ಪುಣೆ:ನಂಜುಂಡಿ ಕಲ್ಯಾಣ ಚಿತ್ರದ “ಒಳಗೆ ಸೇರಿದರೆ ಗುಂಡು ಹುಡುಗಿ ಆಗುವಳು ಗಂಡು” ಹಾಡು ಯಾರಿಗೆ ತಾನೇ ಗೊತ್ತಿಲ್ಲ. ಮಾಲಾಶ್ರೀ ಅವರ ಅದ್ಭುತ ನಟನೆಗೆ ಎಷ್ಟೋ ಮಂದಿ ಫಿದಾ ಆಗಿದ್ದಾರೆ. ಈಗಲೂ ಅನೇಕ ಸಂದರ್ಭದಲ್ಲಿ ಈ ಹಾಡು ಜನರನ್ನು ಮನರಂಜಿಸುತ್ತಲೇ ಇರುತ್ತದೆ. ಹೀಗ್ಯಾಕೆ ಈ ವಿಷಯ ಅಂತಿರಾ… ಈ ಹಾಡನ್ನು ನೆನಪು ಮಾಡುವ ರೀತಿಯಲ್ಲೇ ಮಹಾರಾಷ್ಟ್ರದ ಪುಣೆಯಲ್ಲಿ ಕಳೆದ ರಾತ್ರಿ ಒಂದು ಘಟನೆ ನಡೆದಿದೆ.
ಪಾನಮತ್ತ ಯುವತಿಯೊಬ್ಬಳು ಮದ್ಯದ ಅಮಲಿನಲ್ಲಿ ನಡುರಸ್ತೆಯಲ್ಲೇ ಬಿದ್ದು ಒದ್ದಾಡಿರುವ ಘಟನೆ ಪುಣೆಯಲ್ಲಿ ನಡೆದಿದೆ. ಯುವತಿಯ ತುಂಟಾಟಕ್ಕೆ ಕೆಲ ಕಾಲ ಸಂಚಾರ ವ್ಯವಸ್ಥೆಯೇ ಅಸ್ತವ್ಯಸ್ತವಾಯಿತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿಯೂ ಸಿಕ್ಕಾಪಟ್ಟೆ ವೈರಲ್​ ಆಗಿದೆ.
ಅಂದಹಾಗೆ ಯುವತಿಯ ಹೈಡ್ರಾಮ ಪುಣೆಯ ತಿಲಕ್​ ರಸ್ತೆಯ ಹಿರಾಬೌಗ್​ನಲ್ಲಿ ಮಂಗಳವಾರ ರಾತ್ರಿ 11 ಗಂಟೆಗೆ ಜರುಗಿದೆ. ಪಾನಮತ್ತ ಸ್ಥಿತಿಯಲ್ಲಿರುವ ಯುವತಿ ನಡುರಸ್ತೆಯಲ್ಲಿ ಬಿದ್ದು, ಒದ್ದಾಡಿ, ಯೋಗಾಸನದ ಭಂಗಿಗಳನ್ನು ಪ್ರದರ್ಶನ ಮಾಡಿದ್ದಾಳೆ. ಅಲ್ಲದೆ, ರಸ್ತೆಯಲ್ಲೇ ಅತ್ತಿಂದಿತ್ತ ಉರುಳಾಡಿದ್ದಾಳೆ. ರಸ್ತೆ ಪಕ್ಕಕ್ಕೆ ಸರಿಯುವಂತೆ ಜನರು ಕೇಳಿಕೊಂಡರ ಜಪ್ಪಯ್ಯ ಅನ್ನದ ಯುವತಿ ಪೊಲೀಸ್​ ಬರೋವರೆಗೂ ರಸ್ತೆಯಲ್ಲಿ ಹೈಡ್ರಾಮ ಮಾಡಿದ್ದಾಳೆ.
ಕೊನೆಗೆ ಯುವತಿಯ ಕಾಟ ತಾಳಲಾರದೇ ಸ್ಥಳೀಯರೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಮಹಿಳೆಯನ್ನು ತಮ್ಮೊಂದಿಗೆ ಕರೆದೊಯ್ದರು ಎನ್ನಲಾಗುತ್ತಿದೆ. ಆದರೆ, ಕೆಲವೊಂದು ವರದಿಗಳ ಪ್ರಕಾರ ಪೊಲೀಸರು ಬರುವುದನ್ನು ನೋಡಿ ಯುವತಿಯೇ ಮೇಲೆದ್ದು ಪರಾರಿಯಾದಳು ಎಂದು ಹೇಳಲಾಗುತ್ತಿದೆ. ಪರಾರಿ ಆಗಿರುವ ಆಕೆಗಾಗಿ ಹುಡುಕಾಟ ನಡೆಯುತ್ತಿರುವ ಬಗ್ಗೆ ಮಾಹಿತಿ ಇದೆ. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೂ ಯಾವುದೇ ಪ್ರಕರಣವನ್ನು ದಾಖಲಿಸಿಕೊಂಡಿಲ್ಲ.(ಏಜೆನ್ಸೀಸ್​)
Drunk woman enjoying her life in between the traffic on the road in Pune 😁#Tipsypic.twitter.com/UOVConGQO9
— QueenBee (@VaidehiTaman)August 4, 2021

ಸಿಎಂ ಬೊಮ್ಮಾಯಿ ವಿರುದ್ಧ ಭವಿಷ್ಯ ನುಡಿದ ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿಗೆ ಎದುರಾಯ್ತು ಸಂಕಷ್ಟ!

ಉಷ್ಣವಲಯದ ಜಿರಳೆ ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಚಲಿಸುವ ಜೀವಿಯೇ? ಫ್ಯಾಕ್ಟ್​ಚೆಕ್​ನಲ್ಲಿ ತಿಳಿದುಬಂದಿದ್ದೇನು?

ರಶ್ಮಿಕಾ ಮಾಡಿದ ಈ ಕೆಲಸಕ್ಕೆ ಪೋಷಕರಿಗೆ ಬೇಜಾರು… ಕಾರಣ ಏನ್​ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 8 =
Remember me
