ಪಣಜಿ:ಮಳೆಗಾಲವು ಜಲಪಾತಗಳ ಸೌಂದರ್ಯವನ್ನು ನಯನ ಮನೋಹರವಾಗಿಸುತ್ತಿದೆ. ಹಾಲಿನ ನೊರೆಯಂತೆ ಧುಮ್ಮಿಕ್ಕುವ ಜಲಧಾರೆಯ ಸೌಂದರ್ಯ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು. ಜೋಗ ಜಲಪಾತದಿಂದ ಹಿಡಿದು ಸಣ್ಣ ಸಣ್ಣ ತೊರೆಗಳು ಸಹ ಧುಮಿಕ್ಕಿ ಹರಿಯುತ್ತಿದೆ.
ಕೆಲವು ದಿನಗಳ ಹಿಂದೆ ವಿಶ್ವ ವಿಖ್ಯಾತ ಜೋಗ ಜಲಪಾತದ ವಿಡಿಯೋ ವೈರಲ್ ಆಗಿತ್ತು. ಇದೀಗ ಗೋವಾದ ಅತ್ಯಾಕರ್ಷಕ ದೂಧ್ ಸಾಗರ್ ಜಲಪಾತದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ.
ಭಗವಾನ್ ಮಹಾವೀರ್ ವನ್ಯಜೀವಿ ಅಭಯಾರಣ್ಯದ ನೈಸರ್ಗಿಕ ಸೌಂದರ್ಯದ ನಡುವೆ ದೂಧ್​​ ಸಾಗರ್ ನೆಲೆಗೊಂಡಿದೆ. ಇದನ್ನು ಸ್ಥಳೀಯವಾಗಿ ‘ಹಾಲಿನ ಸಮುದ್ರ’ ಎಂದು ಕರೆಯಲಾಗುತ್ತದೆ. ಇದು ಮಾಂಡೋವಿ ನದಿಯಿಂದ ರೂಪುಗೊಂಡಿದೆ ಮತ್ತು ಮೊದಲು 1017 ಅಡಿ ಎತ್ತರದಲ್ಲಿ ಪಶ್ಚಿಮ ಘಟ್ಟಗಳ ಪರ್ವತಗಳ ಮೇಲೆ ಹರಿಯುತ್ತದೆ. ನಾಲ್ಕು ಹೊಳೆಗಳಾಗಿ ವಿಭಜಿಸುತ್ತದೆ.
ರಾಜಕಾರಣಿ ಕಿಶನ್ ರೆಡ್ಡಿ ಗಂಗಾಪುರಂ ಅವರು ಕೂ ಆ್ಯಪ್​ನಲ್ಲಿ ದೂಧ್​ ಸಾಗರ್ ಜಲಪಾತದ ವೀಡಿಯೊವನ್ನು ಹಂಚಿಕೊಂಡಿದ್ದು, ಹೆವೆನ್ ಮೀಟ್ಸ್ ಅರ್ಥ್! ದೂಧಸಾಗರ್ ಜಲಪಾತ, ಗೋವಾ ಎಂದು ಹೇಳಿದ್ದಾರೆ.
ಕರ್ನಾಟಕದ ಗೋವಾ ಮತ್ತು ಬೆಳಗಾವಿ ನಡುವಿನ ರೈಲು ಮಾರ್ಗದಲ್ಲಿ ನೆಲೆಗೊಂಡಿರುವ ಇದು ದೇಶದ ಅತ್ಯಂತ ಸುಂದರವಾದ ರಮಣೀಯ ತಾಣಗಳಲ್ಲಿ ಒಂದಾಗಿದೆ.
–Kishan Reddy Gangapuram (@kishanreddybjp)14 July 2022

ಕಳೆದ ವರ್ಷ 12 ಕೋಟಿ ರೂ. ಬಹುಮಾನ ಗೆದ್ರೂ ಇಂದಿಗೂ ಆಟೋ ಚಾಲಕ ಬದುಕುತ್ತಿರುವ ರೀತಿ ಎಲ್ಲರಿಗೂ ಸ್ಫೂರ್ತಿ!

ಚಾರ್ಲಿಗೆ ಕಣ್ಣೀರು ಹಾಕುವ ಸಿಎಂಗೆ ಜನತೆಗೆ ನೆರವಾಗುವ ಹೃದಯವಂತಿಕೆ ತೋರಲು ಕಷ್ಟವೇ? ಕಾಂಗ್ರೆಸ್ ಪ್ರಶ್ನೆ

ವಿಜಯ್​-ರಶ್ಮಿಕಾ ನಡುವಿನ ಲವ್​ ಲೈಫ್​ ಬಗ್ಗೆ ಬಹಿರಂಗವಾಗಿ ಮಾತನಾಡಿದ ಸಾರಾ ಅಲಿ ಖಾನ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × three =
Remember me
