ನವದೆಹಲಿ:ಪರೀಕ್ಷೆಯ ಸಮಯದಲ್ಲಿ ವಿದ್ಯಾರ್ಥಿಗಳು ಭಯಭೀತ ವಾತಾವರಣದಿಂದ ದೂರವಿರಬೇಕೆಂದು ನಾನು ಬಯಸುತ್ತೇನೆ. ಸ್ನೇಹಿತರನ್ನು ನಕಲು ಮಾಡುವ ಅಗತ್ಯವಿಲ್ಲ, ನೀವು ಮಾಡುವ ಯಾವುದೇ ಕೆಲಸವನ್ನು ಸಂಪೂರ್ಣ ಆತ್ಮವಿಶ್ವಾಸದಿಂದ ಮಾಡುತ್ತಾ ಸಾಗಿ, ಆಗ ನೀವೆಲ್ಲರೂ ಹಬ್ಬದ ಮೂಡ್‌ನಲ್ಲಿ ನಿಮ್ಮ ಪರೀಕ್ಷೆಯನ್ನು ನೀಡಲು ಸಾಧ್ಯವಾಗುತ್ತದೆ ಎಂದು ನಾನು ನಂಬುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.
ಪರೀಕ್ಷಾ ಪೇ ಚರ್ಚಾ ಕಾರ್ಯಕ್ರಮದ ಐದನೇ ಆವೃತ್ತಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು.
ಬಹುದಿನಗಳ ನಂತರ ನಾನು ನಿಮ್ಮೆಲ್ಲರನ್ನು ಭೇಟಿಯಾಗಿರುವುದರಿಂದ ಇಂದಿನ ಕಾರ್ಯಕ್ರಮವು ನನಗೆತುಂಬಾ ವಿಶೇಷವಾಗಿದೆ. ನಮಗೆ ಸಮಯದ ಅಭಾವ ಇರುವುದರಿಂದ ಇಲ್ಲಿ ಚರ್ಚಿಸಲಾಗದ ವಿದ್ಯಾರ್ಥಿಗಳ ಎಲ್ಲಾ ಪ್ರಶ್ನೆಗಳಿಗೆ ನಾನು ನಮೋ ಆ್ಯಪ್‌ನಲ್ಲಿ ವಿಡಿಯೋಗಳು, ಆಡಿಯೋ ಸಂದೇಶಗಳು ಮತ್ತು ಲಿಖಿತ ಪಠ್ಯಗಳ ಮೂಲಕ ಉತ್ತರಿಸುತ್ತೇನೆಂದು ಪ್ರಧಾನಿ ತಿಳಿಸಿದರು.
ಇಲ್ಲಿ ಮೊದಲ ಬಾರಿಗೆ ಪರೀಕ್ಷೆಗೆ ಹಾಜರಾಗುತ್ತಿರುವವರು ಯಾರೂ ಇಲ್ಲ. ಜೀವನದಲ್ಲಿ ಆಯಾ ಹಂತಗಳಲ್ಲಿ ಪದೇ ಪದೇ ಪರೀಕ್ಷೆಗಳಿಗೆ ಕುಳಿತುಕೊಳ್ಳುವ ಮೂಲಕ ನಾವು ಅನೇಕ ಪರೀಕ್ಷೆಗಳಿಗೆ ಸಾಕ್ಷಿಯಾಗಿದ್ದೇವೆ. ಪರೀಕ್ಷೆಗಳು ನಮ್ಮ ಜೀವನದಲ್ಲಿ ಮೆಟ್ಟಿಲುಗಳು. ಆಫ್‌ಲೈನ್‌ನಲ್ಲಿ ಏನಾಗುತ್ತದೆಯೋ ಅದೇ ಆನ್‌ಲೈನ್‌ನಲ್ಲಿಯೂ ನಡೆಯುತ್ತದೆ. ಇಲ್ಲಿ ಮಾಧ್ಯಮವು ಸಮಸ್ಯೆಯಲ್ಲ. ಮಾಧ್ಯಮದ ಹೊರತಾಗಿ, ನಮ್ಮ ಮನಸ್ಸನ್ನು ವಿಷಯದೊಳಗೆ ಕೇಂದ್ರಿಕರಿಸಿ, ವಿಷಯಗಳನ್ನು ಗ್ರಹಿಸುವುದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ ಎಂದು ವಿದ್ಯಾರ್ಥಿಗಳಿ ಪ್ರಧಾನಿ ಸಲಹೆ ನೀಡಿದರು.
ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಧ್ಯಯನ ಮಾಡುವಾಗ ತಮ್ಮನ್ನು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅವರು ನಿಜವಾಗಿ ಅಧ್ಯಯನ ಮಾಡುತ್ತಾರೆಯೇ ಅಥವಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ನೋಡುತ್ತಾ ಸಮಯ ಕಳೆಯುತ್ತಾರೆಯೇ ಎಂದು ನೋಡಿಕೊಳ್ಳಬೇಕು. ಆನ್‌ಲೈನ್ ಶಿಕ್ಷಣವು ಜ್ಞಾನವನ್ನು ಪಡೆಯುವ ತತ್ವವನ್ನು ಆಧರಿಸಿದೆ. ಆದರೆ, ಆಫ್‌ಲೈನ್ ಶಿಕ್ಷಣವು ಆ ಜ್ಞಾನವನ್ನು ಉಳಿಸಿಕೊಳ್ಳಲು ಮತ್ತು ಅದನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಸಂಬಂಧಿಸಿದೆ ಎಂದು ಹೇಳಿದರು.
ಪ್ರಪಂಚದಾದ್ಯಂತ ಕೌಶಲ್ಯಗಳು ಬಹಳ ಮುಖ್ಯ. ತಂತ್ರಜ್ಞಾನ ಅನಾಹುತವಲ್ಲ, ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇಂದು ವಿದ್ಯಾರ್ಥಿಗಳು 3D ಪ್ರಿಂಟರ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದಾರೆ ಮತ್ತು ವೇದ ಗಣಿತಕ್ಕಾಗಿ ಅಪ್ಲಿಕೇಶನ್‌ಗಳನ್ನು ಚಾಲನೆ ಮಾಡುತ್ತಿದ್ದಾರೆ. ಅವರು ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಉತ್ತಮ ಅಂಕಗಳನ್ನು ಗಳಿಸಲು ಶಿಕ್ಷಕರು ಮತ್ತು ಪೋಷಕರ ಒತ್ತಡಕ್ಕೆ ಒಳಗಾಗಿದ್ದೇವೆ ಎಂದು ವಿದ್ಯಾರ್ಥಿಗಳು ಭಾವಿಸಬಾರದು. ಪಾಲಕರು ಕೆಲವೊಮ್ಮೆ ತಮ್ಮ ಮಕ್ಕಳ ಶಕ್ತಿ ಮತ್ತು ಆಸಕ್ತಿಗಳನ್ನು ಗಮನಿಸಲು ವಿಫಲರಾಗುತ್ತಾರೆ. ಪಾಲಕರು ತಮ್ಮ ಕನಸುಗಳನ್ನು ಮಕ್ಕಳಿಗೆ ಚುಚ್ಚಬಾರದು. ತಮ್ಮ ಭವಿಷ್ಯವನ್ನು ಮುಕ್ತವಾಗಿ ನಿರ್ಧರಿಸಲು ಅವರಿಗೆ ಅವಕಾಶ ನೀಡಬೇಕು ಎಂದು ಪ್ರಧಾನಿ ಮೋದಿ ಸಲಹೆ ನೀಡಿದರು.(ಏಜೆನ್ಸೀಸ್​)
ತುಮಕೂರಿಗೆ ಆಗಮಿಸಿದ ಅಮಿತ್​ ಶಾಗೆ ಭವ್ಯ ಸ್ವಾಗತ: ಸಿದ್ಧಗಂಗಾ ಮಠದವರೆಗೂ ರೋಡ್​ ಶೋ

ಬಾಲ್ಯ ವಿವಾಹ ಮಾಡಿದ್ರು, ತಾಳಿ ಬಿಚ್ಚಿಸಿ SSLC ಪರೀಕ್ಷೆಗೆ ಕಳಿಸಿದ್ರು! 2 ದಿನ ಆಗ್ತಿದ್ದಂತೆ ಪಾಲಕರಿಗೆ ಕಾದಿತ್ತು ಶಾಕ್​

ಯಾರದ್ದೋ ಮನೆಯ ಬೀಗ ಒಡೆದು ಗೃಹಪ್ರವೇಶ ಮಾಡಿಬಿಟ್ಟ! ಖರೀದಿಸದೇ ಓನರ್‌ಷಿಪ್… ಬೆಂಗ್ಳೂರಲ್ಲಿದ್ದಾಕೆಗೆ ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 4 =
Remember me
