ಕೊಲ್ಲಂ:ಕೇರಳದ ಮಂಪಝತಾರಾ ಮೀಸಲು ಅರಣ್ಯ ಪ್ರದೇಶದ ಒಳಗೆ ಅತಿಕ್ರಮ ಪ್ರವೇಶ ಮಾಡಿದ್ದಲ್ಲದೆ, ಕಾಡಾನೆಯನ್ನು ಕೆರಳಿಸಿದ ಆರೋಪದ ಮೇಲೆ ಮಹಿಳಾ ಯೂಟ್ಯೂಬರ್ ವಿರುದ್ಧ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ.
ಆರೋಪಿಯನ್ನು ಅಮಲಾ ಅನು ಎಂದು ಗುರುತಿಸಲಾಗಿದೆ. ಈಕೆ ಕಿಲಿಮನೂರಿನ ನಿವಾಸಿ. ಕಾಡಾನೆಯನ್ನು ಕೆರಳಿಸಿದ್ದಲ್ಲದೆ, ಹಲಿಕ್ಯಾಮ್​ ಮೂಲಕ ದೃಶ್ಯ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಆರೋಪ ಈಕೆಯ ವಿರುದ್ಧ ಕೇಳಿಬಂದಿದೆ. ಹೀಗಾಗಿ ಜಾಮೀನು ರಹಿತ ಅಪರಾಧ ಪ್ರಕರಣ ದಾಖಲಾಗಿದೆ.
ಪುನಲೂರು ಡಿಎಫ್‌ಒ ಶಹನವಾಜ್ ಅವರ ನಿರ್ದೇಶನದಂತೆ ಪಟ್ಟಣಪುರಂ ರೇಂಜ್ ಆಫೀಸರ್ ದಿಲೀಪ್ ಅವರ ಮೇಲ್ವಿಚಾರಣೆಯಲ್ಲಿ ಅಂಬಾನಾರ್ ಉಪ ರೇಂಜ್ ಆಫೀಸರ್ ಎಂ.ಅಜಯ್ ಕುಮಾರ್ ಅವರು ಪ್ರಕರಣ ದಾಖಲಿಸಿದ್ದಾರೆ.
ವಿಡಿಯೋವನ್ನು 8 ತಿಂಗಳ ಹಿಂದೆ ಸೆರೆಹಿಡಿಯಲಾಯಿತು. ದೃಶ್ಯಗಳನ್ನು ಸೆರೆಹಿಡಿಯುವಾಗ ಕೆರಳಿದ ಕಾಡಾನೆ ಯೂಟ್ಯೂಬರ್​ ಅಮಲಾ ಅನು ಅವರನ್ನು ಬೆನ್ನತ್ತಿ ಬಂದಿತ್ತು. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ಬಳಿಕ ಅರಣ್ಯ ಇಲಾಖೆ ಪ್ರಕರಣವನ್ನು ದಾಖಲಿಸಿಕೊಂಡಿದೆ.(ಏಜೆನ್ಸೀಸ್​)
ಪ್ರಿಯಾ ಆನಂದ್​ಗೆ ನಿತ್ಯಾನಂದರನ್ನು ಮದ್ವೆಯಾಗೋ ಆಸೆಯಂತೆ! ಕಾಲಿವುಡ್​ ಬ್ಯೂಟಿ ಕೊಟ್ಟ ಕಾರಣ ಹೀಗಿದೆ…

VIDEO: ಚಪ್ಪಲಿ ಹಾಕಿಕೊಂಡು ದಿನವೂ ವಾಕಿಂಗ್​ಗೆ ಹೋಗೋ ಆನೆ! ಈ ಕುತೂಹಲ ನೋಡಲು ಭಕ್ತರ ದಂಡು…

ಸದ್ಯಕ್ಕೆ ಮುಗಿಯಲ್ವಾ ಮಳೆ ಆರ್ಭಟ? ಜಿಟಿಜಿಟಿ ಮಳೆಯಿಂದ ಬೇಸತ್ತಿರುವ ಜನರಿಗೆ ಮತ್ತೆ ಶಾಕಿಂಗ್​ ನ್ಯೂಸ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + sixteen =
Remember me
