ಕೊಚ್ಚಿ:ಯುವತಿಯೊಬ್ಬಳು ತನ್ನ ಸಹೋದರಿಯನ್ನೇ ಕೊಲೆ ಮಾಡಿರುವ ಆತಂಕಕಾರಿ ಘಟನೆ ಕೇರಳದ ಎರ್ನಾಕುಲಂ ಜಿಲ್ಲೆಯ ಪರವುರ್​ ಪಟ್ಟಣದಲ್ಲಿ ಬುಧವಾರ (ಡಿ.29) ನಡೆದಿದೆ.
ಎರಡು ದಿನಗಳ ಹಿಂದೆ ವಿಸ್ಮಯ ಅಲಿಯಾಸ್​ ಸಿಂಚು (25) ಎಂಬಾಕೆಯ ಮೃತದೇಹವನ್ನು ಸುಟ್ಟಿರುವ ಸ್ಥಿತಿಯಲ್ಲಿ ಉತ್ತರ ಪರವುರ್​ನ ಪೆರುವರಂನಲ್ಲಿರುವ ಮನೆಯಲ್ಲಿ ಪೊಲೀಸರು ಪತ್ತೆಹಚ್ಚಿದ್ದರು. ಆಕೆ ಧರಿಸಿದ್ದ ಲಾಕೆಟ್​ ಮತ್ತು ಬಟ್ಟೆಯ ಸುಳಿವುನೊಂದಿಗೆ ಕುಟುಂಬ ಸದಸ್ಯರ ನೆರವಿನಿಂದ ಮೃತದೇಹದ ಗುರುತನ್ನು ಪತ್ತೆಹಚ್ಚಲಾಗಿತ್ತು. ಘಟನೆಯ ಬೆನ್ನಲ್ಲೇ ವಿಸ್ಮಯ ಸಹೋದರಿ ಜೀತು (22) ಸ್ಥಳದಿಂದ ಪರಾರಿ ಆಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿತ್ತು.
ಜೀತುಳನ್ನು ಪೊಲೀಸರು ಬಂಧಿಸುವವರೆಗೂ ಇಡೀ ಪ್ರಕರಣ ನಿಗೂಢತೆಯಿಂದ ಕೂಡಿತ್ತು. ಕೊನೆಗೆ ಜೀತು ತನ್ನ ತಪ್ಪನ್ನು ಒಪ್ಪಿಕೊಂಡಿದ್ದು, ಆಕೆಯೇ ತನ್ನ ಅಕ್ಕನನ್ನು ಕೊಂದಿದ್ದಾಳೆ. ಅದಕ್ಕೂ ಮುನ್ನ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿದ್ದ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಜೀತು, ಮನೆಯ ಹಿಂಬಾಗಿಲಿನಿಂದ ಓಡಿ ಹೋಗುತ್ತಿರುವ ದೃಶ್ಯ ದಾಖಲಾಗಿತ್ತು. ಇದು ಪ್ರಕರಣದಕ್ಕೆ ಬಲವಾದ ತಿರುವು ನೀಡಿತು. ಅಲ್ಲದೆ, ಮನೆಯಲ್ಲಿ ರಕ್ತದ ಕಲೆಗಳನ್ನು ನೋಡಿದ್ದ ಪೊಲೀಸರಿಗೆ ಮತ್ತಷ್ಟು ಅನುಮಾನ ಮೂಡಿತು.
ಪರವುರ್​ ಸರ್ಕಲ್​ ಇನ್ಸ್​ಪೆಕ್ಟರ್​ ನೇತೃತ್ವದಲ್ಲಿ ತನಿಖೆ ನಡೆದಿದೆ. ತಲೆಮರೆಸಿಕೊಂಡಿದ್ದ ಜೀತುಗಳನ್ನು ಪತ್ತೆಹಚ್ಚಲು ಪೊಲೀಸರು ಲುಕೌಟ್​ ನೋಟಿಸ್​ ಜಾರಿ ಮಾಡಿದ್ದರು. ಕೊನೆಗೆ ಆಕೆ ಕಾಕ್ಕನಾಡದಲ್ಲಿ ಬಂಧಿಸಲಾಗಿದೆ. ಆರೋಪಿ ಜೀತುಗೆ ಮಾನಸಿಕ ಸಮಸ್ಯೆಯಿದ್ದು, ಚಿಕಿತ್ಸೆ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ. ಅಲ್ಲದೆ, ಆಕೆಯನ್ನು ಮನೆಯಲ್ಲಿ ಕಟ್ಟಿಹಾಕಲಾಗಿತ್ತು. ಘಟನೆ ನಡೆದ ದಿನವೂ ಕೂಡ ಜೀತುಳನ್ನು ಕಟ್ಟಿಹಾಕಲಾಗಿತ್ತು. ಸಹೋದರಿ ಇಬ್ಬರು ಆಗಾಗಾ ಜಗಳ ಆಡುತ್ತಿದ್ದರು ಎಂದು ತಿಳಿದುಬಂದಿದೆ.
ಇಬ್ಬರ ನಡುವಿನ ಜಗಳವೇ ಕೊಲೆಗೆ ಕಾರಣವಾಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆದಾಗ್ಯೂ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಿಖರ ಕಾರಣಕ್ಕಾಗಿ ತನಿಖೆ ಮುಂದುವರಿಸಿದ್ದಾರೆ.(ಏಜೆನ್ಸೀಸ್​)
ಹೊಲದಲ್ಲಿ ಕೆಲ್ಸ ಮಾಡುವಾಗ ಮಡಿಕೆ ಮತ್ತು ಸಣ್ಣ ಕಬ್ಬಿಣದ ಪೆಟ್ಟಿಗೆ ಪತ್ತೆ: ತೆರೆದವರಿಗೆ ಕಾದಿತ್ತು ಅಚ್ಚರಿ ಜತೆಗೆ ಶಾಕ್​!

ವಿಶ್ವಕ್ಕೆ ಒಮಿಕ್ರಾನ್ ಸುನಾಮಿ!; ವಿಶ್ವ ಆರೋಗ್ಯ ಸಂಸ್ಥೆಯಿಂದ ಗಂಭೀರ ಎಚ್ಚರಿಕೆ; ಭಾರತದಲ್ಲೂ ಕೇಸ್ ಏರಿಕೆ

ಚಿನ್ನ 55 ಸಾವಿರ ರೂ.ಗೆ?; ಹೊಸ ವರ್ಷಕ್ಕೆ ಚಿನ್ನ ದುಬಾರಿ?

ಮೇಲೇಳಲಿಲ್ಲ ಕೆಳಗಿಳಿಯಲಿಲ್ಲ, ಬಾಲಿವುಡ್ 50-50: ಸಮಗ್ರ ನೋಟ-2021, ಹಿಂದಿ ಚಿತ್ರರಂಗ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 13 =
Remember me
