ರಾಂಚಿ:ಜಾರ್ಖಂಡ್​ ಮುಖ್ಯಮಂತ್ರಿ ಹೇಮಂತ್​ ಸೊರೆನ್ ಅವರ ನಿಕಟವರ್ತಿಯ ಮನೆಯ ಮೇಲೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ನಡೆಸಿದ ದಾಳಿಯ ವೇಳೆ ಎರಡು ಎಕೆ-47 ರೈಫಲ್ಸ್​ ಪತ್ತೆಯಾಗಿರುವುದಾಗಿ ಬುಧವಾರ ವರದಿಯಾಗಿದೆ.
ಅಕ್ರಮ ಗಣಿಗಾರಿಕೆ ಪ್ರಕರಣದ ಅಕ್ರಮ ಹಣ ವರ್ಗಾವಣೆ ಸಂಬಂಧ ಪ್ರಸ್ತುತ ನಡೆಯುತ್ತಿರುವ ತನಿಖೆ ಸಂಬಂಧ ಜಾರ್ಖಂಡ್​ನ ಅನೇಕ ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ. ಜಾರ್ಖಂಡ್​ ಸಿಎಂ ನಿಕಟವರ್ತಿ ಪ್ರೇಮ್​ ಪ್ರಕಾಶ್​ ಎಂಬುವರಿಗೆ ಸೇರಿದ ಮನೆಯ ಮೇಲೆ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸಿದಾಗ, ಬೀರುವಿನಲ್ಲಿ ಎಕೆ-47 ರೈಫಲ್ಸ್​ ಪತ್ತೆಯಾಗಿವೆ.
ED has recovered AK 47 from the premises of middleman Prem Prakash: Sources
Raids are underway at multiple locations in Ranchi (Jharkhand) in an ongoing investigation in connection with illegal mining and extortion.pic.twitter.com/RFlIxcnOkN
— ANI (@ANI)August 24, 2022

2022ರ ಮೇ ತಿಂಗಳಲ್ಲಿ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ರಿಯಲ್ ಎಸ್ಟೇಟ್ ಉದ್ಯಮಿ ಪ್ರೇಮ್ ಪ್ರಕಾಶ್ ಅವರನ್ನು ಪ್ರಶ್ನಿಸಿತ್ತು. ಮೂಲಗಳ ಪ್ರಕಾರ ಪ್ರಕಾಶ್​ ಬಿಹಾರದ ಸಾಸರಾಮ್​ ಮೂಲದವರು. ಜಾರ್ಖಂಡ್​ ಸರ್ಕಾರದಲ್ಲಿ ಪ್ರಕಾಶ್​ಗೆ ತುಂಬಾ ವರ್ಚಸ್ಸು ಇದೆ. ರಾಜಕಾರಣಿಗಳು ಮತ್ತು ಅಧಿಕಾರಿಗಳ ಜೊತೆ ಪ್ರಕಾಶ್​ಗೆ ಆಪ್ತ ಸಂಬಂಧವಿದೆ.(ಏಜೆನ್ಸೀಸ್​)
ಲಾಡ್ಜ್​ಗೆ ಕರೆಸಿಕೊಂಡು ಯುವಕನ ಬಳಿ ಹಣ, ಚಿನ್ನದ ಸರ, ಮೊಬೈಲ್​​ ದೋಚಿದ್ದ ಖತರ್ನಾಕ್​ ಲೇಡಿ ಅಂದರ್​!

ಮೇಕೆ ತಂದಿಟ್ಟ ಸಂಕಷ್ಟ: ರಾತ್ರಿ ಸುಂದರ ಕನಸು ಕಂಡ, ಬೆಳಗ್ಗೆ ಮರ್ಮಾಂಗವೇ ಕಟ್​- ಆಗಿದ್ದೇನು ನೋಡಿ..

ಬಳ್ಳಾರಿಯಲ್ಲಿ ಭೀಕರ ಅಪಘಾತ, ಪತಿ-ಪತ್ನಿ-ಮಗು ಸ್ಥಳದಲ್ಲೇ ಸಾವು: ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಕರೆದೊಯ್ಯುವಾಗ ದುರಂತ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + one =
Remember me
