ನಾಗರ್​ಕೋಯಿಲ್​:ವಿಡಿಯೋ ಕಾಲ್​ನಲ್ಲಿ ಗಂಡನ ಜತೆ ಮಾತನಾಡುತ್ತಲೇ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ತಮಿಳುನಾಡಿನ ನಾಗರ್​ಕೋಯಿಲ್​ನಲ್ಲಿ ನಡೆದಿದೆ.
ಕನ್ಯಾಕುಮಾರಿಯ ಕೊಟ್ಟಾರಂ ನಿವಾಸಿ ಜ್ಞಾನಭಾಗ್ಯ (33) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆತ್ಮಹತ್ಯೆ ಮಾಡಿಕೊಳ್ಳುವುದನ್ನು ಗಂಡ ನೋಡಿ ಆಕೆಯ ಸಂಬಂಧಿಕರಿಗೆ ಮಾಹಿತಿ ನೀಡಿದಾಗ, ತಕ್ಷಣ ಬಾಗಿಲು ಮುರಿದು, ಜ್ಞಾನಭಾಗ್ಯಗಳನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದಾದರೂ ಆಕೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಪತ್ನಿಯ ಮೇಲಿನ ಅನುಮಾನ ಮತ್ತು ಕಿರುಕುಳವೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಸಂಬಂಧಿಕರು ಆರೋಪ ಮಾಡಿದ್ದಾರೆ.
ಮೃತ ಜ್ಞಾನಭಾಗ್ಯ ಕೊಟ್ಟಾರಂನ ಪಂಚಾಯಿತಿ ಕಚೇರಿಯಲ್ಲಿ ತಾತ್ಕಾಲಿಕ ಉದ್ಯೋಗಿಯಾಗಿದ್ದಳು. ಆಕೆಯ ಪತ್ನಿ ಸೆಂದಿಲ್​ ಕನ್ಯಾಕುಮಾರಿಯ ಪೆರಿಯಾವಿಲಾ ನಿವಾಸಿ. ಆತ ತುಂಬಾ ದಿನಗಳಿಂದ ಸಿಂಗಾಪುರ್​ನಲ್ಲಿದ್ದಾನೆ. ಪರಸ್ಪರ ಪ್ರೀತಿಸಿ, 8 ವರ್ಷಗಳ ಹಿಂದೆ ಇಬ್ಬರು ಮದುವೆ ಆದರು. ಆದರೆ, ಸೆಂದಿಲ್​ಗೆ ಅನುಮಾನದ ಭೂತ ತಲೆಗೆ ಹೊಕ್ಕಿತ್ತು. ಪತ್ನಿಯ ಚಾರಿತ್ರ್ಯ ಮೇಲೆ ಅನುಮಾನ ಇತ್ತು. ಸಂಬಂಧಿಕರ ಪುರುಷರು ಸೇರಿದಂತೆ ಇತರೆ ಪುರುಷರ ಜತೆ ಜ್ಞಾನಭಾಗ್ಯ ಮಾತನಾಡುವುದು ಸೆಂದಿಲ್​ಗೆ ಇಷ್ಟವಿರಲಿಲ್ಲ.
ಇತ್ತೀಚೆಗಿನ ಕೊನೆಯ ವಿಡಿಯೋ ಕಾಲ್​ನಲ್ಲಿ ಪತ್ನಿಯ ಜತೆ ಇನ್ನೊಬ್ಬ ಕೋಣೆಯಲ್ಲಿರುವ ಬಗ್ಗೆ ಸೆಂದಿಲ್​ ಅನುಮಾನ ವ್ಯಕ್ತಪಡಿಸಿದ್ದ. ಪುರುಷನಲ್ಲ ಅವರು ಮಕ್ಕಳು ಎಂದು ಹೇಳಿದರು ಸೆಂದಿಲ್​​ಗೆ ನಂಬುವಷ್ಟು ತಾಳ್ಮೆ ಇರಲಿಲ್ಲ. ಇಡೀ ಕೋಣೆಯನ್ನು ಕ್ಯಾಮೆರಾದಲ್ಲಿ ತೋರಿಸು ಎಂದು ಕೇಳಿಕೊಂಡ. ಕೊಠಡಿಯಲ್ಲಿ ಯಾರು ಇಲ್ಲ ಎಂಬುದನ್ನು ಅರ್ಥ ಮಾಡಿಕೊಂಡ ಸೆಂದಿಲ್​ ಬೇರೆ ರೂಮ್​ ತೋರಿಸುವಂತೆ ದುಂಬಾಲು ಬಿದ್ದ. ಅಲ್ಲಿಯು ಸಹ ಯಾರೂ ಇಲ್ಲ ಎಂದು ಎಷ್ಟೇ ಹೇಳಿದರೂ ಸೆಂದಿಲ್​ ಮಾತ್ರ ಅದನ್ನು ಒಪ್ಪಲು ತಯಾರಿರಲಿಲ್ಲ. ಮನೆಯೆಲ್ಲ ತೋರಿಸು ಎಂದು ಪದೇಪದೆ ಕೇಳುತ್ತಿದ್ದ. ಇದರಿಂದ ತುಂಬಾ ಮನನೊಂದುಕೊಂಡ ಜ್ಞಾನಭಾಗ್ಯ ಕ್ಯಾಮೆರಾವನ್ನು ಆಫ್​ ಮಾಡದೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೆಂದಿಲ್​ ತಕ್ಷಣ ಮನೆಯವರಿಗೆ ತಿಳಿಸಿದಾದರೂ ಆಕೆಯನ್ನು ಬಚಾವ್​ ಮಾಡಲೂ ಆಗಲೇ ಇಲ್ಲ.
ಜ್ಞಾನಭಾಗ್ಯ ಅವರು ಸುಮ್ಮನೇ ಪತಿಯನ್ನು ಹೆದರಿಸಲು ಬಯಸಿದ್ದರು. ಆದರೆ ಅವಳು ಕುರ್ಚಿಯಿಂದ ಜಾರಿದ ಪರಿಣಾಮ ಅವಳ ಕುತ್ತಿಗೆಯಲ್ಲಿದ್ದ ಕುಣಿಕೆ ಬಿಗಿಯಾಗಿ ಮೃತಪಟ್ಟಿದ್ದಾಳೆ ಎಂದು ವರದಿಗಳು ಹೇಳಿವೆ. ಆದರೆ, ಪೊಲೀಸರು ಇದನ್ನು ಖಚಿತಪಡಿಸಿಲ್ಲ. ಘಟನೆಯ ಕುರಿತು ತನಿಖೆ ಆರಂಭಿಸಿದ್ದು, ತಪ್ಪಿತಸ್ಥರಾಗಿದ್ದರೆ ಸೆಂದಿಲ್ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.(ಏಜೆನ್ಸೀಸ್​)
ಮದ್ವೆ ಮುರಿದುಬಿತ್ತು ಎಂದು ವದಂತಿ ಹಬ್ಬಿಸಿದವರಿಗೆ ಬೋಲ್ಡ್​ ಫೋಟೋ ಮೂಲಕವೇ ತಿರುಗೇಟು ಕೊಟ್ಟ ಜೋಶ್​ ನಟಿ!

ಹುಡ್ಗೀರು ಲೈಂಗಿಕ ಸುಖ ಕೇಳಿದ್ರೆ… ವಿವಾದಾತ್ಮಕ ಹೇಳಿಕೆ ನೀಡಿದ “ಶಕ್ತಿಮಾನ್​”ಗೆ ಎದುರಾಯ್ತು ಸಂಕಷ್ಟ!

ಊಟ ಮಾಡುವಾಗ ಪತ್ನಿಯ ಜತೆ ಜಗಳ: ರಜೆ ಮೇಲೆ ಬಂದಿದ್ದ ಬಾಗಲಕೋಟೆ ಯೋಧ ಬಾಮೈದನಿಂದಲೇ ಕೊಲೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + one =
Remember me
