ನವದೆಹಲಿ:ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಸಾವಿರಾರು ಫೋಟೋ ಮತ್ತು ವಿಡಿಯೋಗಳು ಹರಿದಾಡುತ್ತಿರುತ್ತವೆ. ಹಾಗಂತ ಅವೆಲ್ಲವನ್ನು ಸತ್ಯ ಎಂದು ನಂಬಬಾರದು. ಪರಿಶೀಲಿಸುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಏಕೆಂದರೆ, ಅವುಗಳಲ್ಲಿ ಕೆಲವೊಂದು ಸುಳ್ಳುಗಳು ಇರುತ್ತವೆ. ಅದರಲ್ಲೂ ನಕಲಿ ನೋಟಿಗೆ ಸಂಬಂಧಿಸಿದ ಅನೇಕ ಫೋಟೋ-ವಿಡಿಯೋಗಳನ್ನು ನೋಡಿದ್ದೇವೆ. ನಕಲಿ ನೋಟು ಹಾಗೂ ನಾಣ್ಯವನ್ನು ಪತ್ತೆಹಚ್ಚುವ ಟ್ರಿಕ್ಸ್​ ಗೊತ್ತಿದೆ ಎಂದು ಸಾಮಾಜಿ ಜಾಲತಾಣದಲ್ಲಿ ಹೇಳಿಕೊಳ್ಳುವ ಮಂದಿಯು ಇದ್ದಾರೆ.
ಇತ್ತೀಚೆಗೆ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್​ ಆಗಿದೆ. ಹೊಸ 500 ರೂಪಾಯಿ ನೋಟಿನಲ್ಲಿ ಹಸಿರು ಪಟ್ಟಿಯು ಮಹಾತ್ಮ ಗಾಂಧಿ ಫೋಟೋ ಬಳಿಯಿದ್ದರೆ ಅದು ನಕಲಿ ನೋಟೆಂದು ಮತ್ತು ಹಸಿರು ಪಟ್ಟಿಯು ಆರ್​ಬಿಐ ಗವರ್ನರ್​ ಹಸ್ತಾಕ್ಷರದ ಬಳಿ ಇದ್ದರೆ ಅದು ಅಧಿಕೃತ ನೋಟೆಂದು ಹೇಳಿ ವಿಡಿಯೋವೊಂದನ್ನು ವೈರಲ್​ ಮಾಡಿದ್ದಾರೆ. ಇದು ನಿಜಾನಾ? ಅಥವಾ ಸುಳ್ಳಾ? ಎಂಬ ಗೊಂದಲ್ಲಿ ಅನೇಕರಿದ್ದು, ಅವರ ಸಂಶಯಗಳಿಗೆ ಉತ್ತರ ಇಲ್ಲಿದೆ.
#PIBFactCheck
Claim: Images and TikTok Videos doing the rounds on#WhatsAppare claiming that ₹ 500 currency notes on which the green strip is closer to#GandhiJi are fake.
Reality: Both these notes are acceptable currency.
Conclusion:#FakeNewspic.twitter.com/FCVdfClcrN
— PIB India (@PIB_India)December 18, 2019

ಈ ವದಂತಿ ಹರಿದಾಡುತ್ತಿದ್ದಂತೆ ಈ ಬಗ್ಗೆ ಪ್ರೆಸ್​ ಇನ್ಫರ್ಮೇಶನ್​ ಬ್ಯೂರೋ (ಪಿಐಬಿ) ಫ್ಯಾಕ್ಟ್​ಚೆಕ್​ ಮಾಡಿದೆ. ಪಿಐಬಿ ಪ್ರಕಾರ ಇದೊಂದು ಸಂಪೂರ್ಣ ವದಂತಿಯಾಗಿದ್ದು, ಎರಡು ನೋಟುಗಳು ಕೂಡ ಸ್ವೀಕೃತವಾಗಿದೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನಕಲಿ ಎಂದು ಪಿಐಬಿ ತಿಳಿಸಿದೆ.
एक वीडियो में यह चेतावनी दी जा रही है कि ₹500 का ऐसा कोई भी नोट नहीं लेना चाहिए, जिसमें हरी पट्टी आरबीआई गवर्नर के सिग्नेचर के पास न होकर गांधीजी की तस्वीर के पास हो।#PIBFactCheck:
▶️यह वीडियो#फ़र्ज़ीहै▶️@RBIके अनुसार दोनों ही नोट वैध हैं
विवरण:https://t.co/DuRgmS0AkNpic.twitter.com/SYyxG9MBs6
— PIB Fact Check (@PIBFactCheck)December 7, 2021

ಪಿಐಬಿ ಫ್ಯಾಕ್ಟ್ ಚೆಕ್, ವರ್ಗೀಯವಾಗಿ ಎರಡೂ ರೀತಿಯ ನೋಟುಗಳನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದೆ ಮತ್ತು ಎರಡೂ ನೋಟುಗಳು ನಿಜವಾದ ಕರೆನ್ಸಿ ನೋಟುಗಳಾಗಿವೆ ಎಂದು ಹೇಳಿದೆ. ಅಲ್ಲದೆ, ಭಾರತೀಯ ರಿಸರ್ವ್ ಬ್ಯಾಂಕ್ ಒದಗಿಸಿದ ಪಿಡಿಎಫ್​ ಫೈಲ್ ಅನ್ನು ಸಹ ಪಿಐಬಿ ಲಗತ್ತಿಸಿದ್ದು, ನೈಜ ಮತ್ತು ನಕಲಿ ಕರೆನ್ಸಿಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯಲು ಜನರಿಗೆ ಸಹಾಯ ಮಾಡುತ್ತದೆ.(ಏಜೆನ್ಸೀಸ್​)
ಎನ್ಇಟಿ ಪರೀಕ್ಷೆಯಲ್ಲಿ ಹಿಂದಿ ಹೇರಿಕೆ: ಕೇಂದ್ರದ ವಿರುದ್ಧ ಮಾಜಿ ಸಿಎಂ ಕುಮಾರಸ್ವಾಮಿ ಆಕ್ರೋಶ

ಅಶ್ಲೀಲವಾಗಿ ಸೊಂಟ ಬಳುಕಿಸಿದ ಸನ್ನಿ ಲಿಯೋನ್​ಗೆ ಇನ್ನು ಮೂರೇ ದಿನ ಟೈಂ! ಕಂಗಾಲಾಗಿ ಕೈಮುಗಿದ ಕಂಪನಿ

ಹೊಸ ಗೂಡಲ್ಲಿ ಭರವಸೆಯ ಬದುಕಿನ ಪುಟ ತೆರೆದ ನಾಗಮ್ಮಜ್ಜಿ!; ವಿಜಯವಾಣಿ, ದಾನಿಗಳ ನೆರವಿಗೆ ಭಾವುಕ ಕೃತಜ್ಞತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 10 =
Remember me
