ನವದೆಹಲಿ:ಈಗಾಗಲೇ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿರುವ ಜನರಿಗೆ ಮತ್ತೊಮ್ಮೆ ದರ ಏರಿಕೆ ಬರೆ ಬಿದ್ದಿದೆ. ಈಗಾಗಲೇ ಸಾವಿರ ರೂಪಾಯಿ ಗಡಿ ದಾಟಿ ಬಡ ಜನರಿಗೆ ಗಗನಕುಸುಮವಾಗಿರುವ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ ಏರಿಕೆಯಾಗಿದ್ದು, ಸಾಮಾನ್ಯ ಜನರ ಜೇಬಿಗೆ ಮತ್ತಷ್ಟು ಕತ್ತರಿ ಬಿದ್ದಿದೆ.
ಪೆಟ್ರೋಲಿಯಂ ಕಂಪನಿಗಳು ಇಂದು ಎಲ್​ಪಿಜಿ ದರ ಪರಿಷ್ಕರಣೆ ಮಾಡಿದ್ದು, 14.2 ಕೆಜಿಯ ಗೃಹಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ 50 ರೂಪಾಯಿ ಏರಿಕೆ ಮಾಡಿದೆ. ದೆಹಲಿಯಲ್ಲಿ ಈ ಹಿಂದೆ 1003 ರೂಪಾಯಿ ಇದ್ದ ಸಿಲಿಂಡರ್​ ಬೆಲೆ ಇದೀಗ 1053 ರೂ. ಗೆ ಏರಿಕೆಯಾಗಿದೆ.
ಮುಂಬೈನಲ್ಲಿ 1052, ಕೊಲ್ಕತ್ತಾದಲ್ಲಿ 1079, ಚೆನ್ನೈನಲ್ಲಿ 1068 ಮತ್ತು ಬೆಂಗಳೂರಿನಲ್ಲಿ 1055 ರೂಪಾಯಿಗೆ ಬೆಲೆ ಏರಿಕೆಯಾಗಿದೆ.
ಗ್ಯಾಸ್​ ಏಜೆನ್ಸಿಗಳು ಸಿಲಿಂಡರ್​ ಅನ್ನು ಮನೆ ಸಾಗಿಸಲು ಹಲವೆಡೆ ಹೆಚ್ಚುವರಿಯಾಗಿ 50 ರೂಪಾಯಿ ತೆಗೆದುಕೊಳ್ಳುತ್ತಿದೆ. ಕೇಂದ್ರ ಸರ್ಕಾರ ಸಿಲಿಂಡರ್​ ಡಿಲಿವರಿಗೆ ಹಣ ಕೊಡಬೇಡಿ ಎಂದು ಹೇಳಿದರೂ, ಡಿಲಿವರಿ ಮಾಡುವವರು ಹಣ ಪಡೆಯುತ್ತಿದ್ದಾರೆ. ಇದರಿಂದ ಒಂದು ಸಿಲಿಂಡರ್​ಗೆ ಬರೋಬ್ಬರಿ 1100 ಆಗಲಿದ್ದು, ನಿಜಕ್ಕೂ ಇದು ಜನ ಸಾಮಾನ್ಯರಿಗೆ ಭಾರಿ ಹೊರೆಯಾಗಿದೆ.
ಗೃಹಬಳಕೆಯ 5 ಕೆಜಿ ಸಿಲಿಂಡರ್​ ಬೆಲೆಯಲ್ಲೂ ಪೆಟ್ರೋಲಿಯಂ ಕಂಪನಿಗಳು 18 ರೂಪಾಯಿ ಏರಿಕೆ ಮಾಡಿವೆ. ಆದರೆ, ವಾಣಿಜ್ಯ ಬಳಕೆಯ 19 ಕೆಜಿ ಸಿಲಿಂಡರ್​ ಬೆಲೆಯಲ್ಲಿ ಕೇವಲ 8.50 ರೂಪಾಯಿಯನ್ನು ಇಳಿಸಿದೆ.
14.2 ಕೆಜಿ ಗೃಹಬಳಕೆಯ LPG ಸಿಲಿಂಡರ್ ದರವನ್ನು ಕೊನೆಯದಾಗಿ 2022ರ ಮೇ 19ರಂದು 4 ರೂ. ಹೆಚ್ಚಿಸಲಾಗಿತ್ತು.(ಏಜೆನ್ಸೀಸ್​)
ಆಸ್ತಿ ವಿಚಾರವಾಗಿ ಕೊಲೆಯಾಗಿದೆ ಅನ್ನೋದು ಸುಳ್ಳು: ಸ್ಫೋಟಕ ಸಂಗತಿ ಬಿಚ್ಚಿಟ್ಟ ಆರೋಪಿ ಮಹಾಂತೇಶ್​ ಪತ್ನಿ

ಚಂದ್ರಶೇಖರ ಗುರೂಜಿ ಕೊಲೆಗೈದ ಆರೋಪಿಗಳು ಅಷ್ಟು ಬೇಗ ಸಿಕ್ಕಿಬೀಳಲು ಆ ಒಂದು ಫೋನ್​ ಕಾಲ್ ನೆರವಾಯ್ತಾ?​

ಬ್ರಿಟನ್​ ಪ್ರಧಾನಿಗೆ ಬಿಗ್​​ ಶಾಕ್​: ಸಚಿವ ಸ್ಥಾನಕ್ಕೆ ಇನ್ಫಿ ಮೂರ್ತಿ ಅಳಿಯ ರಿಷಿ ಸುನಾಕ್ ರಾಜೀನಾಮೆ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight − 6 =
Remember me
