ಹೈದರಾಬಾದ್​:ಇಂಜಿನಿಯರಿಂಗ್​ ವಿದ್ಯಾರ್ಥಿನಿಯೊಬ್ಬಳು ತನ್ನ ಸಂಬಂಧಿ ಯುವಕನಿಂದಲೇ ಕೊಲೆಯಾಗಿರುವ ಘಟನೆ ಹೈದರಾಬಾದ್​ನ ಕುಕುಟಪಲ್ಲಿಯಲ್ಲಿ ನಡೆದಿದೆ. ಯುವತಿಯನ್ನು ಉಸಿಗಟ್ಟಿಸಿ ಕೊಲೆ ಮಾಡಿ ಮೃತಹೇಹವನ್ನು ಸಂಪಿನೊಳಗೆ ಬೀಸಾಡಲಾಗಿತ್ತು.
ಈ ಭಯಾನಕ ಘಟನೆ ಶನಿವಾರ ನಡೆದಿದ್ದು, ಸೋಮವಾರ ತಡವಾಗಿ ಬೆಳಕಿಗೆ ಬಂದಿದೆ. ಮೃತ ಯುವತಿಯನ್ನು ಮಂಜುಳಾ (19) ಎಂದು ಗುರುತಿಸಲಾಗಿದೆ. ಈಕೆ ಮೂಸಾಪೇಟೆಯ ನಿವಾಸಿ. ತನ್ನ ಮನಗೆ ಆಗಾಗ ಭೇಟಿ ನೀಡುತ್ತಿದ್ದ ಸಂಬಂಧಿ ಯುವಕ ಅಂದರೆ ವರಸೆಯಲ್ಲಿ ಭಾವನಾಗುವ ಭೂಪತಿ ಜತೆ ಸ್ನೇಹವನ್ನು ಹೊಂದಿದ್ದಳು.
ಇದನ್ನೂ ಓದಿರಿ:ಭೀಕರ ಅಪಘಾತಕ್ಕೆ ಮಹಿಳೆ ಬಲಿ; ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಪ್ಯಾಸೆಂಜರ್ ವಾಹನ ಜಖಂ
ಕೆಲವು ವೈಯಕ್ತಿಕ ವಿಚಾರ ಮಾತನಾಡಬೇಕೆಂಬ ಸೋಗಿನಲ್ಲಿ ಶನಿವಾರ ಮಂಜುಳಾಳನ್ನು ಭೂಪತಿ ತನ್ನ ಮನೆಗೆ ಕರೆದಿದ್ದಾನೆ. ಬಂದವಳನ್ನು ಮಫ್ಲರ್​ ಅಥವಾ ಸ್ಕಾರ್ಪ್​ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಮೃತದೇಹವನ್ನು ಮನೆಯ ಹೊರಭಾಗದಲ್ಲಿದ್ದ ಸಂಪ್​ ಒಳಗೆ ಬೀಸಾಡಿ ಅಲ್ಲಿಂದ ಪರಾರಿಯಾಗಿದ್ದಾನೆಂದು ಕುಕಟಪಲ್ಲಿ ಪೊಲೀಸ್​ ಠಾಣಾಧಿಕಾರಿ ಟಿ. ನರ್ಸಿಂಗ್​ ರಾವ್​ ಮಾಹಿತಿ ನೀಡಿದ್ದಾರೆ.
ಮಂಜುಳಾಗಾಗಿ ಆಕೆಯ ಸಂಬಂಧಿಕರು ಶನಿವಾರದಿಂದ ಹುಡುಕಾಡುತ್ತಿದ್ದರು. ಪತ್ತೆಯಾಗದಿದ್ದಾಗ ನಾಪತ್ತೆ ಪ್ರಕರಣವನ್ನು ದಾಖಲಿಸಲಾಗಿತ್ತು. ಯಾವಾಗ ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆಂದು ತಿಳಿಯಿಯೋ ಹೆದರಿದ ಭೂಪತಿ ತಾನೇ ಠಾಣೆಗೆ ತೆರಳಿ ಶರಣಾಗಿದ್ದಾನೆ. ತಾನೇ ಕೊಲೆ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ.
ಇದನ್ನೂ ಓದಿರಿ:ತೆಂಗಿನಕಾಯಿ ಚೀಲಗಳಲ್ಲಿ 90 ಕೆ.ಜಿ. ಗಾಂಜಾ; ಕಳ್ಳಸಾಗಣೆಗೆ ಹೀಗೂ ಒಂದು ದಾರಿ ಕಂಡುಕೊಂಡ ಖದೀಮರು
ಮಂಜುಳಾಳನ್ನು ನನಗೆ ಕೊಟ್ಟು ಮದುವೆ ಮಾಡುವುದಾಗಿ ಚಿಕ್ಕಂದಿನಿಂದಲೇ ಮನೆಯವರು ಒಪ್ಪಂದ ಮಾಡಿಕೊಂಡಿದ್ದರು. ಆದಾಗ್ಯು ಕಳೆದ ಕೆಲ ವಾರಗಳಿಂದ ಇಬ್ಬರ ನಡುವೆ ಕೆಲವೊಂದು ಸಮಸ್ಯೆಗಳಿದ್ದವು. ನನ್ನನ್ನು ಕಡೆಗಣಿಸುತ್ತಿದ್ದಾಳೆ ಅನಿಸಿತು. ಅಲ್ಲದೆ, ಬೇರೊಬ್ಬನ ಜತೆ ಫೋನ್​ನಲ್ಲಿ ಮಾತನಾಡುವುದನ್ನು ನಾನು ಗಮನಿಸಿದ್ದೆ ಎಂದಿರುವ ಭೂಪತಿ, ಇನ್ನೊಬ್ಬನೊಂದಿಗೆ ಸಂಬಂಧ ಹೊಂದಿದ್ದಳು ಎಂದು ಆರೋಪಿಸಿದ್ದು, ಈ ಎಲ್ಲ ಕಾರಣದಿಂದ ಆಕೆಯ ಮೇಲಿನ ಕೋಪದಿಂದ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.(ಏಜೆನ್ಸೀಸ್​)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಗೆಸ್ಟ್​ಹೌಸ್​ನಲ್ಲಿ ಲವರ್​ ಜತೆ ಒಂದು ರಾತ್ರಿ! ಯುವತಿಯ ನಿಗೂಢ ಸಾವು ಪ್ರಕರಣದ ಸತ್ಯಾಂಶ ಕೊನೆಗೂ ಬಯಲು

ಬೆಚ್ಚಿಬೀಳಿಸುವ ವಿಡಿಯೋ: ನಡೆದುಹೋಗುತ್ತಾ ತೆರೆದ ಸಂಪಿನೊಳಗೆ ಬಿದ್ದ ಮಗು ಬದುಕಿದ್ದೇ ಪವಾಡ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − two =
Remember me
