ಖಾನಾಪುರ್​:ಮಗಳ ಭವಿಷ್ಯದ ಬಗ್ಗೆ ಹೆದರಿ ತಾಯಿಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ತೆಲಂಗಾಣದ ಖಾನಾಪುರ್​ನಲ್ಲಿ ನಡೆದಿದೆ. ತನ್ನ ಮಗಳನ್ನು ಅಂತರ್ಜಾತಿ ವಿವಾಹವಾದ ಅಳಿಯ ಮಗಳನ್ನು ತನ್ನ ಜತೆಗೆ ಕರೆದೊಯ್ಯದಿದ್ದರಿಂದ ಮಗಳ ಮುಂದಿನ ಭವಿಷ್ಯದ ಬಗ್ಗೆ ಚಿಂತಿಸಿ, ಮನನೊಂದು ಸಾವಿನ ಹಾದಿ ಹಿಡಿದಿದ್ದಾರೆ.
ಈ ಘಟನೆ ಖಾನಪುರ್​ ವಲಯದ ಲಿಂಗಯ್ಯಪಲ್ಲಿ ಗ್ರಾಮದಲ್ಲಿ ನಡೆದಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಬ್​ ಇನ್ಸ್​ಪೆಕ್ಟರ್​ ತಾನಾಜಿ ನಾಯಕ್​, ಸತ್ತಯ್ಯ ಮತ್ತು ವರಲಕ್ಷಿ ದಂಪತಿಗೆ ಓರ್ವ ಮಗ ಮತ್ತು ಮಗಳಿದ್ದಾಳೆ. ಆರು ತಿಂಗಳ ಹಿಂದೆ ಮಗಳು ನಾಗಲಕ್ಷ್ಮಿ ಪ್ರೇಮಾ ರೊಟಿಗುಡ ಮೂಲದ ವೆಂಕಟೇಶ್​ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಾಳೆ ಎಂದು ಹೇಳಿದರು.
ಕಳೆದ ಕೆಲವು ದಿನಗಳ ಹಿಂದೆ ಮಗಳನ್ನು ಮನೆಗೆ ಕರೆತಂದು ಬಿಟ್ಟು ಹೋದ ವರಲಕ್ಷ್ಮಿ ಅಳಿಯ ಮತ್ತೆ ಕರೆದುಕೊಂಡು ಹೋಗಲು ಬರಲೇ ಇಲ್ಲ. ಇದರಿಂದ ತೀವ್ರ ವಿಚಲಿತಗೊಂಡಿದ್ದ ವರಲಕ್ಷ್ಮಿ, ಮಗಳ ಮುಂದಿನ ಭವಿಷ್ಯ ಏನು ಎಂಬ ನೋವಿನಿಂದಲೇ ಭಾನುವಾರ ರಾತ್ರಿ ಮನೆಯಲ್ಲಿ ಯಾರು ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಎಸ್​ಐ ಮಾಹಿತಿ ನೀಡಿದರು.
ಘಟನೆ ಬೆನ್ನಲ್ಲೇ ವರಲಕ್ಷ್ಮಿ ಪತಿ ಸತ್ತಯ್ಯ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಎಸ್​ಐ ಹೇಳಿದರು.(ಏಜೆನ್ಸೀಸ್​)
ಕರೊನಾ ಲಸಿಕೆ ವಿರುದ್ಧ ದೂರು: ಉತ್ತರ ಪ್ರದೇಶದ ವ್ಯಕ್ತಿಯಿಂದ ಗಂಭೀರ ಆರೋಪ

ಕೋವಿಡ್-26, ಕೋವಿಡ್-32ಗೆ ಸಿದ್ಧರಾಗಿ!; ಅಮೆರಿಕ ತಜ್ಞರ ಎಚ್ಚರಿಕೆ

ಮಗು ಕದ್ದವಳ ಪತ್ತೆಗೆ 35000 ಕಾಲ್ ಟ್ರೇಸ್, 800 ಮಂದಿ ವಿಚಾರಣೆ!; ವರ್ಷದ ಬಳಿಕ ಸಿಕ್ಕಿಬಿದ್ದ ಮನೋವೈದ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + 13 =
Remember me
