ನವದೆಹಲಿ:ಭಾರತದಲ್ಲಿ ಪ್ರಸ್ತುತ ಮದುವೆ ಸೀಸನ್​ ನಡೆಯುತ್ತಿದೆ. ಈ ಸಂದರ್ಭದಲ್ಲಿ ಪ್ರತಿದಿನ ನೂರಾರು ಮದುವೆಗಳು ನಡೆಯುತ್ತಿರುತ್ತವೆ. ವಿವಾಹಕ್ಕೆ ಸಂಬಂಧಿಸಿದ ಅನೇಕ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಪ್ರತಿದಿನ ಶೇರ್​ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವೊಂದಿಷ್ಟು ವಿಡಿಯೋ ವಿಶೇಷ ಕಾರಣಗಳಿಂದಾಗಿ ವೈರಲ್​ ಆಗಿಬಿಡುತ್ತವೆ. ಅದೇ ರೀತಿ ವೈರಲ್​ ಆಗಿರುವ ಈ ಒಂದು ವಿಡಿಯೋ ನೋಡಿದರೆ ನಿಮ್ಮ ಹುಬ್ಬೇರುವುದು ಖಂಡಿತ.
ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿರುವ ವರನಿಗೆ ವಯಸ್ಸು 60 ವರ್ಷ ದಾಟಿರುವಂತೆ ಕಾಣುತ್ತದೆ. ಆದರೆ, 25 ವರ್ಷಕ್ಕಿಂತ ಹೆಚ್ಚು ವಯಸ್ಸಾಗಿರುವಂತೆ ವಧು ಕಾಣಿಸುವುದಿಲ್ಲ. ಇಬ್ಬರ ನಡುವೆ ಭಾರೀ ವಯಸ್ಸಿನ ಅಂತರವಿದೆ. ಮದುವೆ ಗಂಡಿನ ವೇಷದಲ್ಲಿ ಹಿರಿಯ ವ್ಯಕ್ತಿ ಕುಳಿತಿದ್ದರೆ, ಅವರ ಪಕ್ಕದಲ್ಲಿ ಯುವತಿ ನಗುತ್ತಾ ಕುಳಿತಿರುವುದು ವಿಡಿಯೋದಲ್ಲಿದೆ.
ವೀಡಿಯೋ ನೋಡಿದರೆ ಹಾರ ಬದಲಾಯಿಸುವ ಕಾರ್ಯಕ್ರಮ ಮುಗಿದಿದೆ ಎಂದು ಗೊತ್ತಾಗುತ್ತದೆ. ಇದಾದ ನಂತರ ವಧು-ವರರಿಬ್ಬರೂ ವೇದಿಕೆಯ ಮೇಲೆ ಕುಳಿತಿರುವುದು ಕಂಡುಬರುತ್ತದೆ. ವಧು-ವರರ ವಯಸ್ಸಿನಲ್ಲಿ 35 ವರ್ಷಕ್ಕೂ ಹೆಚ್ಚು ಅಂತರವಿರುವುದನ್ನು ನೀವು ನೋಡಬಹುದು. ವರನನ್ನು ಎಲ್ಲರು ಬಾಬ್ಜಿ ಎಂದು ಕರೆರೆಯುವುದನ್ನು ಕೇಳಬಹುದು. ವರನ ಗಡ್ಡ ಸಂಪೂರ್ಣ ಬಿಳಿಯಾಗಿದೆ.
ಇನ್ನು ವಿಡಿಯೋದ ಹಾಸ್ಯಮಯ ಕ್ಷಣ ಯಾವುದೆಂದರೆ, ಕ್ಯಾಮೆರಾಮೆನ್​ ವಧುವಿನ ಕಡೆ ತನ್ನ ಕ್ಯಾಮೆರಾ ಕಣ್ಣನ್ನು ತಿರುಗಿಸಿದಾಗ ವಧು ತುಂಬಾ ನಾಚಿಕೊಳ್ಳುತ್ತಾಳೆ. ಇದಲ್ಲದೆ, ಕ್ಯಾಮೆರಾಗೆ ತನ್ನ ಮುಖವನ್ನು ತೋರಿಸಲು ಹಿಂಜರಿದು ಮುಖವನ್ನು ಸೆರಗಿನಿಂದ ಮುಚ್ಚಿಕೊಳ್ಳುತ್ತಾಳೆ. ಇದೇ ದೃಶ್ಯ ವಿಡಿಯೋದ ಕೇಂದ್ರ ಬಿಂದುವಾಗಿದ್ದು, ಎಲ್ಲರೂ ವಿಡಿಯೋವನ್ನು ಟ್ರೋಲ್​ ಮಾಡುತ್ತಿದ್ದಾರೆ.
ಬಹುಶಃ ಯುವತಿ ಬಡವಳಾಗಿರಬಹುದು, ಅದಕ್ಕೆ ವಯಸ್ಸಾದ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾಳೆ ಎಂದು ಕೆಲವರು ಕಾಮೆಂಟ್​ ಮಾಡಿದರೆ, ಇನ್ನು ಕೆಲವರು ಬಹುಶಃ ಇಂದು ತಮಾಷೆಗಾಗಿ ಮಾಡಿದ ವಿಡಿಯೋ ಇರಬಹುದು ಎಂದಿದ್ದಾರೆ. ಆದರೆ, ಈ ವಿಡಿಯೋವನ್ನು ಎಲ್ಲಿ ಸೆರೆಹಿಡಿಯಲಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದರೆ, ಭುತ್ನಿ ಕೆ ಮೀಮ್ಸ್​ (bhutni_ke_memes) ಹೆಸರಿನ ಇನ್​​ಸ್ಟಾಗ್ರಾಂ ಪೇಜ್​ನಲ್ಲಿ ಅಪ್​ಲೋಡ್​ ಆಗಿದ್ದು, ಸಾವಿರಾರು ಮಂದಿ ವೀಕ್ಷಣೆ ಮಾಡಿದ್ದಾರೆ.(ಏಜೆನ್ಸೀಸ್​)

A post shared by Bhutni_ke (@bhutni_ke_memes)

ನಡು ರಸ್ತೆಯಲ್ಲೇ ಬಡಿದಾಡಿಕೊಂಡ 20 ವಿದ್ಯಾರ್ಥಿನಿಯರು: ಜಡೆ ಜಗಳದ ಹಿಂದಿನ ಕಾರಣ ಬಹಿರಂಗ!

ಚೇತನಾ ರಾಜ್​ ಸಾವು ಪ್ರಕರಣ: ತಲೆಯಲ್ಲಿ ಕೂದಲು ಇಲ್ಲದಿದ್ರೂ… ಸ್ಯಾಂಡಲ್​ವುಡ್​ ವಿರುದ್ಧ ಸಮರ ಸಾರಿದ ನಟಿ ರಮ್ಯಾ!

ಬಾಲಿವುಡ್​ ಬೆಡಗಿಯರ ಬುಟ್ಟಿಗೆ ಬೀಳಿಸಿ ಕಂಬಿ ಎಣಿಸ್ತಿರೋ ಈತನಿಗೆ ನೆನಪಾಗ್ತಿದ್ದಾಳಂತೆ ಪತ್ನಿ! ಜೈಲಲ್ಲೇ ಉಪವಾಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
