ಭೋಪಾಲ್​:ಗೋವು ಮತ್ತು ಗೋಮೂತ್ರ ಹಾಗೂ ಸಗಣಿಯು ವ್ಯಕ್ತಿಯ ಆರ್ಥಿಕತೆಯನ್ನು ಬಲಪಡಿಸುವುದರೊಂದಿಗೆ ಇಡೀ ದೇಶವನ್ನು ಆರ್ಥಿಕತೆಯನ್ನು ಸಮರ್ಥವಾಗಿಸುತ್ತದೆ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ​ಸಿಂಗ್​ ಚೌಹಾಣ್​ ಶನಿವಾರ ಹೇಳಿದರು.
ಭಾರತೀಯ ಪಶುವೈದ್ಯಕೀಯ ಸಂಘದಿಂದ ಆಯೋಜಿಸಲಾದ ಮಹಿಳಾ ಪಶುವೈದ್ಯರ ‘ಶಕ್ತಿ 2021’ ಸಮಾವೇಶದಲ್ಲಿ ಮಾತನಾಡಿದ ಸಿಎಂ ಚೌಹಾಣ್​, ನಮ್ಮ ಸರ್ಕಾರವು ಗೋವುಗಳ ಅಭಯಾರಣ್ಯಗಳು ಮತ್ತು ಗೋಶಾಲೆಗಳನ್ನು ಅಭಿವೃದ್ಧಿಪಡಿಸುತ್ತಿದೆ. ಆದರೆ, ಇದನ್ನು ಏಕಾಂಗಿಯಾಗಿ ನಡೆಸಲು ಸಾಧ್ಯವಿಲ್ಲ. ಸಮುದಾಯ ಭಾಗವಹಿಸುವಿಕೆ ಅವಶ್ಯಕವಾಗಿದೆ ಎಂದು ಹೇಳಿದರು.
ನಾವು ಬಯಸಿದರೆ, ನಮ್ಮ ದೇಶದ ಆರ್ಥಿಕತೆಯನ್ನು ಬಲ ಪಡಿಸಬಹುದು ಮತ್ತು ಗೋವು, ಗೋಮೂತ್ರ ಹಾಗೂ ಸಗಣಿಯ ಮೂಲಕ ದೇಶದ ಆರ್ಥಿಕತೆಯನ್ನು ಸಮರ್ಥವಾಗಿಸಬಹುದು. ಮರಗಳ ಬಳಕೆ ಪ್ರಮಾಣವನ್ನು ಕಡಿಮೆ ಮಾಡಲು ಮಧ್ಯಪ್ರದೇಶದ ಸ್ಮಶಾನಗಳಲ್ಲಿ ಗೌಕಸ್ತ್​ (ಸಗಣಿಯಿಂದ ತಯಾರಿಸಲಾದ ದಿಮ್ಮಿ ) ಬಳಸಲಾಗುತ್ತಿದೆ ಎಂದರು.
ಸಣ್ಣ ರೈತರು ಮತ್ತು ಜಾನುವಾರು ಮಾಲೀಕರಿಗೆ ಹಸು ಸಾಕಣೆ ಹೇಗೆ ಲಾಭದಾಯಕ ವ್ಯವಹಾರವಾಗಬಹುದು ಎಂಬುದರ ಕುರಿತು ಪಶುವೈದ್ಯರು ಮತ್ತು ತಜ್ಞರು ಫಲಿತಾಂಶ ಆಧಾರಿತ ಕೆಲಸದಲ್ಲಿ ತೊಡಗಬೇಕು ಎಂದು ಸಿಎಂ ಚೌಹಾಣ್​ ಸಲಹೆ ನೀಡಿದರು.
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವ ಪರ್ಶೋತ್ತಮ್ ರೂಪಾಲಾ, ಗುಜರಾತ್‌ನ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಹಸು ಸಾಕಣೆ ಮಾಡುತ್ತಿದ್ದು, ಡೈರಿ ವ್ಯವಹಾರದ ಯಶಸ್ಸಿಗೆ ಕಾರಣವಾಗಿದೆ ಎಂದು ತಿಳಿಸಿದರು.(ಏಜೆನ್ಸೀಸ್​)
#WATCH| Cows, their dung and urine can help strengthen the economy of the state and the country if a proper system is put in place," says Madhya Pradesh CM Shivraj Singh Chouhan while addressing a convention of the women’s wing of Indian Veterinary Association in Bhopalpic.twitter.com/Mf2yvmYsf0
— ANI (@ANI)November 13, 2021

ಬಿಟ್ ಕಾಯಿನ್ ಹಗರಣಕ್ಕೆ ಪೊಲೀಸ್ ಕಮಿಷನರ್ ಇತಿಶ್ರೀ

ಬಾಹ್ಯಾಕಾಶದಲ್ಲೇ ಮಕ್ಕಳ ಜನನ! ಜೆಫ್ ಬೆಜೋಸ್ ಭವಿಷ್ಯ ಅಂತರಿಕ್ಷ ಕಾಲನಿಯಲ್ಲಿ ಜನರ ವಾಸ

ಜನಪರ ಆಡಳಿತ, ದೇಶದ ವಿಕಾಸ, ಸರ್ವಮತ ಬಿಜೆಪಿಯ ಗುರಿ; ಬಿ.ಎಲ್. ಸಂತೋಷ್ ಹೇಳಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + five =
Remember me
