ರಾಯ್ಪುರ್​:ಸಿಡಿಲ ಹೊಡೆತದಿಂದ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದವನಿಗೆ ಪುನರುಜ್ಜೀವನ ನೀಡುವ ಪ್ರಯತ್ನದಲ್ಲಿ ಆತನನ್ನು ಸಗಣಿ ರಾಶಿಯಲ್ಲಿ ಅರ್ಧ ಸಮಾಧಿ ಮಾಡುವ ಮೂಲಕ ಕುಟುಂಬವೇ ಆತನ ಸಾವಿಗೆ ಕಾರಣವಾದ ದುರಂತ ಘಟನೆ ಛತ್ತೀಸ್​ಗಢದ ಸರ್ಗುಜಾ ಜಿಲ್ಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿಯನ್ನು ಲಖನ್​ಪುರ್​ ಮಟ್ಕಿ ಎಂದು ಗುರುತಿಸಲಾಗಿದೆ. ತೌಕ್ತೆ ಚಂಡಮಾರುತ ಪರಿಣಾಮ ಸರ್ಗುಜಾ ಜಿಲ್ಲೆಯಾದ್ಯಂತ ಗುಡುಗು-ಮಿಂಚು ಸಹಿತ ಭಾರೀ ಮಳೆಯಾಗುತ್ತಿದೆ. ನಿನ್ನೆ ಮಟ್ಕಿ, ತನ್ನ ಮನೆಯ ಮುಂದೆ ನಿಂತಿದ್ದಾಗ ಸಿಡಿಲು ಹೊಡೆತದಿಂದ ಗಂಭೀರ ಗಾಯಗೊಂಡು ಪ್ರಜ್ಞೆ ಕಳೆದುಕೊಂಡಿದ್ದ.
ಇದನ್ನೂ ಓದಿರಿ:ಚಾಮರಾಜನಗರ ಜಿಲ್ಲಾಸ್ಪತ್ರೆ ಆಕ್ಸಿಜನ್ ದುರಂತ: ಜಿಲ್ಲಾಧಿಕಾರಿ ಎಂ.ಆರ್​. ರವಿ ವರ್ಗಾವಣೆ
ಇದನ್ನು ನೋಡಿದ ಆತನ ಕುಟುಂಬ ಆಸ್ಪತ್ರೆಗೆ ಕರೆದೊಯ್ಯದೆ, ಸಗಣಿ ರಾಶಿಯಲ್ಲಿ ಆತನನ್ನು ಹೂತು, ತಲೆಯ ಭಾಗವನ್ನು ಮಾತ್ರ ಬಿಟ್ಟು ಅರ್ಧ ಸಮಾಧಿ ಮಾಡಿದ್ದರು. ಸಿಡಿಲ ಬಡಿತದಿಂದ ಸತ್ತ ವ್ಯಕ್ತಿಯನ್ನು ಸಗಣಿ ಗುಂಡಿಯಲ್ಲಿ ಸಮಾಧಿ ಮಾಡಿದರೆ ಮತ್ತೆ ಬದುಕಿ ಬರುತ್ತಾನೆಂಬ ಮೂಡನಂಬಿಕೆಗೆ ಕಟ್ಟುಬಿದ್ದು ಇದೀಗ ಮನೆಯ ಸದಸ್ಯನನ್ನೇ ಕುಟುಂಬ ಕಳೆದುಕೊಂಡಿದೆ.
ಸಗಣಿ ಗುಂಡಿಯ ಪ್ರಯತ್ನ ಮಾಡಿದಾಗಲೂ ಆತ ಎಚ್ಚರಗೊಳ್ಳದಿದ್ದಾಗ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಆತ ಮೃತಪಟ್ಟಿರುವುದಾಗಿ ವೈದ್ಯರು ದೃಢಪಡಿಸಿದರು.(ಏಜೆನ್ಸೀಸ್​)
ಪರಸ್ತ್ರೀ ಜತೆ ಯುವಕನ ಸಲ್ಲಾಪ! ಸೆಕ್ಸ್​ ಮಾಡುತ್ತಿರುವಾಗಲೇ ಸಿಕ್ಕಿಬಿದ್ದ ಜೋಡಿ… ಕ್ಷಣಾರ್ಧದಲ್ಲೇ ನಡೆಯಿತು ದುರಂತ

ಲೇಡಿ ಕಾನ್ಸ್​ಟೇಬಲ್​ ವಿರುದ್ಧವೇ ಹನಿಟ್ರ್ಯಾಪ್ ಆರೋಪ! ಸಂತ್ರಸ್ತ ಯುವಕನಿಂದ ಸುಂದರಿಯ ಕರಾಳ ಮುಖ ಬಯಲು

VIDEO| ಮಾಸ್ಕ್​​ ಧರಿಸದ ಮಹಿಳೆಗೆ ಮಗಳ ಕಣ್ಣೆದುರಲ್ಲೇ ಮನಬಂದಂತೆ ಧಳಿಸಿದ ಪೊಲೀಸರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 14 =
Remember me
