ಲಖನೌ:ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದಿಂದ ಟಿಕೆಟ್ ಸಿಗದಿದ್ದಕ್ಕೆ ಮನನೊಂದ ಸಮಾಜವಾದಿ ಪಕ್ಷ(ಎಸ್​ಪಿ)ದ ಕಾರ್ಯಕರ್ತನೊಬ್ಬ ಲಖನೌದಲ್ಲಿರುವ ಪಕ್ಷದ ಕಚೇರಿ ಮುಂದೆಯೇ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.
ಆದಿತ್ಯ ಠಾಕೂರ್​ ಆತ್ಮಹತ್ಯೆಗೆ ಯತ್ನಿಸಿದ ಎಸ್​ಪಿ ಕಾರ್ಯಕರ್ತ. ಈತ ಆಲಿಗಢ ಕ್ಷೇತ್ರದ ನಿವಾಸಿ. ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಹೊಂದಿದ್ದ. ಆದರೆ, ಪಕ್ಷದಿಂದ ಟಿಕೆಟ್​ ಸಿಗದಿದ್ದಕ್ಕೆ ಮನನೊಂ ಠಾಕೂರ್​ ಲಖನೌದ ವಿಕ್ರಮಾದಿತ್ಯ ಮಾರ್ಗದಲ್ಲಿರುವ ಪಾರ್ಟಿಯ ಮುಖ್ಯ ಕಚೇರಿಯ ಮುಂಭಾಗದಲ್ಲಿ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನಿಸಿದ. ಈ ವೇಳೆ ಪಾದಾಚಾರಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ತಡೆದು, ಆತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಏನೇ ಬರಲಿ ನಾನಿಂದು ಇಲ್ಲಿಯೇ ನನ್ನ ಪ್ರಾಣವನ್ನು ತೆಗೆದುಕೊಳ್ಳುತ್ತೇನೆ. ಜೈಲಿಗೆ ಹಾಕಿದರೂ ಕೂಡ ನನ್ನನ್ನು ತಡೆಯಲು ಸಾಧ್ಯವಿಲ್ಲ. ನನಗೆ ನ್ಯಾಯ ಬೇಕಿದೆ ಎಂದು ಮಾಧ್ಯಮಗಳ ಮುಂದೆ ಠಾಕೂರ್​ ಅಳಲು ತೋಡಿಕೊಂಡಿದ್ದಾರೆ.
ತಮ್ಮ ಟಿಕೆಟ್ ಅನ್ನು ಪಕ್ಷವು ದೋಚಿಕೊಂಡು ಅದನ್ನು “ಹೊರಗಿನವರಿಗೆ” ನೀಡಿದೆ ಎಂದು ಠಾಕೂರ್ ಅವರು ಆರೋಪಿಸಿದ್ದಾರೆ. ನನ್ನ ವಿರುದ್ಧ ಯಾವುದೇ ಕ್ರಮಿನಲ್​ ದಾಖಲೆಗಳಿಲ್ಲ. ಆದರೂ ನನಗೆ ಟಿಕೆಟ್​ ಅನ್ನು ಪಕ್ಷವೂ ನಿರಾಕರಿಸಿದೆ ಎಂದು ಹೇಳಿದ್ದಾರೆ. ಠಾಕೂರ್ ಅವರು ಅಲಿಗಢದ ಛಾರಾ ಕ್ಷೇತ್ರದಿಂದ ಯುಪಿ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದರು. ಆದರೆ, ಪಕ್ಷದಿಂದ ಟಿಕೆಟ್ ನೀಡಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸಮಾಜವಾದಿ ಪಕ್ಷ-ರಾಷ್ಟ್ರೀಯ ಲೋಕದಳ ಮೈತ್ರಿಕೂಟವು ಜನವರಿ 13 ರಂದು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಮೊದಲ ಹಂತದ 29 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದೆ. 29 ಸ್ಥಾನಗಳ ಪೈಕಿ ಎಸ್​ಪಿ 10 ಮತ್ತು ಆರ್​ಎಲ್​ಡಿ 19 ಅಭ್ಯರ್ಥಿಗಳನ್ನು ಪಟ್ಟಿ ಮಾಡಿದೆ. ಎರಡು ಪಕ್ಷಗಳು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದೆ.
ಉತ್ತರಪ್ರದೇಶದಲ್ಲಿ ಫೆ.10ರಿಂದ ಮಾ. 7ರವರೆಗೆ ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಜ. 15ರ ವರೆಗೂ ರಾಜಕೀಯ ಪಕ್ಷಗಳಿಗೆ ಭೌತಿಕ ಪ್ರಚಾರ, ರೋಡ್‌ಶೋಗಳಿಗೆ ಅವಕಾಶ ಇರುವುದಿಲ್ಲ. ನಂತರ ಆ ಸಮಯದ ಪರಿಸ್ಥಿತಿಗೆ ಅನುಗಣವಾಗಿ ಹೊಸ ಸೂಚನೆಗಳನ್ನು ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.(ಏಜೆನ್ಸೀಸ್​)
ಉತ್ತರ ಪ್ರದೇಶ ವಿಧಾನಸಭೆ ಚುನಾವಣೆ: ಗೋರಖ್​ಪುರ್ ಕ್ಷೇತ್ರದಿಂದ ಸಿಎಂ ಯೋಗಿ ಸ್ಪರ್ಧೆ

ಜನರೇ ಎಚ್ಚರ ನಿಮಗೂ ಹೀಗಾಗಬಹುದು…ಪಿಜ್ಜಾ ತಿನ್ನುವ ಆಸೆಯಿಂದ 11 ಲಕ್ಷ ರೂ. ಕಳೆದುಕೊಂಡು ವೃದ್ಧೆ!

ಇದು ಅತ್ಯಾಚಾರಿಗಳನ್ನು ಪ್ರೀತಿಸೋ ಸಮಾಜ: ನಟಿ ಪಾರ್ವತಿ ನೋವಿಗೆ ಗಾಯಕಿ ಚಿನ್ಮಯಿ ಸಾಂತ್ವಾನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − fourteen =
Remember me
