ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾಕಷ್ಟು ವಿಡಿಯೋಗಳು ಪೋಸ್ಟ್​ ಆಗುತ್ತಿರುತ್ತವೆ. ಅವುಗಳಲ್ಲಿ ಕೆಲವೊಂದು ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿಬಿಡುತ್ತವೆ. ಕೆಲವೊಂದು ವಿಡಿಯೋಗಳು ತುಂಬಾ ಫನ್ನಿಯಾಗಿರುತ್ತವೆ ಮತ್ತು ನೋಡುಗರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತವೆ ಮತ್ತು ಹುಬ್ಬೇರಿಸುತ್ತವೆ. ಆ ಸಾಲಿಗೆ ಇದೀಗ ಮತ್ತೊಂದು ವಿಡಿಯೋ ಸೇರ್ಪಡೆಯಾಗಿದೆ.
ಸದ್ಯ ವೈರಲ್​ ಆಗಿರುವ ವಿಡಿಯೋ ನೋಡಿದರೆ ಒಂದು ಕ್ಷಣ ನಿಮ್ಮ ಕಣ್ಣುಗಳನ್ನು ನೀವೇ ನಂಬುವುದಿಲ್ಲ. ಹೌದು, ಪ್ರಾಣಿ-ಪಕ್ಷಿಗಳು ಉಸಿರಾಡುವುದನ್ನು ನೋಡಿದ್ದೇವೆ. ಆದರೆ, ಮರ ಉಸಿರಾಡುವುದನ್ನು ಎಂದಾದರೂ ನೋಡಿದ್ದೀರಾ? ಸದ್ಯ ವೈರಲ್​ ಆಗಿರುವ ವಿಡಿಯೋದಲ್ಲಿ ಮರ ಉಸಿರಾಡುವುದನ್ನು ನೋಡಬಹುದಾಗಿದೆ. ಉಸಿರಾಡುವಾಗ ಜೀವಿಗಳ ಎದೆಯ ಏರಿಳಿತ ಯಾವ ರೀತಿ ಇರುತ್ತದೋ ಅದೇ ಮಾದರಿಯಲ್ಲಿ ಮರದ ಉಸಿರಾಟವು ಇದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ಮರದ ಮಧ್ಯ ಭಾಗದಲ್ಲಿ ಬಿರುಕು ಮೂಡಿದೆ. ಮನುಷ್ಯರು ಉಸಿರಾಡುವಂತೆಯೇ ಮರವು ಬಿರುಕನ್ನು ಮುಚ್ಚುವ ಮತ್ತು ತೆರೆಯುವ ಮೂಲಕ ಉಸಿರಾಡುವುದನ್ನು ಮತ್ತು ಉಸಿರು ಬಿಡುವುದನ್ನು ವೀಡಿಯೊ ತೋರಿಸುತ್ತದೆ. ಈ ಅಪರೂಪದ ವಿದ್ಯಾಮಾನ ಕೆನಡಾದ ಕಾಲ್ಗರಿಯಲ್ಲಿ ನಡೆದಿದೆ.
ಅಂದಹಾಗೆ ಭಾರಿ ಮಳೆ ಮತ್ತು ಗಾಳಿಯ ನಂತರ ಮರದಲ್ಲಿ ಬಿರುಕು ಉಂಟಾಗುತ್ತದೆ ಮತ್ತು ಗಾಳಿ ಬೀಸುವ ಸಮಯದಲ್ಲಿ ಈ ಬಿರುಕು ತೆರೆದು ಮುಚ್ಚುತ್ತದೆ. ಹೀಗಾಗಿ ಮರವು ಉಸಿರಾಡುತ್ತಿರುವಂತೆ ಭಾಸವಾಗುತ್ತದೆ. ಈ ವಿಡಿಯೋವನ್ನು ವೈರಲ್​ ಹಗ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದು, ಲಕ್ಷಾಂತರ ಮಂದಿ ಈಗಾಗಲೇ ವೀಕ್ಷಣೆ ಮಾಡಿದ್ದಾರೆ. ಈ ಹಿಂದೆಯೂ ಬ್ರೀಥಿಂಗ್ ಟ್ರೀ ಎಂಬ ವಿಡಿಯೋಗಳು ಬಂದಿವೆ. ಇಂತಹ ವಿದ್ಯಮಾನಗಳ ಹಿಂದೆ ಭೂವೈಜ್ಞಾನಿಕ ಬದಲಾವಣೆಗಳಿವೆ ಎಂದು ಅಂದಾಜಿಸಲಾಗಿದೆ.(ಏಜೆನ್ಸೀಸ್​)

ಕಾರಿಗೆ ಆಂಬ್ಯುಲೆನ್ಸ್​ ಸೈರೆನ್​ ಹಾಕ್ಕೊಂಡು ಓಡಾಟ: ಮಾಜಿ ಸಂಸದ ಶಿವರಾಮೇಗೌಡ ಅಳಿಯನಿಗೆ ಬಿತ್ತು ಭಾರಿ ದಂಡ

ಥಾಯ್ಲೆಂಡ್​ ವಿಮಾನದಲ್ಲಾದ ಅತ್ಯಂತ ಕೆಟ್ಟ ಅನುಭವವನ್ನು ಬಹಿರಂಗಪಡಿಸಿದ ಮಲಯಾಳಿ ಬ್ಯೂಟಿ ನಜ್ರಿಯಾ!

ಸಾಮಾಜಿಕ ಜಾಲತಾಣ ಕೂ ಮೂಲಕ ಕನಸು ಈಡೇರಿಸಿಕೊಂಡ ಕಾಶ್ಮೀರಿ ಅಥ್ಲೆಟಿ ಡ್ಯಾನಿಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + eight =
Remember me
