ನವದೆಹಲಿ:ಪಶ್ಚಿಮ ಬಂಗಾಳದಲ್ಲಿ ಸದ್ಯ ಚುನಾವಣೆ ಭರಾಟೆ ಜೋರಾಗಿದೆ. ಇದರ ನಡುವೆ ಸಾಮಾಜಿಕ ಜಾಲತಾಣದಲ್ಲಿ ರಾಜಕೀಯ ಪಕ್ಷಗಳ ಆರೋಪ-ಪ್ರತ್ಯಾರೋಪ ಮತ್ತು ಪೋಸ್ಟ್​ ವಾರ್​ಗಳು ಸಹ ನಡೆಯುತ್ತಿವೆ.
ಇದಕ್ಕೆ ತಾಜಾ ಉದಾಹರಣೆ ಎಂಬಂತೆ ರಾಶಿ ರಾಶಿ ಹಣದ ಕಂತೆಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಈ ಹಣವನ್ನು ಬಂಗಾಳ ಬಿಜೆಪಿ ನಾಯಕರೊಬ್ಬರ ಮನೆಯಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ. ಕೆಲವು ಪೊಲೀಸರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡುತ್ತಿರುವುದನ್ನು ಫೋಟೋದಲ್ಲಿ ಕಾಣಬಹುದಾಗಿದೆ.
ಇದನ್ನೂ ಓದಿರಿ:ಕಡೆಗಣಿಸಿದ್ರೆ ಎಫ್​ಐಆರ್: ಕೋವಿಡ್ ಮಾರ್ಗಸೂಚಿ ಕಟ್ಟುನಿಟ್ಟು ಪಾಲನೆಗೆ ಹೈಕೋರ್ಟ್ ಸೂಚನೆ
ಅನೇಕ ಫೇಸ್​ಬುಕ್​ ಮತ್ತು ಟ್ವಿಟರ್​ ಬಳಕೆದಾರರು ಫೋಟೋವನ್ನು ಶೇರ್​ ಮಾಡಿಕೊಂಡಿದ್ದು, ಬಂಗಾಳ ಬಿಜೆಪಿ ನಾಯಕನ ಮನೆಯಲ್ಲಿ ಭಾರಿ ಹಣ ವಶಪಡಿಸಿಕೊಳ್ಳಲಾಗಿದೆ. ಅವರು ಬಡವರಿಗೆ ಸಹಾಯ ಮಾಡಲು ಪ್ರಯತ್ನಿಸುತ್ತಿರಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಆದರೆ, ಈ ಬಗ್ಗೆ ಇಂಡಿಯಾ ಟುಡೆ ಆ್ಯಂಟಿ ಫೇಕ್​ ನ್ಯೂಸ್​ ವಾರ್​ ರೂಮ್​ ನಡೆಸಿದ ಫ್ಯಾಕ್ಟ್​ಚೆಕ್​ನಲ್ಲಿ ಫೋಟೋ ಹಿಂದಿನ ಅಸಲಿ ಸತ್ಯ ಬಯಲಾಗಿದೆ. ಈ ಫೋಟೋವನ್ನು 2019ರಂದು ತೆಗೆಯಲಾಗಿದೆ. ಆವಾಗ ತೆಲಂಗಾಣ ಪೊಲೀಸರು ಖಮ್ಮಮ್​ನಲ್ಲಿ ನಕಲಿ ನೋಟು ಜಾಲವನ್ನು ಭೇದಿಸಿ, ಐವರು ಆರೋಪಿಗಳನ್ನು ಬಂಧಿಸಿದ್ದರು. ಈ ವೇಳೆ 6 ಕೋಟಿ ರೂ. ನಕಲಿ ನೋಟುಗಳನ್ನು ವಶಕ್ಕೆ ಪಡೆದಿದ್ದರು. ಈ ಬಗ್ಗೆ ಎಎನ್​ಐ ಸಹ ಟ್ವೀಟ್​ ಮಾಡಿದೆ. ಆದರೆ, ಬಂಗಾಳದ ಬಿಜೆಪಿ ನಾಯಕರ ಮನೆಯಲ್ಲಿ ಹಣ ವಶಕ್ಕೆ ಪಡೆದಿದ್ದಾರೆಂದು ತಿಳಿಸುವ ಯಾವುದೇ ಇತ್ತೀಚಿನ ವರದಿ ಇಲ್ಲ.
Telangana: Khammam police today arrested five persons for cheating public in guise of exchanging Rs. 2,000 denomination currency notes and offering 20% commission.320 bundles of Rs. 2000 denomination fake notes (around Rs 6.4 crores) seized.pic.twitter.com/ptulXGi1Qb
— ANI (@ANI)November 2, 2019

ಗೂಗಲ್​ ರಿವರ್ಸ್​ ಸರ್ಚ್​ ಇಂಜಿನ್​ ಬಳಸಿಕೊಂಡು ವೈರಲ್​ ಫೋಟೋ ಕುರಿತು ನೋಡಿದಾಗ ತೆಲಂಗಾಣ ಟುಡೆ ಎಂಬ ವೆಬ್​ಸೈಟ್​ 2019ರ ನವೆಂಬರ್​ನಲ್ಲಿ ಫೋಟೋ ಕುರಿತಾದ ಸುದ್ದಿಯನ್ನು ಮಾಡಿದೆ. ಇದರ ಪ್ರಕಾರ ಫೋಟೋದಲ್ಲಿರುವ ಹಣ ಖಮ್ಮಮ್​ನಲ್ಲಿ ನಕಲಿ ನೋಟು ಜಾಲ ಭೇದಿಸಿದಾಗ ಪೊಲೀಸರು ತೆಗೆದ ಚಿತ್ರವಾಗಿದೆ.
ಇದನ್ನೂ ಓದಿರಿ:ಖಾಸಗಿ ಕಂಪನಿ ಉದ್ಯೋಗಿ ಯಶಸ್ವಿ ಕೃಷಿಕ, ಪ್ರತಿದಿನ 500 ರೂ. ತರಕಾರಿ ಮಾರಾಟ
ಹೀಗಾಗಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುವ ಫೋಟೋಗೂ ಪಶ್ಚಿಮ ಬಂಗಾಳದ ಬಿಜೆಪಿ ನಾಯಕನಿಗೂ ಸಂಬಂಧವಿಲ್ಲ ಎಂಬುದು ಫ್ಯಾಕ್ಟ್​ಚೆಕ್​ನಿಂದ ತಿಳಿದುಬಂದಿದೆ.(ಏಜೆನ್ಸೀಸ್​)
ಕಾಲಿಗೆ ಕಪ್ಪು ದಾರ ಯಾಕೆ ಕಟ್ತಾರೆ ಗೊತ್ತಾ? ಇಲ್ಲಿದೆ ಕುತೂಹಲಕಾರಿ ಸಂಗತಿ..!

ಕತ್ತೆ ಹೊತ್ತು ನಡೆಯುತ್ತಿರುವ ಯೋಧ: ವೈರಲ್​​ ಫೋಟೋ ಹಿಂದಿನ ನಿಜವಾದ ಕತೆ ಮನಕಲಕುವಂತಿದೆ!

ಸಣ್ಣ ವಯಸ್ಸಿನಲ್ಲಿಯೇ ಲೈಂಗಿಕ ನಿರಾಸಕ್ತಿಯಾಗಿದ್ದು ಕಾರಣವೇ ತಿಳೀತಿಲ್ಲ- ಪ್ಲೀಸ್‌ ಪರಿಹಾರ ಹೇಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
