ಲಖನೌ:ಉತ್ತರ ಪ್ರದೇಶದ ಎತವಾ ಜಿಲ್ಲೆಯ ತಾಖಾ ತಾಲೂಕಿನ ಆರೋಗ್ಯ ಕೇಂದ್ರದಲ್ಲಿ ಗೃಹ ಸಚಿವ ಅಮಿತ್​ ಷಾ, ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಸಾರಿಗೆ ಸಚಿವ ನಿತಿನ್​ ಗಡ್ಕರಿ ಮತ್ತು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವ ಪಿಯುಷ್​ ಗೋಯೆಲ್​ ಹೆಸರಿನಲ್ಲಿ ಕೋವಿಡ್ ಲಸಿಕಾ​ ಪ್ರಮಾಣ ಪತ್ರಗಳನ್ನು ನೀಡಿದ್ದು, ಸರ್ಕಾರ ತನಿಖೆ ಆದೇಶಿಸಿದೆ.

ಈ ಬೆಳವಣಿಗೆಯ ಹಿಂದೆ ಏನೋ ಪಿತೂರಿ ಇರುವುದರ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಅಧಿಕಾರಿಗಳು ವಿತರಣೆ ಆಗಿರುವ ಪ್ರಮಾಣ ಪತ್ರಗಳು ನಕಲಿ ಎಂದು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

ನಕಲಿ ಎನ್ನಲಾದ ಪ್ರಮಾಣ ಪತ್ರದಲ್ಲಿ ಅಮಿತ್​ ಷಾ ವಯಸ್ಸನ್ನು 33 ಎಂದು ಉಲ್ಲೇಖಿಸಲಾಗಿದೆ. ನಿತಿನ್​ ಗಡ್ಕರಿ 30, ಪಿಯೂಷ್​ ಗೋಯೆಲ್​ 37 ಮತ್ತು ಓಂ ಬಿರ್ಲಾ 26 ವರ್ಷ ಎಂದು ಉಲ್ಲೇಖಿಸಲಾಗಿದೆ. ಇವರು ಡಿ. 12ರಂದು ಎತವಾದ ಆರೋಗ್ಯ ಕೇಂದ್ರದಲ್ಲಿ ಕೋವಿಡ್​ ಲಸಿಕೆಯ ಮೊದಲ ಡೋಸ್​ ಅನ್ನು ಪಡೆದುಕೊಂಡಿದ್ದಾರೆ ಎಂದು ಬರೆಯಲಾಗಿದೆ ಮತ್ತು 2022ರ ಮಾರ್ಚ್​ 5 ಮತ್ತು 2022ರ ಏಪ್ರಿಲ್​ 3ರ ನಡುವೆ ಎರಡನೇ ಡೋಸ್​ ನಿಗದಿ ಮಾಡಲಾಗಿದೆ.

ಈ ಬಗ್ಗೆ ಆರೋಗ್ಯ ಕೇಂದ್ರದ ಸಿಬ್ಬಂದಿಯನ್ನು ಪ್ರಶ್ನಿಸಿದಾಗ ನಮ್ಮ ಲಾಗಿನ್​ ಐಡಿ ಡಿ.12ರಂದು ಹ್ಯಾಕ್​ ಮಾಡಲಾಗಿತ್ತು ಎಂದು ಉತ್ತರ ನೀಡಿದ್ದಾರೆ. ಸದ್ಯ ಈ ಪ್ರಕರಣ ಭಾರೀ ಸದ್ದು ಮಾಡಿದ್ದು, ತನಿಖೆ ನಡೆಯುತ್ತಿದೆ.(ಏಜೆನ್ಸೀಸ್​)

ಚಲಿಸುತ್ತಿದ್ದ ಆಟೋ ಮೇಲೆ ಕಂಟೈನರ್​ ಬಿದ್ದು ಸ್ಥಳದಲ್ಲೇ ನಾಲ್ವರ ದುರ್ಮರಣ

ಸರ್ಕಾರಿ ಕೆಲ್ಸಕ್ಕೆ ಸೇರಿದ ಎಂಟೇ ದಿನಕ್ಕೆ ಯುವತಿ ದುರ್ಮರಣ: ದಿನಗೂಲಿ ನೌಕರನ ಆಸೆಗೆ ಬಲಿಯಾಯ್ತು ಜೀವ

ಮುತ್ತಪ್ಪ ರೈ ಆಸ್ತಿ ಮಾರಾಟಕ್ಕೆ ಹೈಕೋರ್ಟ್ ತಡೆಯಾಜ್ಞೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eleven =
Remember me
