ಗ್ವಾಲಿಯರ್​:ಶ್ವಾನ ಮಾನವನ ಆಪ್ತ ಸ್ನೇಹಿತ ಎಂಬುದರಲ್ಲಿ ಎರಡು ಮಾತಿಲ್ಲ. ಉಂಡ ಮನೆಗೆ ಮನುಷ್ಯ ಎರಡು ಬಗೆದ ಎಷ್ಟೋ ಉದಾಹರಣೆಗಳಿವೆ. ಆದರೆ, ನಾಯಿಯ ನಿಯತ್ತು ಪ್ರಶ್ನಿಸುವ ಉದಾಹರಣೆ ನಮ್ಮ ಮುಂದೆ ಇಲ್ಲ. ಇದೀಗ ಮತ್ತೊಂದು ಘಟನೆಯಲ್ಲಿ ನಾಯಿಯೊಂದು ತನ್ನ ನಿಯತ್ತು ಏನೆಂದು ಸಾಬೀತು ಮಾಡಿದೆ. ಅಪಹರಣಕಾರರಿಂದ ತನ್ನ ಮಾಲೀಕನನ್ನು ಕಾಪಾಡುವ ಮೂಲಕ ತನ್ನ ಸ್ವಾಮಿನಿಷ್ಠೆ ಪ್ರದರ್ಶಿಸಿದೆ.
ಮಧ್ಯಪ್ರದೇಶದ ಗ್ವಾಲಿಯರ್​ ನಗರದಲ್ಲಿ ಘಟನೆ ನಡೆದಿದೆ. ಪೊಲೀಸರ ಪ್ರಕಾರ ಕೆಲವು ದುಷ್ಕರ್ಮಿಗಳು ಗ್ವಾಲಿಯರ್​ನ ಅಶೋಕ್​ ನಗರದ ನಿವಾಸಿ ನಿತಿನ್​ ಎಂಬುವರನ್ನು ಭೇಟಿ ಮಾಡಲು ಅವರ ಮನೆಗೆ ಬಂದಿದ್ದರು. ಮಾತನಾಡಲೆಂದು ನಿತಿನ್ ಅವರನ್ನು ಮನೆಯಿಂದ ಹೊರಗೆ ಕರೆದರು. ಹೊರಗೆ ಬಂದ ನಿತಿನ್​ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು ಅವರನ್ನು ಕಾರಿನ ಒಳಗೆ ಎಳೆದುಕೊಳ್ಳಲು ಯತ್ನಿಸಿದ್ದಾರೆ. ಇದನ್ನು ನೋಡಿದ ನಿತಿನ್​ ಅವರ ಸಾಕು ನಾಯಿ ತಕ್ಷಣ ಜಿಗಿದು ಬಂದು ದುಷ್ಕರ್ಮಿಗಳ ಮೇಲೆ ದಾಳಿ ನಡೆಸಿದೆ. ನಾಯಿಯ ನಿರಂತರ ದಾಳಿಯಿಂದ ಬೆಚ್ಚಿಬಿದ್ದ ದುಷ್ಕರ್ಮಿಗಳು ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ಇದಾದ ಬಳಿಕ ಘಟನೆಯ ಬಗ್ಗೆ ಮಾಹಿತಿ ತಿಳಿದುಕೊಂಡ ಪೊಲೀಸರು ನಿತಿನ್​ ಮನೆಗೆ ಧಾವಿಸಿ ಬಂದು ವಿಚಾರಣೆ ನಡೆಸಿ, ಮಾಹಿತಿ ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಶ್ವಾನದ ಕಾರ್ಯಕ್ಕೆ ಪೊಲೀಸರು ಸೇರಿದಂತೆ ಸ್ಥಳೀಯರು ಕೊಂಡಾಡಿದ್ದಾರೆ.
ಶ್ವಾನದ ರಕ್ಷಣೆ ವಿಡಿಯೋ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಶ್ವಾನ ನಿಯತ್ತಿಗೆ ನೆಟ್ಟಿಗರು ಫಿದಾ ಆಗಿದ್ದು, ಸಲಾಂ ಹೊಡೆದಿದ್ದಾರೆ.(ಏಜೆನ್ಸೀಸ್​)

ಲುಡೋ ಆಡುವಾಗ ಗಾಳ ಹಾಕಿದ ಪಾಕ್‌ ಯುವಕ: ಪ್ರಿಯಕರನ ಸಿಗಲು ಮಗುವನ್ನೂ ಬಿಟ್ಟುಹೋಗಿ ಸಿಕ್ಕಿಬಿದ್ದ ಅಮ್ಮ!

https://www.vijayavani.net/a-pushpa2-rashmika-demanded-remuneration-cost-rs-3-crore/
ಅಯ್ಯೋ ಶಿವನೆ… ವ್ಯಾಕ್ಸಿನೂ ಹಾಕಿಸ್ಕೊಂಡಿರುವೆ, ಮನೆಯಲ್ಲೇ ಇದ್ದೆ… ಕರೊನಾ ಬಂದದ್ಹೇಗೆ ಎಂದ ನಟಿ, ಸಂಸದೆ!

Sign in to your account
Please enter an answer in digits:five × one =
Remember me
