ಹೈದರಾಬಾದ್​:ದೆಹಲಿ ನಿರ್ಭಯಾ ಪ್ರಕರಣದ ವಕೀಲೆ ಸೀಮಾ ಸಮೃದ್ಧಿ ಕುಶ್ವಾ ಅವರು ವಿಶ್ವದ ಆರು ಅತ್ಯಂತ ಪ್ರತಿಭಾವಂತ ಮಹಿಳೆಯರಲ್ಲಿ ಒಬ್ಬರು ಎಂಬ ಅಡಿಬರಹ ಇರುವ ಪೋಸ್ಟ್​ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಅಲ್ಲದೆ, ಅದೇ ಪೋಸ್ಟ್​ನಲ್ಲಿ ಸೀಮಾ ಓರ್ವ ಹಿರಿಯ ಸುಪ್ರೀಂಕೋರ್ಟ್ ವಕೀಲೆ ಎಂದು ಹೇಳಲಾಗಿದೆ.
ಆದರೆ, ವೈರಲ್​ ಪೋಸ್ಟ್​ ನಕಲಿ ಎಂಬುದು ನ್ಯೂಸ್​ ಮೀಟರ್​ ವೆಬ್​ಸೈಟ್​ ನಡೆಸಿದ ಫ್ಯಾಕ್ಟ್​ಚೆಕ್​ನಿಂದ ಬಯಲಾಗಿದೆ. ಗೂಗಲ್​ನಲ್ಲಿ ವಿಶ್ವದ ಆರು ಅಂತ್ಯಂತ ಪ್ರತಿಭಾವಂತ ಮಹಿಳೆಯರ ಪಟ್ಟಿಯನ್ನು ಹುಡುಕಾಡಲು, ಅಂತಹ ಯಾವುದೇ ಪಟ್ಟಿ ಲಭ್ಯವಾಗಲಿಲ್ಲ.

ಸೀಮಾ ಅವರು ಹಿರಿಯ ವಕೀಲೆಯೇ? ಎಂಬುದನ್ನು ಖಚಿತಪಡಿಸಿಕೊಳ್ಳಲು ಅವರ ಬಗ್ಗೆ ಹೆಚ್ಚು ಹೆಚ್ಚು ಶೋಧಿಸಿದಾಗ ಅವರು ಹಿರಿಯ ವಕೀಲೆ ಎಂಬುದಕ್ಕೆ ಪೂರಕವಾಗಿ ಯಾವುದೇ ವರದಿ ದೊರೆಯಲಿಲ್ಲ.
ಸೀಮಾ ಸಮೃದ್ಧಿ ಅವರು ಸೀಮಾ ಸಮೃದ್ಧಿ ಕುಶ್ವಾ ಎಂದೇ ಖ್ಯಾತಿಯಾಗಿದ್ದಾರೆ. ಇವರು 1982ರ ಜನವರಿ 10ರಂದು ಜನಿಸಿದ್ದಾರೆ. ಸುಪ್ರೀಂಕೋರ್ಟ್​ ವಕೀಲೆಯಾಗಿದ್ದಾರೆ. 2012ರಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ನಿರ್ಭಯಾ ಗ್ಯಾಂಗ್​ರೇಪ್​ ಮತ್ತು ಕೊಲೆ ಪ್ರಕರಣದ ವಕೀಲರಾಗಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವ ಮೂಲಕ ಹಲವು ವರ್ಷಗಳ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ತಂದುಕೊಡುವ ಮೂಲಕ ನಿರ್ಭಯಾ ಪಾಲಕರಿಗೆ ನ್ಯಾಯ ಒದಗಿಸಿಕೊಟ್ಟರು. ಈ ಬಗ್ಗೆ ವಿಕಿಪೀಡಿಯದಲ್ಲೂ ಮಾಹಿತಿ ಇದೆ.

ಸೀಮಾ ಅವರ ಸಾಮಾಜಿಕ ಜಾಲತಾಣ ಖಾತೆಗಳಲ್ಲೂ ತಾನೊರ್ವ ವಕೀಲೆ ಎಂದು ಉಲ್ಲೇಖಿಸಿದ್ದಾರೆ. ಹೀಗಾಗಿ ಅವರ ಬಗ್ಗೆ ಹರಿದಾಡುತ್ತಿರುವ ಪೋಸ್ಟ್​ ನಕಲಿ ಆಗಿದೆ. ಸೀಮಾ ಅವರುಮ ಹಿರಿಯ ವಕೀಲೆಯು ಅಲ್ಲ ಮತ್ತು ವಿಶ್ವದ ಆರು ಅತ್ಯಂತ ಪ್ರತಿಭಾವತ ಮಹಿಳೆಯರ ಪಟ್ಟಿಯಲ್ಲೂ ಇಲ್ಲ. ಅಸಲಿಗೆ ಆ ರೀತಿಯ ಪಟ್ಟಿಯೇ ಇಲ್ಲ. ಹೀಗಾಗಿ ವೈರಲ್​ ಆಗಿರುವ ಪೋಸ್ಟ್​ ಆಧಾರರಹಿತವಾಗಿದೆ ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.

ಅಂದಹಾಗೆ ಸೀಮಾ ಅವರು ನಿರ್ಭಯಾ ಜ್ಯೋತಿ ಟ್ರಸ್ಟ್​ನ ಕಾನೂನು ಸಲಹೆಗಾರರು ಆಗಿದ್ದಾರೆ.(ಏಜೆನ್ಸೀಸ್​)
ಫ್ಯಾಕ್ಟ್​ ಚೆಕ್​: ಪೊಲೀಸ್​ ಅಧಿಕಾರಿ ಮಹಿಳೆ ಮೇಲೆ ಬಿದ್ದರಾ,ಮಹಿಳೆಯೇ ಪೊಲೀಸ್​ನನ್ನು ಎಳೆದರಾ?

ಎಲ್​ಪಿಜಿ ಸಿಲಿಂಡರ್​ ಮೇಲೆ ಕೇಂದ್ರಕ್ಕಿಂತ ರಾಜ್ಯ ಸರ್ಕಾರ ಇಷ್ಟೊಂದು ತೆರಿಗೆ ಪಡೆಯುತ್ತಾ? ಇಲ್ಲಿದೆ ಅಸಲಿ ವಿಚಾರ!

ಮಗುವಿಗಾಗಿ ಮಗಳನ್ನೇ ಮದುವೆಯಾದನಾ 75ರ ವೃದ್ಧ!? ವೈರಲ್​ ಫೋಟೋ ಕುರಿತ ಅಸಲಿ ಕಹಾನಿ ಇಲ್ಲಿದೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × five =
Remember me
