ಭುವನೇಶ್ವರ:ವಯಸ್ಸಾದ ಮಹಿಳೆಯೊಬ್ಬಳ ಮೇಲೆ ದಾಳಿ ನಡೆಸಿದ ಕಾಡಾನೆಯೊಂದು ಆಕೆಯ ಪ್ರಾಣ ತೆಗೆದಿದ್ದಲ್ಲದೆ, ಅಂತ್ಯಕ್ರಿಯೆಯ ವೇಳೆ ಮತ್ತೆ ದಾಳಿ ನಡೆಸಿ ಮೃತದೇಹವನ್ನು ವಿರೂಪಗೊಳಿಸಿದ ಘಟನೆ ಒಡಿಶಾದ ಮಯೂರ್​ಭಂಜ್​ ಜಿಲ್ಲೆಯಲ್ಲಿ ನಡೆದಿದೆ.
ಮೃತ ವೃದ್ಧೆಯನ್ನು ರಾಯ್​ಪಾಲ್​​ ಗ್ರಾಮದ ನಿವಾಸಿ ಮಾಯಾ ಮರ್ಮು (70) ಎಂದು ಗುರುತಿಸಲಾಗಿದೆ. ವೃದ್ಧೆಯು ಗುರುವಾರ ಬೆಳಗ್ಗೆ ಕೊಳವೆ ಬಾವಿಯಿಂದ ನೀರು ಸಂಗ್ರಹಿಸುವಾಗ ದಾಲ್ಮಾ ವನ್ಯಜೀವಿ ಅಭಯಾರಣ್ಯದಿಂದ ದಾರಿ ತಪ್ಪಿ ಬಂದ ಕಾಡಾನೆಯೊಂದು ಆಕೆಯ ಮೇಲೆ ದಾಳಿ ಮಾಡಿದೆ.
ಆನೆಯ ತುಳಿತದಿಂದ ಗಂಭೀರವಾಗಿ ಗಾಯಗೊಂಡಿದ್ದ ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಿದಾದರೂ ಚಿಕಿತ್ಸೆ ಫಲಕಾರಿಯಾಗದೇ ಆಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆಯುತ್ತಾಳೆ. ಇದಾದ ಬಳಿಕ ಆಕೆಯ ಕುಟುಂಬ ಸದಸ್ಯದರು ಗುರುವಾರ ಸಂಜೆ ಅಂತ್ಯಕ್ರಿಯೆ ನೆರವೇರಿಸುವಾಗ ಮತ್ತೆ ಅಲ್ಲಿಗೆ ಇದ್ದಕ್ಕಿದ್ದಂತೆ ಎಂಟ್ರಿ ಕೊಡುವ ಆನೆ, ವೃದ್ಧೆಯ ಮೃತದೇಹವನ್ನು ಹೊತ್ತೊಯ್ದು ಮತ್ತೆ ಮೃತದೇಹದ ಮೇಲೆಯೇ ದಾಳಿ ಮಾಡಿ, ಮತ್ತಷ್ಟು ವಿರೂಪಗೊಳಿಸಿ, ಎತ್ತೆಸೆದು ಅಲ್ಲಿಂದ ಪರಾರಿಯಾಗುತ್ತದೆ.
ಅಂತಿಮವಾಗಿ ವೃದ್ಧೆಯ ಅಂತ್ಯಕ್ರಿಯೆಯನ್ನು ಅದೇ ದಿನ ಕೆಲ ಗಂಟೆಗಳ ಬಳಿಕ ನಡೆಸಲಾಗುತ್ತದೆ. ಆನೆಯ ಈ ವಿಚಿತ್ರ ವರ್ತನೆ ಎಲ್ಲರಿಗೂ ಅಚ್ಚರಿಯನ್ನು ಉಂಟು ಮಾಡಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ರಾಸ್ಗೋವಿಂದಪುರ ಠಾಣೆಯ ಇನ್ಸ್‌ಪೆಕ್ಟರ್ ಲೋಪಾಮುದ್ರ ನಾಯಕ್ ತಿಳಿಸಿದ್ದಾರೆ.(ಏಜೆನ್ಸೀಸ್​)
ನಟಿ ಅನುಷ್ಕಾ ಶೆಟ್ಟಿ ಅಣ್ಣನ ಕೊಲೆಗೆ ಸಂಚು​? ಮುನ್ನೆಲೆಗೆ ಬಂದ ಮುತ್ತಪ್ಪ ರೈ! ದಾಖಲಾಯ್ತು ದೂರು

ಅದ್ಧೂರಿ ಮದ್ವೆಗೆ ಒಂದು ನಯಾಪೈಸೆ ಖರ್ಚು ಮಾಡದೆ ಕೋಟಿ ಕೋಟಿ ಸಂಪಾದಿಸಿದ ನಯನಾ-ವಿಘ್ನೇಶ್!​

VIDEO: ಮೈಸೂರಿನ ಬಾಯ್​ಫ್ರೆಂಡ್​ ಜತೆ ಪೊಲೀಸ್ ಠಾಣೆಗೆ ಹೋಗಿ ಗಳಗಳನೆ ಅತ್ತ ರಾಖಿ ಸಾವಂತ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 8 =
Remember me
