ಕೊಚ್ಚಿ:ಕೊಲೆಗೆ ಸಂಚು ರೂಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್​ ಅವರ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ಕೇರಳದ ಹೈಕೋರ್ಟ್​ನಲ್ಲಿ ನಡೆಯುವ ಒಂದು ಗಂಟೆಗೂ ಮುನ್ನವೇ ದಿಲೀಪ್​ ಮತ್ತೊಂದು ಅರ್ಜಿಯನ್ನು ದಾಖಲಿಸಿರುವುದು ಬೆಳಕಿಗೆ ಬಂದಿದೆ.
ಕೆಲವು ವರ್ಷಗಳ ಹಿಂದೆ ಖ್ಯಾತ ನಟಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣದ ಹಿಂದಿನ ಮಾಸ್ಟರ್​ ಮೈಂಡ್​ ಎಂಬ ಆರೋಪವನ್ನು ನಟ ದಿಲೀಪ್​ ಹೊತ್ತುಕೊಂಡಿದ್ದಾರೆ. ಇತ್ತೀಚೆಗಷ್ಟೇ ಟಿವಿ ವಾಹಿನಿಯೊಂದು ಬಿಡುಗಡೆ ಮಾಡಿದ್ದ ದಿಲೀಪ್ ಅವರದ್ದು ಎನ್ನಲಾದ ಆಡಿಯೋ ಕ್ಲಿಪ್ ಆಧರಿಸಿ ತನಿಖಾಧಿಕಾರಿ ನೀಡಿದ ದೂರಿನ ಮೇರೆಗೆ ಅಪರಾಧ ವಿಭಾಗದ ಪೊಲೀಸರು ಹೊಸ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಲೀಪ್​ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆಗೂ ಮುನ್ನವೆ ಮತ್ತೊಂದು ಅರ್ಜಿಯನ್ನು ದಾಖಲಿಸಿದ್ದು, ಡಿವೈಎಸ್​ಪಿ ಬೈಜು ಪೌಲೋಸ್​ ಅವರ ಬಳಿ ನಟಿಯ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ವಿಡಿಯೋ ಇದೆ ಎಂದು ಆರೋಪಿಸಿದ್ದಾರೆ.
ಐವರು ಪೊಲೀಸ್​ ಅಧಿಕಾರಿಗಳ ಹತ್ಯೆಗೆ ಸಂಚು ರೂಪಿಸಿರುವ ಆರೋಪ ಸಹ ದಿಲೀಪ್​ ವಿರುದ್ಧ ಕೇಳಿಬಂದಿದೆ. ಬೈಜು ಪೌಲೋಸ್​ ಕೂಡ ಐವರು ಅಧಿಕಾರಿಗಳಲ್ಲಿ ಒಬ್ಬರು. ದಿಲೀಪ್​ ಹೊಸದಾಗಿ ಸಲ್ಲಿಸಿರುವ ಅರ್ಜಿಯಲ್ಲಿ ವಿಡಿಯೋಗಾಗಿ ಎರ್ನಾಕುಲಂನ ವಿಚಾರಣಾ ನ್ಯಾಯಾಲಯವನ್ನು ಕೋರಿದ್ದಾರೆ.
ನಟಿ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖಾಧಿಕಾರಿಗಳಲ್ಲಿ ಬೈಜು ಪೌಲೋಸ್​ ಕೂಡ ಒಬ್ಬರು. ಇತ್ತೀಚೆಗೆ ವೈರಲ್​ ಆಗಿದ್ದ ಆಡಿಯೋ ಕ್ಲಿಪ್​ನಲ್ಲಿ ಐವರು ಪೊಲೀಸ್​ ಅಧಿಕಾರಿಗಳ ಹತ್ಯೆ ಮಾಡಲಾಗಿದ್ದ ಸಂಚು ಬಯಲಾಗಿತ್ತು. ಆ ಆಡಿಯೋದಲ್ಲಿದ್ದ ಧ್ವನಿ ದಿಲೀಪ್​ ಅವರದ್ದು ಎಂದು ತಿಳಿದುಬಂದಿತ್ತು. ಬಳಿಕ ಬೈಜು ಪೌಲೋಸ್​ ಅವರು ದೂರು ಸಹ ದಾಖಲಿಸಿದ್ದರು. ಇನ್ನು ದಿಲೀಪ್​ ಆಪ್ತರಲ್ಲಿ ಒಬ್ಬರಾಗಿರುವ ನಿರ್ದೇಶಕ ಬಾಲಚಂದ್ರ ಕುಮಾರ್​ ಎಂಬುವರೇ ಆಡಿಯೋವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದಾರೆ. ಇತ್ತೀಚೆಗೆ ಕ್ರೈಂ ಬ್ರಾಂಚ್‌ಗೆ ಹಾಜರಾದ ಬಳಿಕ ಮಾಧ್ಯಮದವರನ್ನು ಭೇಟಿ ಮಾಡಿದ ಬಾಲಚಂದ್ರ ಕುಮಾರ್, ತನಿಖಾಧಿಕಾರಿಗಳ ಮೇಲೆ ಹಲ್ಲೆಗೆ ಸಂಚು ರೂಪಿಸಿರುವ ಬಗ್ಗೆ ಹಲವು ಕಡೆ ಚರ್ಚೆ ನಡೆದಿದೆ ಎಂದು ಹೇಳಿದ್ದರು.
ಕೊಲೆಗೆ ಸಂಚು ಆರೋಪದಲ್ಲಿ ಹೊಸ ಎಫ್​ಐಆರ್​ ದಾಖಲಾಗಿದ್ದು, ಅದರಲ್ಲಿ ದಿಲೀಪ್​ ಮೊದಲ ಆರೋಪಿ ಆಗಿದ್ದಾರೆ. ಇದರ ಬೆನ್ನಲ್ಲೇ ದಿಲೀಪ್​, ಬಂಧನದಿಂದ ತಪ್ಪಿಸಿಕೊಳ್ಳಲು ನಿರೀಕ್ಷಣಾ ಜಾಮೀನಿಗಾಗಿ ಹೈಕೋರ್ಟ್​ ಮೆಟ್ಟಿಲೇರಿದ್ದಾರೆ. ಬಾಲಚಂದ್ರಕುಮಾರ್​ ಅವರ ಹೇಳಿಕೆಯನ್ನು ಪರಿಶೀಲಿಸುವಂತೆ ಕೋರ್ಟ್​ ನಿರ್ದೇಶನ ನೀಡಿದ್ದು, ಅದಕ್ಕೆ ಪೊಲೀಸ್​ ಇಲಾಖೆ ಒಪ್ಪಿದೆ ಮತ್ತು ಮುಂದಿನ ಮಂಗಳವಾರಕ್ಕೆ ಜಾಮೀನು ಅರ್ಜಿ ವಿಚಾರಣೆಯನ್ನು ಕೋರ್ಟ್​ ಮುಂದೂಡಿದ್ದು, ಅಲ್ಲಿಯವರೆಗೂ ದಿಲೀಪ್​ರನ್ನು ಬಂಧಿಸುವಂತಿಲ್ಲ ಎಂದು ಕೋರ್ಟ್​ ಹೇಳಿದೆ.
ಜಾಮೀನು ಅರ್ಜಿ ವಿಚಾರಣೆಗೆ ಸ್ವಲ್ಪ ಮುಂಚೆಯೇ ಹೊಸ ಅರ್ಜಿಯೊಂದಿಗೆ ಬಂದ ದಿಲೀಪ್ ಡಿವೈಎಸ್​ಪಿ ಬೈಜು ಪೌಲೋಸ್ ಅವರು ನಟಿಯ ಲೈಂಗಿಕ ದೌರ್ಜನ್ಯದ ವಿಡಿಯೋಗಳನ್ನು ಹೊಂದಿದ್ದು, ಅವುಗಳನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ ಮತ್ತು ಅವುಗಳು ಇತರ ಜನರನ್ನು ತಲುಪಬಹುದು ಎಂದು ಪ್ರತಿಪಾದಿಸಿದ್ದಾರೆ. ಇನ್ನು ನಟಿಯ ದೌರ್ಜನ್ಯದ ವಿಡಿಯೋಗಳನ್ನು ಕೋರಿ ದಿಲೀಪ್ ನ್ಯಾಯಾಲಯದ ಮೊರೆ ಹೋಗುತ್ತಿರುವುದು ಇದೇ ಮೊದಲಲ್ಲ. ಆದಾಗ್ಯೂ, ದಿಲೀಪ್ ಅವರು ಈಗಾಗಲೇ ವಿಡಿಯೋಗಳನ್ನು ಹೊಂದಿದ್ದಾರೆ ಎಂದು ನಿರ್ದೇಶಕ ಬಾಲಚಂದ್ರಕುಮಾರ್ ಆರೋಪಿಸಿದ್ದಾರೆ. ಅಲ್ಲದೆ, ಮೊದಲ ಬಾರಿಗೆ ನ್ಯಾಯಾಲಯಕ್ಕೆ ವಿಡಿಯೋಗಳನ್ನು ಹಾಜರುಪಡಿಸುವ ಮೊದಲು ಅವರು ಸ್ವತಃ ವಿಡಿಯೋಗಳನ್ನು ನೋಡಿದ್ದಾರೆ. ದೌರ್ಜನ್ಯ ಪ್ರಕರಣದ ಪ್ರಮುಖ ಆರೋಪಿ ‘ಪಲ್ಸರ್’ ಸುನಿ ಜತೆ ದಿಲೀಪ್‌ ವಿಡಿಯೋ ವೀಕ್ಷಿಸಿದ್ದಾರೆ ಎಂದು ನಿರ್ದೇಶಕರು ಗಂಭೀರ ಆರೋಪ ಮಾಡಿದ್ದಾರೆ.(ಏಜೆನ್ಸೀಸ್​)
ಖ್ಯಾತ ನಟಿ ಮೇಲೆ ದೌರ್ಜನ್ಯ​: ನಟ ದಿಲೀಪ್ ಮನೆಯಲ್ಲಿ ಸಿಕ್ಕಿದ್ದೇನು? ಕೇಸ್​ಗೆ ಟ್ವಿಸ್ಟ್​ ಕೊಟ್ಟ ನಿರ್ದೇಶಕನ ಹೇಳಿಕೆ

ಕೊನೆಗೂ ಮೌನ ಮುರಿದ ಭಾವನಾ: ಕೆಲ ವರ್ಷಗಳ ಹಿಂದೆ ನಡೆದ ಕರಾಳ ಘಟನೆಯ ಬಗ್ಗೆ ನಟಿ ಹೇಳಿದ್ದು ಹೀಗೆ

ಬೋರಿಸ್​ ಜಾನ್ಸನ್ ತಲೆದಂಡಕ್ಕೆ ಒತ್ತಾಯ: ಬ್ರಿಟನ್ ಪ್ರಧಾನಿ ರೇಸ್‌ನಲ್ಲಿ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್

ನಾನು ಆದಷ್ಟು ಬೇಗ ಸಾಯಬೇಕೆಂಬ ನಿಮ್ಮ ಬಯಕೆಯನ್ನು ದೇವರು ಈಡೇರಿಸಲಿ! ಸಂಕ್ರಾಂತಿ ಶುಭಕೋರಿದ ಆರ್​ಜಿವಿ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:sixteen − thirteen =
Remember me
