ಚಂಡಿಗಢ:ಪಂಜಾಬ್​ನಲ್ಲಿ ಆಮ್​ ಆದ್ಮಿ ಪಕ್ಷ (ಎಎಪಿ) ಭರ್ಜರಿ ಮುನ್ನಡೆ ಸಾಧಿಸಿರುವುದರಿಂದ ಆಪ್​ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಜಿಲೇಬಿ ತಯಾರಿ ಜತೆಗೆ ಸಂಭ್ರಮಾಚರಣೆಗೆ ಜೋರಾಗಿ ಸಿದ್ಧತೆ ನಡೆಯುತ್ತಿದೆ.
ಪಂಜಾಬ್​ನ ಸಂಗ್ರೂರ್​ನಲ್ಲಿರುವ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮನೆಯಲ್ಲಿ ಸಂಭ್ರಮ ಮನೆ ಮಾಡಿದ್ದು, ಸಂಪೂರ್ಣ ನಿವಾಸ ಹೂಗಳಿಂದ ಅಲಂಕಾರಗೊಂಡಿದೆ.
ಸದ್ಯದ ಟ್ರೆಂಡ್​ ಪ್ರಕಾರ ಪಂಜಾಬ್​ನಲ್ಲಿ ಆಪ್​ 47 ಸ್ಥಾನಗಳಲ್ಲಿ ಮುನ್ನಡೆಯನ್ನು ಸಾಧಿಸಿದ್ದರೆ, ಕಾಂಗ್ರೆಸ್​ 31 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡು ಎರಡನೇ ಸ್ಥಾನದಲ್ಲಿದೆ. ಬಿಜೆಪಿ 5 ಸ್ಥಾನಗಳನ್ನು ಗಳಿಸಿದೆ.
ಪಂಜಾಬ್​ ಒಟ್ಟು 117 ವಿಧಾನಸಭಾ ಸ್ಥಾನಗಳನ್ನು ಹೊಂದಿದ್ದು, ಅಧಿಕಾರದ ಗದ್ದುಗೆ ಏರಲು 59 ಮ್ಯಾಜಿಕ್​ ನಂಬರ್​ ಅವಶ್ಯಕತೆ ಇದೆ. ಆಮ್​ ಆದ್ಮಿ ಪಕ್ಷ ಭಾರೀ ಅಂತರದಲ್ಲಿ ಮುಂದಿದ್ದು, ಈ ಬಾರಿ ಪಂಜಾಬ್​ ಅಧಿಕಾರದ ಗದ್ದುಗೆ ಏರುವ ಲಕ್ಷಣಗಳು ಕಾಣುತ್ತಿದೆ.(ಏಜೆನ್ಸೀಸ್​)
Punjab | Jalebis being prepared, flower decoration being done at the residence of Aam Aadmi Party CM candidate Bhagwant Mann, at Sangrurpic.twitter.com/xTlEzV1a9u
— ANI (@ANI)March 10, 2022

ಫಲಿತಾಂಶದ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ..
ಯಾರಿಗೆ ಪಂಚರಾಜ್ಯ?; ತಜ್ಞರ ವಿಶ್ಲೇಷಣೆ ಒಳಗೊಂಡ ಫಲಿತಾಂಶದ ಕ್ಷಣ ಕ್ಷಣ ಮಾಹಿತಿಯ ನೇರಪ್ರಸಾರ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
