ನವದೆಹಲಿ:ಗೋವಿನ ಸಗಣಿ ಉಪಯೋಗಿಸಿ, ಕರೊನಾದಿಂದ ಗುಣವಾಗಬಹುದು ಎಂದು ನಂಬಿರುವವರಿಗೆ ಭಾರತದ ಪರಿಣಿತ ವೈದ್ಯರುಗಳು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಗೋವಿನ ಸಗಣಿ ಪರಿಣಾಮಕಾರಿ ಎನ್ನುವುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳು ಇಲ್ಲ. ಇದರಿಂದ ಇನ್ನಿತರ ಕಾಯಿಲೆಗಳು ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಭಾರತದಲ್ಲಿ ಕರೊನಾ ವೈರಸ್​ ಎರಡನೇ ಅಲೆ ಜನಜೀವನವನ್ನು ತಲ್ಲಣಗೊಳಿಸಿದೆ. ಈವರೆಗೆ 22.66 ಮಿಲಿಯನ್​ ಕರೊನಾ ಪ್ರಕರಣಗಳು ಮತ್ತು 246,116 ಸಾವುಗಳು ವರದಿಯಾಗಿವೆ. ದೇಶಾದ್ಯಂತ ಜನರು ಆಕ್ಸಿಜನ್​, ಬೆಡ್​ ಹಾಗೂ ಔಷಧಗಳಿಗಾಗಿ ಪರದಾಡುತ್ತಿದ್ದು, ಇವುಗಳ ಕೊರತೆಯಿಂದ ಜನರು ಸಾವಿಗೀಡಾಗುತ್ತಿದ್ದಾರೆ.
ಆದರೆ ಗುಜರಾತ್​ನಲ್ಲಿ ಕೆಲವರು ವಾರಕ್ಕೆ ಒಮ್ಮೆ ಗೋವಿನ ಆಶ್ರಯ ತಾಣಗಳಿಗೆ ತೆರಳುತ್ತಿದ್ದು, ಸಗಣಿ ಮತ್ತು ಗೋವಿನ ಮೂತ್ರವನ್ನು ತಮ್ಮ ಮೈಕೈ ಸವರಿಕೊಳ್ಳುತ್ತಿದ್ದಾರೆ. ಅಲ್ಲದೆ, ಗೋವಿನ ಮೂತ್ರವನ್ನು ಕುಡಿಯುತ್ತಿದ್ದಾರೆ. ಇದರಿಂದ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗಿ ಕೋವಿಡ್​ನಿಂದ ಮುಕ್ತವಾಗಬಹುದು ಎಂದು ನಂಬಿದ್ದಾರೆ.
ನಾವು ನೋಡುತ್ತಿದ್ದೇವೆ… ವೈದ್ಯರು ಸಹ ಇಲ್ಲಿಗೆ ಬರುತ್ತಿದ್ದಾರೆ. ಈ ಚಿಕಿತ್ಸೆಯು ಅವರ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ ಮತ್ತು ಅವರು ಯಾವುದೇ ಭಯವಿಲ್ಲದೆ ರೋಗಿಗಳ ಮುಂದೆ ಹೋಗಬಹುದು ಎಂದು ನಂಬಿರುವುದಾಗಿ ಔಷಧೀಯ ಕಂಪನಿಯೊಂದರ ಸಹಾಯಕ ವ್ಯವಸ್ಥಾಪಕ ಗೌತಮ್ ಮನಿಲಾಲ್ ಬೋರಿಸಾ ಹೇಳಿದ್ದಾರೆ. ಕಳೆದ ವರ್ಷ ಕೋವಿಡ್​ನಿಂದ ಚೇತರಿಸಿಕೊಳ್ಳಲು ಸಹ ಇದು ಸಹಾಯ ಮಾಡಿತು ಎಂದಿದ್ದಾರೆ.
ಗೋವಿನ ಆಶ್ರಯ ತಾಣಕ್ಕೆ ಭೇಟಿ ನೀಡುವವರು ಸಗಣಿ ಮತ್ತು ಮೂತ್ರವನ್ನು ಮಿಶ್ರಣ ಮಾಡಿಕೊಂಡು ತಮ್ಮ ದೇಹಗಳಿಗೆ ಲೇಪನ ಮಾಡಿಕೊಳ್ಳುತ್ತಾರೆ. ಇದಕ್ಕೆ ಪ್ರತಿಯಾಗಿ ಗೋವುಗಳನ್ನು ತಬ್ಬಿಕೊಳ್ಳುವ ಮೂಲಕ ಗೌರವವನ್ನು ಸೂಚಿಸುತ್ತಾರೆ. ಇಷ್ಟೇ ಅಲ್ಲದೆ, ತಮ್ಮ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಯೋಗಾಭ್ಯಾಸ ಮಾಡುತ್ತಾರೆ. ಅಚ್ಚರಿಯಂದರೇ ತಾವು ಲೇಪಿಸಿಕೊಂಡ ಸಗಣಿ ಮತ್ತು ಗೋವಿನ ಮಿಶ್ರಣವನ್ನು ಹಾಲು ಮತ್ತು ಮಜ್ಜಿಗೆಯಿಂದ ತೊಳೆಯುತ್ತಾರೆ.
ಭಾರತ ಮತ್ತು ವಿಶ್ವದಾದ್ಯಂತ ವೈದ್ಯರು ಮತ್ತು ವಿಜ್ಞಾನಿಗಳು ಕೋವಿಡ್​ಗೆ ಪರ್ಯಾಯ ಚಿಕಿತ್ಸೆಯನ್ನು ಅಭ್ಯಾಸ ಮಾಡುವುದರ ವಿರುದ್ಧ ಪದೇ ಪದೇ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಸಂಕೀರ್ಣ ಆಗಬಹುದು ಎಂದು ಎಚ್ಚರಿಸಿದ್ದಾರೆ.
ಕರೊನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಗೋವಿನ ಸಗಣಿ ಅಥವಾ ಮೂತ್ರವು ಕೆಲಸ ಮಾಡುತ್ತದೆ ಎಂಬುದಕ್ಕೆ ಯಾವುದೇ ದೃಢವಾದ ವೈಜ್ಞಾನಿಕ ಪುರಾವೆಗಳಿಲ್ಲ. ಇದು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಘದ ರಾಷ್ಟ್ರೀಯ ಅಧ್ಯಕ್ಷ ಡಾ.ಜೆ. ಜಯಲಾಲ್​ ತಿಳಿಸಿದ್ದಾರೆ. ಗೋವಿನ ಈ ಉತ್ಪನ್ನಗಳನ್ನು ಹಚ್ಚಿಕೊಳ್ಳುವುದು ಅಥವಾ ಸೇವಿಸುವುದರಿಂದ ಆರೋಗ್ಯಕ್ಕೆ ಅಪಾಯವಾಗಲಿದೆ ಮತ್ತು ಇತರ ರೋಗಗಳು ಪ್ರಾಣಿಗಳಿಂದ ಮನುಷ್ಯರಿಗೆ ಹರಡಬಹುದಾದ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.(ಏಜೆನ್ಸೀಸ್​)
ಆಕ್ಸಿಜನ್‌ ಮುಗೀತಿದೆ, ಯಾರೂ ಬರ್ತಿಲ್ಲ… ಮೃತ ನಟ ರಾಹುಲ್‌ನ ಹೃದಯವಿದ್ರಾವಕ ವಿಡಿಯೋ ಹಂಚಿಕೊಂಡ ಪತ್ನಿ

ಟ್ಯೂಶನ್​ಗೆ ಹೋದ ಬಾಲಕಿ ಮೇಲೆ ಶಿಕ್ಷಕಿಯ ಗಂಡನಿಂದ ರೇಪ್​: ಎರಡು ವರ್ಷದ ಬಳಿಕ ಆರೋಪಿ ಬಂಧನ

ನಟ ಸಲ್ಮಾನ್​ ಖಾನ್​ ಬಾಡಿಗಾರ್ಡ್​ ಶೇರಾ ಸಂಬಳ ಓರ್ವ ಸಿಇಒಗಿಂತಲೂ ಹೆಚ್ಚಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twenty =
Remember me
