ಪಲಕ್ಕಾಡ್​:ಕಾಡು ಹಂದಿ ಹಿಡಿಯಲು ಅಳವಡಿಸಿದ್ದ ವಿದ್ಯುತ್​ ತಂತಿಯ ಬಲೆಗೆ ಸಿಲುಕಿ ವಿದ್ಯುತ್​ ಶಾಕ್​ನಿಂದ ಪೊಲೀಸ್​ ಪೇದೆ ಇಬ್ಬರು ಮೃತಪಟ್ಟಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯಲ್ಲಿ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ಮೃತರನ್ನು ಅಶೋಕನ್​ ಮತ್ತು ಮೋಹನ್​ ದಾಸ್​ ಎಂದು ಗುರುತಿಸಲಾಗಿದೆ. ಇಬ್ಬರು ಮುತ್ತಿಕುಲಂಗರ ಕೆಎಪಿ-2 ಬೆಟಾಲಿಯನ್​ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಕ್ರಮವಾಗಿ ವಿದ್ಯುತ್​ ತಂತಿಯ ಬಲೆ ಅಳವಡಿಸಿ ಪೇದೆಗಳು ಸಾವಿಗೆ ಕಾರಣವಾದ ಆರೋಪದ ಮೇಲೆ ಮುತ್ತಿಕುಲಂಗರ ನಿವಾಸಿ ಸುರೇಶ್​ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಅಕ್ರಮವಾಗಿ ಕಾಡು ಹಂದಿ ಹಿಡಿದಿರುವ ಅನೇಕ ಪ್ರಕರಗಳನ್ನು ಈ ಹಿಂದೆಯೂ ಈತನ ವಿರುದ್ಧ ಅರಣ್ಯ ಇಲಾಖೆಯಲ್ಲಿ ದಾಖಲಾಗಿದೆ.
ಆರೋಪಿ ತಪ್ಪೊಪ್ಪಿಕೊಂಡಿದ್ದು, ತಾನು ಅವಳವಡಿಸಿದ್ದ ವಿದ್ಯುತ್​ ತಂತಿಯ ಬಲೆಗೆ ಸಿಲುಕಿ ವಿದ್ಯುತ್​ ಶಾಕ್​ನಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾನೆ. ರಾತ್ರಿ 10ರ ಸುಮಾರಿಗೆ ತನ್ನ ಮನೆಯ ಕಾಪೌಂಡ್​ ಗೋಡೆಯ ಹೊರಗೆ ಅಳವಡಿಸಿದ್ದ ವಿದ್ಯುತ್ ತಂತಿಯ ಬಲೆಯ ವಿದ್ಯುತ್​ ಸಂಪರ್ಕವನ್ನು ಸ್ವಿಚ್​ ಆನ್ ಮಾಡಿ ಮಲಗಿದ್ದ.
ಆರೋಪಿ ಸುರೇಶ್​ಗೆ ಮಧ್ಯರಾತ್ರಿ ಎಚ್ಚರವಾದಾಗ ಪೊಲೀಸರಿಬ್ಬರು ಪ್ರಜ್ಞೆ ತಪ್ಪಿ ಬಿದ್ದಿರುವುದು ಕಂಡುಬಂದಿದೆ. ಇಬ್ಬರು ಮೃತಪಟ್ಟಿರುವುದು ಗೊತ್ತಾದ ಕೂಡಲೇ ಎಳೆಯುವ ಗಾಡಿಯಲ್ಲಿ ಇಬ್ಬರ ಶವಗಳನ್ನು ಹಾಕಿಕೊಂಡು ಹೋಗಿ ಗದ್ದೆಗೆ ಎಸೆದು ಬಂದಿದ್ದ. ಗುರುವಾರ ಬೆಳಗ್ಗೆ 9 ಗಂಟೆಗೆ ಪೊಲೀಸ್​ ಕ್ಯಾಂಪ್​ ಹತ್ತಿರದ ಭತ್ತದ ಗದ್ದೆಯಲ್ಲಿ ಅಶೋಕನ್​ ಮತ್ತು ಮೋಹನ್​ ದಾಸ್​ ಮೃತದೇಹ ಪತ್ತೆಯಾಗಿತ್ತು.
ಬುಧವಾರ ರಾತ್ರಿಯಿಂದಲೇ ಇಬ್ಬರು ನಾಪತ್ತೆಯಾಗಿದ್ದರು. ಹೆಚ್ಚಿನ ಭದ್ರತೆ ಇರುವ ಪೊಲೀಸ್​ ಶಿಬಿರದಿಂದ ಅವರಿಬ್ಬರು ಹೇಗೆ ಹೊರಗೆ ಹೋದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇಬ್ಬರು ಮೃತದೇಹಗಳು ಪರಸ್ಪರ ಸುಮಾರು 60 ಮೀಟರ್ ದೂರದಲ್ಲಿ ಬಿದ್ದಿದ್ದವು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸುರೇಶ್​ ಕೃತ್ಯ ಬಯಲಾಗಿದೆ.
ಯಾರಿಗೂ ವಿಚಾರ ಗೊತ್ತಾಗಬಾರದೆಂದು ಸಾಕ್ಷಿ ನಾಶ ಮಾಡುವ ಉದ್ದೇಶದಿಂದ ಆರೋಪಿ ಸುರೇಶ್​ ಘಟನೆಯ ಬೆನ್ನಲ್ಲೇ ವಿದ್ಯುತ್​ ತಂತಿಯ ಬಲೆಯನ್ನು ಕಿತ್ತೆಸೆದಿದ್ದ. ಆದರೆ, ಪೊಲೀಸ್​ ತನಿಖೆಯಲ್ಲಿ ಸಿಕ್ಕಿಬಿದ್ದಿದ್ದು ಸುರೇಶ್​ ವಿಚಾರಣೆ ನಡೆಸಲಾಗುತ್ತಿದೆ.(ಏಜೆನ್ಸೀಸ್​)
ಚೀನಾದಲ್ಲಿ ಪತ್ತೆಯಾದ ದೈತ್ಯ ಸಿಂಕ್​ಹೋಲ್​ ಕೆಳಗೆ ದಟ್ಟಾರಣ್ಯ! ಹಿಂದೆಂದೂ ಕಂಡಿರದ ಜೀವರಾಶಿಗಳಿರೋ ಸಾಧ್ಯತೆ

ನಮ್ಮ ಮೇಲಿನ ಅತ್ಯಾಚಾರ ನಿಲ್ಲಿಸಿ… ಕಾನ್​ ಚಿತ್ರೋತ್ಸವದಲ್ಲಿ ಇದ್ದಕ್ಕಿದ್ದಂತೆ ಬೆತ್ತಲಾದ ಯೂಕ್ರೇನಿಯನ್​ ಮಹಿಳೆ!

ಯಶಿಕಾ ಆನಂದ್​ ಬೋಲ್ಡ್​ ಫೋಟೋಗಳು ವೈರಲ್: ನಟಿಯ ಹಾಟ್​ ಅವತಾರಕ್ಕೆ ಫ್ಯಾನ್ಸ್​ ಫಿದಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + seventeen =
Remember me
