂದಾಗಿ ರೋಗಿಗಳಿಗೆ ಸಮಯಕ್ಕೆ ಸರಿಯಾಗಿ ಆಹಾರವೂ ಸಿಗುತ್ತಿಲ್ಲ ಎಂದು ಆರೋಪಿಸಿದರು.(ಏಜೆನ್ಸೀಸ್​)
ಲಾಕ್‌ಡೌನ್‌ನಲ್ಲಿ ರಸ್ತೆಯ ಮೇಲೆ ಏಲಿಯನ್‌? ಬೆಚ್ಚಿಬಿದ್ದ ವಾಹನ ಸವಾರರು: ವಿಡಿಯೋ ವೈರಲ್‌
ಪ್ರೀತಿಸಿದ್ದಕ್ಕೆ ದಲಿತ ಯುವಕನಿಗೆ ಚಪ್ಪಲಿ ಹಾರ ಹಾಕಿ ತಲೆ ಬೋಳಿಸಿ ಮೆರವಣಿಗೆ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
