ನವದೆಹಲಿ:ಮೈ ಜುಮ್​ ಅನ್ನುವ ರೀತಿ ಚಾಲಕನೊಬ್ಬ ಕಡಿದಾದ ಬೆಟ್ಟದ ರಸ್ತೆಯಲ್ಲಿ ಕಾರನ್ನು ಯೂಟರ್ನ್​ ತೆಗೆದುಕೊಳ್ಳುವ ವಿಡಿಯೋವೊಂದು ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಸ್ವಲ್ಪ ಮಿಸ್​ ಆದ್ರೆ ಇಹಲೋಕ ಪಯಣ ಗ್ಯಾರೆಂಟಿ ಎಂದು ವಿಡಿಯೋ ನೋಡಿದ ಬಹುತೇಕರು ಮಾತಾಡಿಕೊಳ್ಳುತ್ತಿದ್ದಾರೆ. ಆದರೆ, ವಿಡಿಯೋದ ಅಸಲಿಯತ್ತು ತಿಳಿದರೆ ನಿಮ್ಮ ಅಭಿಪ್ರಾಯ ಖಂಡಿತ ಬದಲಾಗುತ್ತದೆ.
ವಿಡಿಯೋದಲ್ಲಿ ಏನಿದೆ?ನೀಲಿ ಬಣ್ಣದ ಕಾರು ಕಡಿದಾದ ಬೆಟ್ಟದ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುತ್ತದೆ. ಬೆಟ್ಟದ ರಸ್ತೆಯು ಮೊದಲೇ ತುಂಬಾ ಚಿಕ್ಕದಾಗಿದ್ದು ಕಾರಿನ ಹಿಂಭಾಗದಲ್ಲಿ ಪಾತಾಳ ಇರುವಂತೆ ನೋಡುಗರಿಗೆ ಗೋಚರವಾಗುತ್ತದೆ. ನಿಜಕ್ಕೂ ಈ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುವುದು ಅಸಾಧ್ಯ ಎಂದು ನೋಡುಗರಿಗೆ ಅನಿಸಿದರೂ ಚಾಲಕನ ಡ್ರೈವಿಂಗ್​ ಸ್ಕಿಲ್​ಗೆ ಫಿದಾ ಆಗಿದ್ದಾರೆ. ಕಡಿದಾದ ರಸ್ತೆಯಲ್ಲಿ ಯೂಟರ್ನ್​ ತೆಗೆದುಕೊಳ್ಳುವಲ್ಲಿ ಚಾಲಕ ಯಶಸ್ವಿಯಾಗುವುದು ವಿಡಿಯೋದಲ್ಲಿದೆ.
The perfect 80 point turn!pic.twitter.com/bLzb1J1puU
— Dr. Ajayita (@DoctorAjayita)January 23, 2022

ಈ ವಿಡಿಯೋ ನಿನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಆಗಿದ್ದು, ಸಿಕ್ಕಾಪಟ್ಟೆ ವೈರಲ್​ ಆಗಿದೆ. ಟ್ವಿಟರ್​ನಲ್ಲಿ ಇದುವರೆಗೂ 1.8 ಮಿಲಿಯನ್​ ವೀಕ್ಷಣೆ ಕಂಡಿದೆ. ಇನ್​ಸ್ಟಾಗ್ರಾಂನಲ್ಲೂ ಸಹ ಲಕ್ಷಾಂತರ ವೀಕ್ಷಣೆ ಕಂಡಿದೆ. ಈಗಲೂ ಕೂಡ ಜಾಲತಾಣದಲ್ಲಿ ಈ ವಿಡಿಯೋ ಕುರಿತ ಚರ್ಚೆ ಜೋರಾಗಿದೆ ಮತ್ತು ಸಾಕಷ್ಟು ನೆಟ್ಟಿಗರು ಚಾಲಕನ ಸ್ಕಿಲ್​ಗೆ ಫಿದಾ ಆಗಿ ಮೆಚ್ಚುಗೆಯ ಸುರಿಮಳೆಯನ್ನೇ ಹರಿಸಿದ್ದಾರೆ.
ಆದರೆ, ಈ ವಿಡಿಯೋ ಬಗ್ಗೆ ಹೆಚ್ಚು ತಿಳಿದಾಗ ಅದರ ಹಿಂದೆ ಇನ್ನೊಂದು ಸ್ಟೋರಿ ಇರುವುದು ಕಂಡುಬಂದಿದೆ. ಈ ವಿಡಿಯೋವನ್ನು ಕಳೆದ ಡಿಸೆಂಬರ್​ನಲ್ಲೇ ಡ್ರೈವಿಂಗ್​ ಸ್ಕಿಲ್​ (DrivingSkill) ಹೆಸರಿನ ಯೂಟ್ಯೂಬ್​ ಚಾನೆಲ್​ನಲ್ಲಿ ಅಪ್​ಲೋಡ್​ ಮಾಡಲಾಗಿದೆ. ವಿಡಿಯೋದಲ್ಲಿ ಕಡಿದಾದ ರಸ್ತೆಯಲ್ಲಿ ಹೇಗೆ ಯೂಟರ್ನ್​ ತೆಗೆದುಕೊಳ್ಳಬೇಕೆಂದು ಪ್ರದರ್ಶನ ನೀಡುವ ಅದ್ಭುತ ಡ್ರೈವಿಂಗ್​ ಸ್ಕಿಲ್​ ಇರುವ ನಿಜ. ಸ್ವಲ್ಪ ಮಿಸ್​ ಆದರೆ ಪ್ರಾಣ ಹೋಗುತ್ತೆ ಎಂದು ಅಂದುಕೊಳ್ಳುವುದು ನಿಜ.

ಆದರೆ, ಮೊತ್ತೊಂದು ಆಯಾಮದಲ್ಲಿ ವಿಡಿಯೋ ನೋಡಿದಾಗ ಅದರ ಸ್ಪಷ್ಟತೆ ಗೊತ್ತಾಗುತ್ತದೆ. ಮೊದಲು ಅಂದುಕೊಂಡಂತೆ ಕಾರಿನ ಹಿಂದೆ ಪಾತಾಳ ಇಲ್ಲ. ಕೆಳಗಡೆ ಮತ್ತೊಂದು ರಸ್ತೆ ಇರುವುದು ಇನ್ನೊಂದು ಆಯಾಮದ ವಿಡಿಯೋದಲ್ಲಿ ಸ್ಪಷ್ಟವಾಗುತ್ತದೆ. ಈ ವಿಡಿಯೋ ನೋಡಿದ ಮೇಲೆ ನಿಮಗೆ ಏನು ಅನಿಸುತ್ತದೆ ಕಾಮೆಂಟ್​ ಮಾಡಿ.(ಏಜೆನ್ಸೀಸ್​)

ಕೆಲಸ ಮುಗಿಸಿಕೊಂಡು ಖುಷಿಯಿಂದಲೇ ಮನೆಗೆ ಮರಳಿದ ಪತಿಗೆ ಕಾದಿತ್ತು ಭಾರೀ ಆಘಾತ..!

ದಲಿತ ವ್ಯಕ್ತಿಯ ಅಂತ್ಯಕ್ರಿಯೆಗೆ ಅಡ್ಡಿ: ತೆಗೆದಿದ್ದ ಗುಂಡಿ ಮುಚ್ಚಿಸಿ ಅಮಾನವೀಯತೆ ಮೆರೆದ ಪೊಲೀಸರು

ಹೊಟ್ಟೆ ಮತ್ತು ಸೊಂಟದ ಕೊಬ್ಬು ಕರಗಲು, ಜೀರ್ಣಶಕ್ತಿ ವೃದ್ಧಿಸಲು ಊರ್ಧ್ವ ಧನುರಾಸನ ಸಹಕಾರಿ

ಬಿಜೆಪಿಯಲ್ಲಿ ಸಂಪುಟ ಸಂಚಲನ: ಆಕಾಂಕ್ಷಿಗಳಿಂದ ಹೆಚ್ಚಿದ ಒತ್ತಡ; ಗರಿಗೆದರಿದ ರಾಜಕೀಯ ಚಟುವಟಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
