ನವದೆಹಲಿ:ಕಚ್ಚಾ ಬಾದಾಮ್​ ಹಾಡಿನ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಧೂಳೆಬ್ಬಿಸಿದ ಭವನ್​ ಬದ್ಯಕರ್​ ಅವರ ಪ್ರತಿಭೆಯನ್ನು ಮೆಚ್ಚಿ ಭಾರತೀಯ ರೈಲ್ವೆ ಇಲಾಖೆಯು ರೈಲ್ವೆ ಮ್ಯಾನೇಜರ್​ ಹುದ್ದೆಯನ್ನು ನೀಡಿದೆ ಎಂಬ ಬರಹದೊಂದಿಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅದರ ಸತ್ಯಾಸತ್ಯತೆ ಇಲ್ಲಿದೆ.
ವೈರಲ್​ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ಬಿಳಿ ಬಣ್ಣದ ಸಮವಸ್ತ್ರ ಧರಿಸಿ, ವಾಕಿ-ಟಾಕಿ ಹಿಡಿದು ರೈಲಿನ ಬಾಗಿಲು ಬಳಿ ನಿಂತು ಬೇರೊಬ್ಬರಿಗೆ ಸೂಚನೆಗಳನ್ನು ನೀಡುತ್ತಿದ್ದಾರೆ. ಆ ವ್ಯಕ್ತಿ ನೋಡಲು ಬಹುತೇಕ ಭುವನ್​ ಬದ್ಯಕರ್​ ಅವರನ್ನೇ ಹೋಲುತ್ತಿದ್ದಾರೆ. ರೈಲು ಚಲಿಸಲು ಆರಂಭವಾಗುತ್ತಿದ್ದಂತೆ ಆ ವ್ಯಕ್ತಿ ವಿಡಿಯೋ ಮಾಡುತ್ತಿದ್ದವನ ಕಡೆ ನೋಡಿ ಒಂದು ನಗೆ ಬೀರುತ್ತಾರೆ. ಇಡೀ ವಿಡಿಯೋದಲ್ಲಿ ಹಿನ್ನೆಲೆಯಲ್ಲಿ ಕಚ್ಚಾ ಬಾದಾಮ್​ ಸಾಂಗ್​ ಕೇಳಿಬರುತ್ತದೆ.
ಫೇಸ್​ಬುಕ್​ ಬಳಕೆದಾರರೊಬ್ಬರು ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿದ್ದು, ಕಚ್ಚಾ ಬಾದಾಮ್​ ಗಾಯಕ ಹೊಸ ಉದ್ಯೋಗವನ್ನು ಪಡೆದುಕೊಂಡಿದ್ದಾರೆ. ಅವರು ರೈಲ್ವೆ ಮ್ಯಾನೇಜರ್​ ಆಗಿದ್ದಾರೆ ಎಂದು ಬರೆದು ವಿಡಿಯೋ ಪೋಸ್ಟ್​ ಮಾಡಿದ್ದಾರೆ. ಈಗಾಗಲೇ ಈ ವಿಡಿಯೋ 6 ಮಿಲಿಯನ್​ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ.
ಆದರೆ, ಈ ವಿಡಿಯೋ ಅಸಲಿಯತ್ತೇನು ಎಂಬುದನ್ನು ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಬಹಿರಂಗಪಡಿಸಿದೆ. ವಿಡಿಯೋದಲ್ಲಿ ಬಿಳಿ ಸಮವಸ್ತ್ರದಲ್ಲಿರುವ ವ್ಯಕ್ತಿ ಕಚ್ಚಾ ಬಾದಾಮ್​ ಗಾಯಕ ಭುವನ್​ ಬದ್ಯಕರ್​ ಅವರಲ್ಲ. ಇದನ್ನು ಭುವನ್​ ಮತ್ತು ವಿಡಿಯೋ ರೆಕಾರ್ಡ್​ ಮಾಡಿದ ಇಬ್ಬರು ಖಚಿತಪಡಿಸಿದ್ದಾರೆ. ಅಲ್ಲದೆ, ಭಾರತೀಯ ರೈಲ್ವೆ ಇಲಾಖೆ ಭುವನ್​ ಅವರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಸಂಬಂಧಿಸಿದ ಯಾವೊಂದು ನ್ಯೂಸ್​ ಸಹ ವರದಿಯಾಗಿಲ್ಲ. ಏಕೆಂದರೆ, ಭುವನ್​ ಅವರು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಹವಾ ಸೃಷ್ಟಿ ಮಾಡಿದ್ದು, ಒಂದು ವೇಳೆ ಕೆಲಸ ಸಿಕ್ಕಿದ್ದೇ ಆಗಿದ್ದಲ್ಲಿ ಇಷ್ಟೊತ್ತಿಗೆ ದೊಡ್ಡ ನ್ಯೂಸ್​ ಆಗುತ್ತಿತ್ತು.
ಇಂಡಿಯಾ ಟುಡೆ ವೈರಲ್​ ವಿಡಿಯೋವನ್ನು ಭವನ್​ ಅವರಿಗೆ ನೇರವಾಗಿ ಕಳುಹಿಸಿ ಸ್ಪಷ್ಟನೆಯನ್ನು ಪಡೆದುಕೊಂಡಿದೆ. ವಿಡಿಯೋದಲ್ಲಿರುವುದು ನಾನಲ್ಲ ಮತ್ತು ನನಗೆ ಯಾವುದೇ ಉದ್ಯೋಗದ ಆಫರ್​ ಬಂದಿಲ್ಲ ಎಂದು ಸ್ವತಃ ಭುವನ್​ ಇಂಡಿಯಾ ಟುಡೆಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ನಾನು ಬರೆಯುವುದರಲ್ಲಿ ಮತ್ತು ತನ್ನದೇ ಹಾಡನ್ನು ರೆಕಾರ್ಡ್​ ಮಾಡುವುದರಲ್ಲಿ ಬಿಜಿಯಾಗಿದ್ದೇನೆ ಎಂದು ಹೇಳಿದ್ದಾರೆ.
ಅಂದಹಾಗೆ ವೈರಲ್​ ವಿಡಿಯೋದಲ್ಲಿ ಇದ್ದ ಡೈಲಿ ಟ್ರಾವೆಲ್​ ಹ್ಯಾಕ್​ ಎಂಬ ವಾಟರ್​ ಮಾರ್ಕ್​ ಸಹಾಯದಿಂದ ವಿಡಿಯೋ ಮಾಡಿದ ವ್ಯಕ್ತಿಯನ್ನು ಇಂಡಿಯಾ ಟುಡೆ ಪತ್ತೆಹಚ್ಚಿದೆ. ಡೈಲಿ ಟ್ರಾವೆಲ್​ ಹ್ಯಾಕ್​ ಎಂಬ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಇದೆ. ಈ ಖಾತೆಯನ್ನು ಟ್ರಾವೆಲ್​ ವ್ಲಾಗರ್​ ಧನಂಜಯ್ ಕುಮಾರ್​ ನಡೆಸುತ್ತಿದ್ದಾರೆ. ಇವರು ಬಿಹಾರ ಮೂಲದವರು. ಇವರನ್ನು ಸಂಪರ್ಕಿಸಿ ಇಂಡಿಯಾ ಟುಡೆ ಮಾಹಿತಿ ಪಡೆದುಕೊಂಡಿದೆ.
A post shared by DAILY TRAVEL HACK (@dailytravelhac1)

ಈ ವಿಡಿಯೋವನ್ನು ಕುಮಾರ್​ ಅವರು 2021ರ ಅಕ್ಟೋಬರ್​ನಲ್ಲಿ ಬಿಹಾರದ ಬರೌನಿ ಜಂಕ್ಸನ್​ ರೈಲು ನಿಲ್ದಾಣದಲ್ಲಿ ರೆಕಾರ್ಡ್​ ಮಾಡಿದರಂತೆ. ಬಿಳಿ ಸಮವಸ್ತ್ರದಲ್ಲಿರುವ ವ್ಯಕ್ತಿ ಭುವನ್​ ಅಲ್ಲ. ಆದರೆ, ನೋಡಲು ಅವರ ರೀತಿ ಇದ್ದಾರಷ್ಟೇ. ವಿಡಿಯೋದಲ್ಲಿರುವುದು ಅಗರ್ತಲ-ಆನಂದ್​ ವಿಹಾರ್​ ತೇಜಸ್​ ರಾಜಧಾನಿ ಎಕ್ಸ್​ಪ್ರೆಸ್​ ರೈಲು ಎಂದು ಕುಮಾರ್​ ಹೇಳಿದ್ದಾರೆ.
ಕುಮಾರ್​ ಹೇಳಿದ ಮಾಹಿತಿಯಿಂದ ವಿಡಿಯೋ ನೆರವಿನಿಂದ ಬರೌನಿ ರೈಲ್ವೆ ಜಂಕ್ಸನ್​ ನಿಲ್ದಾಣದ ಸಿಬ್ಬಂದಿ ವರ್ಗವನ್ನು ಇಂಡಿಯಾ ಟುಡೆ ಸಂಪರ್ಕಿಸಿದೆ. ಈ ವೇಳೆ ಅಲ್ಲಿನ ಸಿಬ್ಬಂದಿ ಮನೋಜ್​ ಎಂಬುವರ ಪ್ರಕಾರ ವಿಡಿಯೋದಲ್ಲಿ ಇರುವುದು ಕೆ.ಕೆ. ಮರ್ಮು ಎಂಬುವರು. ಇವರು ಆಗಾಗ ಉತ್ತರ ಪ್ರದೇಶ-ಬಿಹಾರ ರೈಲಿನಲ್ಲಿ ಟ್ರಾವೆಲ್​ ಮಾಡುತ್ತಿರುತ್ತಾರೆ ಎಂದು ಹೇಳಿದ್ದಾರೆ.
ಅಲ್ಲಿಗೆ ತಿಳಿಯುವುದೇನೆಂದರೆ, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿರುವಂತೆ ವಿಡಿಯೋದಲ್ಲಿರುವ ವ್ಯಕ್ತಿಗೂ ಭುವನ್​ ಬದ್ಯಕರ್​ ಅವರಿಗೆ ಸಂಬಂಧವಿಲ್ಲ. ಅಲ್ಲದೆ, ಭುವನ್​ ಅವರಿಗೆ ಯಾವುದೇ ಉದ್ಯೋಗವೂ ದೊರಕಿಲ್ಲ ಎಂಬುದು ಸ್ಪಷ್ಟವಾಗುತ್ತದೆ.(ಏಜೆನ್ಸೀಸ್​)
ವಿಡಿಯೋಗೋಸ್ಕರ ವಿಮಾನವನ್ನೇ ಪತನ ಮಾಡಿದ ಪೈಲಟ್​​ಗೆ ಶಾಕ್​​: ಎದೆ ಝಲ್​ ಎನಿಸುವ ದೃಶ್ಯವಿದು!

‘ಸುದೀಪ್​ ನೀವು ತುಂಬಾ ಸಾತ್ವಿಕರಾಗ್ಬೇಡಿ ಒಂದ್ಸಲ ತರಾಟೆಗೆ ತೆಗೆದುಕೊಳ್ಳಿ ಆಗ ಯಾರೂ ನಿಮ್ಮ ತಂಟೆಗೆ ಬರಲ್ಲ’

ಪಿಎಸ್​ಐ ನೇಮಕಾತಿಯಲ್ಲಿ ಅಕ್ರಮ ಕೇಸ್​: ಮತ್ತಿಬ್ಬರು ಪೊಲೀಸರ ಬಂಧನ, ಇಂಜಿನಿಯರ್ ಮನೆ ಮೇಲೆ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − seven =
Remember me
