ನವದೆಹಲಿ:ಅತಿಯಾದ ಸ್ಮಾರ್ಟ್​ ಫೋನ್​ ಬಳಕೆಯಿಂದ ಕಣ್ಣಿನ ಒಳಗೆ ಹುಳು ಬೆಳೆಯುತ್ತಿದೆ ಎಂಬ ಸಂದೇಶದೊಂದಿಗೆ ವ್ಯಕ್ತಿಯೊಬ್ಬರ ಕಣ್ಣಿನಿಂದ ಉದ್ದನೆಯ ಹುಳುವೊಂದನ್ನು ಆಪರೇಷನ್​ ಮೂಲಕ ಹೊರ ತೆಗೆಯುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.
ಫೇಸ್​ಬುಕ್​ ಬಳಕೆದಾರರೊಬ್ಬರು ವಿಡಿಯೋ ಶೇರ್​ ಮಾಡಿಕೊಂಡಿದ್ದು, ಈ ವಿಡಿಯೋದಲ್ಲಿ ಪರಾವಲಂಬಿ ಜೀವಿಯನ್ನು ವ್ಯಕ್ತಿಯೊಬ್ಬರ ಕಣ್ಣಿನಿಂದ ಹೊರ ತೆಗೆಯಲಾಗುತ್ತಿದೆ. ತನ್ನ ಸ್ಮಾರ್ಟ್​ ಫೋನ್​ನಲ್ಲಿ ದೀರ್ಘ ಕಾಲದವರೆಗೆ ಗೇಮ್​ ಆಗಿದ್ದರ ಪರಿಣಾಮ ಇದಾಗಿದೆ ಎಂದು ಬರೆಯಲಾಗಿದೆ. ವಿಡಿಯೋ ಫೇಸ್​ಬುಕ್​ನಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ಫ್ಯಾಕ್ಟ್​ಚೆಕ್​ ನಡೆಸಿದ್ದು, ವೈರಲ್​ ಆಗಿರುವ ವಿಡಿಯೋ ಕುರಿತು ಹರಿದಾಡುತ್ತಿರುವ ಸುದ್ದಿ ಸುಳ್ಳು ಎಂಬುದು ತಿಳಿದುಬಂದಿದೆ. ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ನಲ್ಲಿ ಸೂಕ್ತ ಕೀವರ್ಡ್ಸ್​ ಸಹಾಯದಿಂದ ಹುಡುಕಾಡಿದಾಗ ವಿಡಿಯೋ ಕುರಿತಾದ ಅಸಲಿ ವಿಚಾರ ಬಯಲಾಗಿದೆ.
ಈ ವಿಡಿಯೋವನ್ನು 2013ರ ಏಪ್ರಿಲ್​​ 18ರಂದು ವೈದ್ಯರಾದ ಡಾ. ಅಶ್ಲೆ ಮುಲಮೂಟ್ಟಿಲ್​ ಎಂಬುವರು ತಮ್ಮ ಫೇಸ್​ಬುಕ್​ ಪೇಜ್​ನಲ್ಲಿ ಶೇರ್​ ಮಾಡಿಕೊಂಡಿದ್ದಾರೆ. ಅಂದಹಾಗೆಮ ಮುಲಮೂಟ್ಟಿಲ್​ ಕೇರಳದ ಕಣ್ಣಿ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರು ಮತ್ತು ಮುಖ್ಯ ಸರ್ಜನ್​ ಆಗಿದ್ದಾರೆ. ಮೂಲ ವಿಡಿಯೋವನ್ನು ನೋಡಿದಾಗ ಅದರಲ್ಲಿ ಮುಲಮೂಟಿಲ್​ ವಿವರಣೆ ನೀಡುದ್ದಾರೆ. ಅತಿಯಾದ ಕಣ್ಣಿನ ನೋವಿದ್ದ ರೋಗಿಗೆ ಆಪರೇಷನ್​ ಮಾಡಲಾಯಿತು. ತುಂಬಾ ಸೂಕ್ಷ್ಮವಾಗಿ ನೋಡಿದಾಗ ರೋಗಿಯ ಕಣ್ಣಲ್ಲಿ ಜೀವಂತ ಹುಳು ಪತ್ತೆಯಾಯಿತು. ಕೊನೆಗೆ ಹೊರ ತೆಗೆದಾಗ ಸುಮಾರು 8 ಇಂಚು ಉದ್ದ ಇತ್ತು. ಅದನ್ನು ಲೋವಾ ಲೋವಾ ಎಂದು ಕರೆಯಲಾಗುತ್ತದೆ. ಇದು ಹೆಚ್ಚಾಗಿ ಪಶ್ಚಿಮ ಆಫ್ರಿಕದಲ್ಲಿ ಕಂಡುಬರುತ್ತದೆ ಎಂದು ತಿಳಿಸಿದ್ದಾರೆ.
ಕೆಲವೊಂದು ನೊಣಗಳಿಂದ ಈ ಲೋವಾ ಲೋವಾ ಹುಳು ಉತ್ಪತಿಯಾಗುತ್ತವೆ. ಈ ನೊಣಗಳು ಮಾನವನ ಚರ್ಮವನ್ನು ಚುಚ್ಚಿ ರಕ್ತವನ್ನು ಹೀರುತ್ತವೆ. ಹೀಗೆ ಮಾಡುವಾಗ ಹುಳುಗಳ ಲಾರ್ವಾಗಳನ್ನು ಮಾನವ ದೇಹಕ್ಕೆ ವರ್ಗಾಯಿಸುತ್ತವೆ. ಇದರಿಂದ ಹುಳುಗಳು ಕಣ್ಣು, ಮೆದುಳು, ಹೃದಯ, ಶ್ವಾಸಕೋಸ ಮತ್ತು ಚರ್ಮದ ಅಡಿಯಲ್ಲೂ ಬೆಳೆಯುತ್ತವೆ ಎಂದು ಹೇಳಿದ್ದಾರೆ.
ಇನ್ನು ಅತಿಯಾದ ಫೋನ್​ ಬಳಕೆಯಿಂದ ಕಣ್ಣಿನಲ್ಲಿ ಹುಳ ಉತ್ಪತಿಯಾಗುವುದಲ್ಲಿ ಎಂದು ವೈದ್ಯರು ಖಚಿತಪಡಿಸಿದ್ದಾರೆ. ಹಾಗಂತ ಫೋನ್​ ಬಳಕೆ ಒಳ್ಳೆಯದಂತೂ ಅಲ್ಲ. ಹೆಚ್ಚು ಫೋನ್​ ಬಳಕೆಯಿಂದ ನಿದ್ರಾಹೀನತೆ, ಮಾನಸಿಕ ಖಿನ್ನತೆ ಹಾಗೂ ಒತ್ತಡ ಸೇರಿದಂತೆ ಮುಂತಾದ ಕಾಯಿಲೆಗಳು ಬರುತ್ತವೆ. ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿರುವ ವಿಡಿಯೋದಲ್ಲಿ ಹೇಳಿರುವಂತೆ ಅತಿಯಾದ ಫೋನ್​ ಬಳಕೆಯಿಂದ ಕಣ್ಣಿನ ಒಳಗೆ ಹುಳು ಬೆಳೆಯುವುದಿಲ್ಲ.(ಏಜೆನ್ಸೀಸ್​)
ಸಂಜೆ ಹೈಕಮಾಂಡ್​ನಿಂದ ಸಂದೇಶ ಬರಲಿದ್ದು, ಬಳಿಕ ಏನಾಗಲಿದೆ ಎಂದು ನಿಮಗೇ ಗೊತ್ತಾಗುತ್ತೆ: ಸಿಎಂ ಬಿಎಸ್​ವೈ

ಆಗಸ್ಟ್​ 15ರಿಂದ ಈ ರಾಜ್ಯದಲ್ಲಿ ಉಚಿತ ವೈಫೈ: ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಉಡುಗೊರೆ!

ಎದುರುಮನೆ ಯುವಕನ ಪರಿಚಯ: ಹೆಣ್ಣು ಮಕ್ಕಳೊಂದಿಗೆ ಮನೆಬಿಟ್ಟ ಮಹಿಳೆಯಿಂದ ಪತಿಗೆ ಶಾಕ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × three =
Remember me
