ನವದೆಹಲಿ:ಕರ್ತವ್ಯದಲ್ಲಿರುವಾಗಲೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಇಬ್ಬರು ಪೊಲೀಸ್​ ಸಿಬ್ಬಂದಿಗೆ ಇಲಾಖೆ ಶೋಕಾಸ್​ ನೋಟಿಸ್​ ಹೊರಡಿಸಿದೆ.
ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ವಾಯುವ್ಯ ದೆಹಲಿಯ ಡಿಸಿಪಿ ಉಷಾ ರಂಗ್ನಾ, ವಿಡಿಯೋವನ್ನು ಮಾಡೆಲ್​ ಟೌನ್​ ಪೊಲೀಸ್​ ಠಾಣೆಯ ಮಹಿಳಾ ಹೆಡ್​ ಕಾನ್ಸ್​ಟೇಬಲ್​ ಶಶಿ ಮತ್ತು ಕಾನ್ಸ್​ಟೇಬಲ್​ ವಿವೇಕ್​ ಮಥೂರ್​ ಕರ್ತವ್ಯದಲ್ಲಿರುವಾಗಲೇ ಮಾಡಿದ್ದಾರೆಂದು ಮಾಹಿತಿ ನೀಡಿದರು. ಇದು ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಕರೊನಾ ಲಾಕ್​ಡೌನ್​ ಸಮಯದಲ್ಲಿ ಈ ವಿಡಿಯೋವನ್ನು ಮಾಡಲಾಗಿದೆ. ಕರ್ತವ್ಯದಲ್ಲಿರುವಾಗ ಅದರಲ್ಲೂ ಯೂನಿಫಾರ್ಮ್​ ಧರಿಸಿ ವಿಡಿಯೋ ಮಾಡಿರುವುದು ಇಲಾಖೆಯ ಕೆಂಗಣ್ಣಿಗೆ ಗುರಿಯಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಿಕ್ಕಾಪಟ್ಟೆ ವೈರಲ್​ ಆಗಿ ಉನ್ನತ ಅಧಿಕಾರಿಗಳ ಗಮನಕ್ಕೆ ಬಂದಿದ್ದು, ವಿಡಿಯೋದಲ್ಲಿರುವ ಸಿಬ್ಬಂದಿಗೆ ಶೋಕಾಸ್​ ನೋಟಿಸ್​ ಜಾರಿ ಮಾಡಲಾಗಿದೆ.
ಇಬ್ಬರು ಸಿಬ್ಬಂದಿಯು ಕರೊನಾ ನಿಯಮವನ್ನು ಉಲ್ಲಂಘಿಸಿರುವುದರ ಜತೆಗೆ ಕರ್ತವ್ಯದಲ್ಲಿ ಇರುವಾಗಲೇ ಬೇಜವಬ್ದಾರಿ ಮೆರೆದಿದ್ದಾರೆ. ನೋಟಿಸ್​ ನೀಡಲಾಗಿದ್ದು, 15 ದಿನಗಳ ಒಳಗೆ ಸರಿಯಾದ ಉತ್ತರ ನೀಡಬೇಕು. ಇಲ್ಲವಾದಲ್ಲಿ ಕಠಿಣ ಶಿಸ್ತುಕ್ರಮ ಜರುಗಿಸುವುದಾಗಿ ಡಿಸಿಪಿ ಉಷಾ ರಂಗ್ನಾ ಎಚ್ಚರಿಕೆ ನೀಡಿದ್ದಾರೆ.(ಏಜೆನ್ಸೀಸ್​)
Another viral video..pic.twitter.com/8NeQdFxGp1
— Mahender Singh Manral (@mahendermanral)June 8, 2021

ಬಾಕ್ಸಿಂಗ್​ ದಿಗ್ಗಜ ಮೊಹಮದ್​ ಅಲಿ ಅವರ ಸ್ಮರಣಾರ್ಥ ಅಭಿಮಾನಿಗಳಿಂದ ಸಿದ್ಧವಾಗಿದೆ ಕಿರುಚಿತ್ರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 6 =
Remember me
