ಕೊಚ್ಚಿ:ಕೆಲ ಜನರು ಮಾನವೀಯತೆಯನ್ನು ಸಂಪೂರ್ಣ ಮರೆತಿದ್ದಾರೆ ಎನ್ನುವುದಕ್ಕೆ ಈ ಒಂದು ಘಟನೆ ತಾಜಾ ಸಾಕ್ಷಿಯಾಗಿದೆ. ಮೊದಲೇ ಜನ್ಮ ನೀಡುವುದೆಂದರೆ ಅದೊಂದು ನೋವಿನ ಪ್ರಕ್ರಿಯೆ. ಇಂತಹ ಕಠಿಣ ಸಂದರ್ಭದಲ್ಲಿಯೂ ದೌರ್ಜನ್ಯ ಎಸಗುತ್ತಾರೆಂದರೆ ನಿಜವಾಗಿಯೂ ಅವರೆಂಥಾ ಕ್ರೂರಿ ಇರಬೇಕು ನೀವೇ ಯೋಚಿಸಿ.
ವಿವರಣೆಗೆ ಬರುವುದಾದರೆ, ಬೀದಿ ನಾಯಿಯೊಂದು ಮರಿಗಳಿಗೆ ಜನ್ಮ ನೀಡುವಾಗಲೇ ಅದಕ್ಕೆ ಥಳಿಸಿರುವ ಅಮಾನವೀಯ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ನೀಲಂಬೂರು ತಾಲೂಕಿನ ಚಂದಕುನ್ನು ಎಂಬಲ್ಲಿ ನಡೆದಿದೆ.
ನಾಯಿಯು ಮೂರನೇ ಮರಿಗೆ ಜನ್ಮ ನೀಡುವಾಗ ದುಷ್ಟನೊರ್ವ ದೊಣ್ಣೆಯಿಂದ ನಾಯಿಯ ಬೆನ್ನಿಗೆ ಬಾರಿಸಿದ್ದಾನೆ. ಮರಿಯು ಅರ್ಧ ಹೊರ ಬಂದಿರುವಾಗಲೇ ತಾಯಿ ನಾಯಿಯು ನೋವಿನಿಂದ ಓಡಿ ಹೋಗಿದೆ. ಈ ಘಟನೆ ಮಂಗಳವಾರ (ಸೆ.20) ನಡೆದಿದೆ.
ನಿನ್ನೆ (ಸೆ.21) ಬೆಳಗ್ಗೆ ಅರ್ಧ ಜನಿಸಿದ ಮಗುವಿನೊಂದಿಗೆ ನಾಯಿ ಅಲೆದಾಡುವುದನ್ನು ಸಾಮಾಜಿಕ ಕಾರ್ಯಕರ್ತ ಕೆ.ಪಿ.ಮುಜೀಬ್ ರೆಹಮಾನ್ ಅವರು ಗಮನಿಸಿದ್ದಾರೆ. ತಕ್ಷಣ ತುರ್ತು ರಕ್ಷಣಾ ಪಡೆಯ ಸಹಾಯದಿಂದ ನಾಯಿಯನ್ನು ಹಿಡಿದು ಪಶು ಆಸ್ಪತ್ರೆಗೆ ಕರೆದೊಯ್ದರು. ವೈದ್ಯರು ಸಣ್ಣ ಆಪರೇಷನ್ ಮಾಡಿ ಅರ್ಧ ಜನನ ಸೇರಿದಂತೆ ಎರಡು ನಾಯಿಮರಿಗಳ ದೇಹಗಳನ್ನು ಹೊರತೆಗೆದಿದ್ದಾರೆ.
ಹೊರಗೆ ತೆಗೆದ ಎರಡು ಮರಿಗಳೂ ಸತ್ತು ಹೋಗಿದ್ದವು. ಮೊದಲೇ ಜನಿಸಿದ ಎರಡು ನಾಯಿಮರಿಗಳು ರಸ್ತೆಬದಿಯಲ್ಲಿ ಪತ್ತೆಯಾಗಿದ್ದು, ಈಗ ತಾಯಿಯೊಂದಿಗೆ ಇವೆ. ಆದರೆ, ರಸ್ತೆ ಬದಿಯ ಚರಂಡಿಯನ್ನು ಸ್ವಚ್ಛಗೊಳಿಸಲು ಪೌರ ಕಾರ್ಮಿಕರು ಬಂದಾಗ ತಾಯಿ ನಾಯಿ, ಮರಿಗಳನ್ನು ಅಲ್ಲಿಯೇ ಬಿಟ್ಟು ಹೆದರಿ ಓಡಿ ಹೋಗಿದೆ. ಸದ್ಯ ಆಸ್ಪತ್ರೆಯ ಸಿಬ್ಬಂದಿ ಹಾಗೂ ಮುಜೀಬ್, ಮರಿಗಳಿಗೆ ಹಾಲು, ಬಿಸ್ಕೆಟ್ ನೀಡುತ್ತಿದ್ದಾರೆ. ತಾಯಿ ನಾಯಿ ಮತ್ತೆ ಹಿಂದಿರುಗಬಹುದು ಎಂಬ ಭರವಸೆ ಇದೆ. ಯಾವುದೋ ಮನೆಯ ಪರಿಸರದಲ್ಲಿ ಮರಿಗಳಿಗೆ ಜನ್ಮ ನೀಡುವ ವೇಳೆ ತಾಯಿ ನಾಯಿಗೆ ಹೊಡೆದಿರಬಹುದು ಎಂದು ನಂಬಲಾಗಿದೆ.(ಏಜೆನ್ಸೀಸ್​)
ಲಿಫ್ಟ್​ ಒಳಗೆ ಕಾಲಿಡ್ತಿದ್ದಂತೆ ನಡೆಯಿತು ಘೋರ ದುರಂತ: ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದಾಕೆ ದುರ್ಮರಣ

ಅಯ್ಯೋ ಪಾಪ ಅನನ್ಯಾಗೆ ಹೀಗಾಗಬಾರದಿತ್ತು! ಬಾಲಿವುಡ್​ ಬ್ಯೂಟಿಯ ಪ್ಲಾನ್​ಗಳನ್ನೇ ಬುಡಮೇಲು ಮಾಡಿದ ಲೈಗರ್​

ಮಿಚೆಲ್​ ಜಾನ್ಸನ್​ ತಂಗಿದ್ದ ಲಖನೌ ಹೋಟೆಲ್​ ರೂಮ್​ಗೆ ಹಾವು ಎಂಟ್ರಿ! ಆಸಿಸ್​ ಮಾಜಿ ವೇಗಿ ಹೇಳಿದ್ದಿಷ್ಟು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 1 =
Remember me
