ಶಿಮ್ಲಾ:ವಾಹನಗಳಿರುವುದು ಸುರಕ್ಷಿತ ಪ್ರಯಾಣಕ್ಕೆ ಎಂಬುದನ್ನೇ ಕೆಲವರು ಮರೆತು ಬಿಟ್ಟಿದ್ದಾರೆ. ರಸ್ತೆಗಳಲ್ಲಿ ಬೇಕಾಬಿಟ್ಟಿ ವಾಹನಗಳನ್ನು ಚಲಾಯಿಸಿಕೊಂಡು, ತಾವೂ ಅಪಾಯಕ್ಕೆ ಸಿಲುಕುವುದಲ್ಲದೆ, ಇತರೆ ಪ್ರಯಾಣಿಕರಿಗೆ ತೊಂದರೆ ಕೊಡುತ್ತಾರೆ. ಇಂಥದ್ದೆ ಘಟನೆ ಇದೀಗ ಹಿಮಾಚಲ ಪ್ರದೇಶದ ಸೋಲನ್​ ಜಿಲ್ಲೆಯಲ್ಲಿ ನಡೆದಿದೆ.
ರಸ್ತೆಯಲ್ಲಿ ಕಾರಿನಲ್ಲಿ ಸಾಹಸ ಮಾಡುವಾಗ ನಿಯಂತ್ರಣದ ಕಳೆದುಕೊಂಡ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ಪಕ್ಕದ ರಸ್ತೆಗೆ ಕಾರು ಹಾರಿದ ಘಟನೆ ಜುಲೈ 26ರ ಮಂಗಳವಾರ ಸೋಲನ್​ ಜಿಲ್ಲೆಯಲ್ಲಿ ನಡೆದಿದೆ. ಅದೃಷ್ಟವಶಾತ್​ ಕಾರು ಚಾಲಕನಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಆದರೆ, ಕಾರು ಮಾತ್ರ ಜಖಂಗೊಂಡಿದೆ.
ಈ ಘಟನೆ ಸೋಲನ್​ನ ರಾಷ್ಟ್ರೀಯ ಹೆದ್ದಾರಿ 5ರಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರ ಟೀಕೆಗೆ ಗುರಿಯಾಗಿದೆ.
#WATCH| HP: A video went viral showing a car jumping over a divider & colliding with railing on NH-5 in Solan; a resident from Amritsar tried performing stunts while rash driving. Vehicle damaged but driver safe. Case filed u/s 279 of IPC in Dharampur PS: Solan Police (25.07)pic.twitter.com/o5ajWRJuiG
— ANI (@ANI)July 25, 2022

ಕಾರು ಚಾಲಕನನ್ನು ಅಮೃತಸರ ನಿವಾಸಿ ಎಂದು ಗುರುತಿಸಲಾಗಿದೆ. ವಿಡಿಯೋದಲ್ಲಿ ಕಾರು ಚಾಲಕ ಡ್ರೈವಿಂಗ್​ ಮಾಡುತ್ತಾ ಸಾಹಸ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಈ ವೇಳೆ ಡಿವೈಡರ್​ಗೆ ಡಿಕ್ಕಿ ಹೊಡೆಯುವ ಕಾರು, ಪಕ್ಕದ ರಸ್ತೆಗೆ ಹಾರುತ್ತದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಸೋಲನ್​ ಪೊಲೀಸರು, ಚಾಲಕನ ವಿರುದ್ಧ ಪ್ರಕರಣ ದಾಖಲಿಸಿರುವುದಾಗಿ ಹೇಳಿದ್ದಾರೆ.(ಏಜೆನ್ಸೀಸ್​)
VIDEO| ಊಟದಲ್ಲಿ ಹಾವಿನ ತಲೆ ಕಂಡು ಬೆಚ್ಚಿಬಿದ್ದ ವಿಮಾನ ಸಿಬ್ಬಂದಿ: ಭಯಾನಕ ವಿಡಿಯೋ ವೈರಲ್​!

ನೀವು ಹೀಗೆ ಮಾಡಿದ್ರೆ ಮೊಸಳೆಗಳು ನಿಮ್ಮನ್ನು ಕಚ್ಚದೇ ಬಿಡುವುದಿಲ್ಲ: ಬಿಜೆಪಿಗೆ ಸಿಎಂ ಮಮತಾ ವಾರ್ನಿಂಗ್​

ಏನಾಯ್ತು ರಾಕಿ ಭಾಯ್​ಗೆ? ಯಾಕಿಷ್ಟು ಸೈಲೆಂಟ್​ ಆಗಿದ್ದಾರೆ? ಆದಷ್ಟು ಬೇಗ ಯಶ್​ ಇದನ್ನು ಮಾಡಲೇಬೇಕಿದೆ….

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:9 − seven =
Remember me
