ವೆಲ್ಲೂರು​:ಬಿಹಾರ ಮೂಲದ ವೈದ್ಯೆಯ ಮೇಲೆ ಇಬ್ಬರು ಅಪ್ರಾಪ್ತರು ಸೇರಿದಂತೆ ಮೂವರು ಸಾಮೂಹಿಕ ಅತ್ಯಾಚಾರ ಎಸಗಿರುವ ಆತಂಕಕಾರಿ ಘಟನೆ ತಮಿಳುನಾಡಿನ ವೆಲ್ಲೂರಿ​ನಲ್ಲಿ ಮಾರ್ಚ್​ 16ರ ತಡರಾತ್ರಿ ನಡೆದಿರುವುದಾಗಿ ತಿಳಿದುಬಂದಿದೆ.
ವೈದ್ಯೆಯ ಮೇಲೆ ಮೂವರು ಸಾಮೂಹಿಕ ಅತ್ಯಾಚಾರ ಎಸಗುವ ವೇಳೆ ಇನ್ನಿಬ್ಬರು ಆರೋಪಿಗಳು ಸಂತ್ರಸ್ತೆಯ ಪುರುಷ ಸಹೋದ್ಯೋಗಿಯನ್ನು ಹಿಡಿದಿಟ್ಟುಕೊಂಡಿದ್ದರು ಎಂದು ತಿಳಿದುಬಂದಿದೆ. ಮಹಾರಾಷ್ಟ್ರದ ನಾಗ್ಪುರ ಮೂಲದ ಸಹೋದ್ಯೋಗಿ ಜತೆ ಮಾರ್ಚ್​ 16ರ ರಾತ್ರಿ ಕಟ್ಪಾಡಿಯಲ್ಲಿರುವ ಚಿತ್ರಮಂದಿರದಲ್ಲಿ ಸಿನಿಮಾ ನೋಡಿಕೊಂಡು ಮನೆಗೆ ಹಿಂದಿರುಗುತ್ತಿದ್ದರು.
ನಾಲ್ವರು ಪುರುಷ ಪ್ರಯಾಣಿಕರಿದ್ದ ಶೇರ್​ ಆಟೋವನ್ನು ಇಬ್ಬರು ಏರಿದ್ದರು. ಚೆನ್ನೈ-ಬೆಂಗಳೂರು ಹೆದ್ದಾರಿ ಎನ್​ಎಚ್​48ರಲ್ಲಿ ಗೀನ್​ ಸರ್ಕಲ್​ ಮಾರ್ಗವಾಗಿ ಓಲ್ಡ್​ ಟೌನ್​ ಕಡೆ ಹೋಗದೇ ಆಟೋ ಚಾಲಕ ಸಥುವಚಾರಿ ಕಡೆಗೆ ಹೋಗಿದ್ದಾನೆ. ಬಳಿಕ ವೈದ್ಯೆಯನ್ನು ಸಮೂಹಿಕವಾಗಿ ಅತ್ಯಾಚಾರ ಮಾಡಿ, ಅವರಿಂದ 40 ಸಾವಿರ ಹಣ ಮತ್ತು ಎರಡು ಸವರನ್​ ಚಿನ್ನಾಭರಣವನ್ನು ಕಸಿದುಕೊಂಡಿದ್ದಾರೆ.
ಈ ಪ್ರಕರಣದ ಬಗ್ಗೆ ತಮಿಳುನಾಡಿನ ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಧ್ವನಿ ಎತ್ತಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಹಾಲಿ ಸಿಎಂ ಸ್ಟಾಲಿನ್​, ಮೂವರು (ಮತ್ತು ಇಬ್ಬರು ಬಾಲಾರೋಪಿಗಳು) ಆರೋಪಿಗಳು ಗ್ಯಾಲಕ್ಸಿ ಥಿಯೇಟರ್‌ನಿಂದ ಒಬ್ಬ ಪುರುಷ ಮತ್ತು ಮಹಿಳೆಯನ್ನು ಅಪಹರಿಸಿದ್ದಾರೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜುಗೆ ದಾರಿ ಕೇಳಿದರು. ಆದರೆ, ಅವರನ್ನು ಬೇರೆ ಮಾರ್ಗಕ್ಕೆ ಕೊಂಡೊಯ್ದು ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಮತ್ತು ಪುರುಷನಿಂದ ಎಟಿಎಂ ಕಾರ್ಡ್ ಬಳಸಿ 40,000 ರೂ. ಹಣವನ್ನು ಬಲವಂತವಾಗಿ ಡ್ರಾ ಮಾಡಿದ್ದಾರೆ ಎಂದು ವಿಚಾರಣೆಯ ಸಮಯದಲ್ಲಿ ಪೊಲೀಸರಿಗೆ ತಿಳಿದುಬಂದಿದೆ ಎಂದರು.
ಸಂತ್ರಸ್ತೆಯು ತನ್ನ ತವರು ರಾಜ್ಯ ಬಿಹಾರಕ್ಕೆ ತೆರಳಿದ್ದಾರೆ ಮತ್ತು ಮಂಗಳವಾರ ಆನ್‌ಲೈನ್ ಮೂಲಕ ದೂರು ದಾಖಲಿಸಿದ್ದಾರೆ ಎಂದು ಸ್ಟಾಲಿನ್ ಹೇಳಿದ್ದಾರೆ ಘಟನೆ ಸಂಬಂಧ ವೆಲ್ಲೂರು ಉತ್ತರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 147, 148, 342, 365, 368, 376 (ಡಿ), 376 (ಇ), 395, 397, 506 (ii) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.(ಏಜೆನ್ಸೀಸ್​)
ಗ್ರಾಹಕರಿಗೆ ಮತ್ತೆ ಕಹಿ ಸುದ್ದಿ: ನಾಲ್ಕೇ ದಿನದಲ್ಲಿ 3ನೇ ಬಾರಿ ಪೆಟ್ರೋಲ್​-ಡೀಸೆಲ್​ ಬೆಲೆ ಏರಿಕೆ, ಇಂದಿನ ದರ ಹೀಗಿದೆ…

ಕಾಶ್ಮೀರ್​ ಫೈಲ್ಸ್​ ಚಿತ್ರಕ್ಕೆ ತೆರಿಗೆ ಮುಕ್ತಕ್ಕೆ ಬೇಡಿಕೆ: ಸಿಎಂ ಕೇಜ್ರಿವಾಲ್​ ಉತ್ತರ ಕೇಳಿ ದಂಗಾದ ಬಿಜೆಪಿಗರು!

ಅಭ್ಯರ್ಥಿ ಹುಡುಕಾಟ ಶುರು!; ಸಂಭಾವ್ಯರಿಗಾಗಿ ತಲಾಶ್, ಕಾಂಗ್ರೆಸ್​ನಲ್ಲಿ 2 ಹಂತದ ಸರ್ವೆ ವಾರ್

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 − six =
Remember me
