ಕೊಚ್ಚಿ:ದಿಕ್ಕು ತೋಚದೇ ನ್ಯಾಯಕ್ಕಾಗಿ ಕೋರ್ಟ್​ ಮೆಟ್ಟಿಲೇರಿದ್ದ ಸಲಿಂಗ ಜೋಡಿಗೆ ಸಿಹಿ ಸುದ್ದಿ ಸಿಕ್ಕಿದೆ. ಇಬ್ಬರು ಒಟ್ಟಿಗೆ ಬಾಳಲು ಕೇರಳದ ಹೈಕೋರ್ಟ್​ ಅನುಮತಿ ನೀಡಿ ಆದೇಶ ಹೊರಡಿಸಿದೆ. ಅಲುವಾ ಮೂಲದ ಆಧಿಲಾ ನಸ್ರಿನ್ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯ ಅಡಿಯಲ್ಲಿ ನ್ಯಾಯಾಲಯ ಈ ಆದೇಶ ನೀಡಿದೆ.
ಆಧಿಲಾಳ ಮನವಿಯನ್ನು ಪರಿಗಣಿಸಿದ ನ್ಯಾಯಾಲಯವು ಅವಳು ತನ್ನ ಸಂಗಾತಿಯೊಂದಿಗೆ ಮತ್ತೆ ಸೇರಬಹುದು. ಇಬ್ಬರು ವಯಸ್ಕರಾಗಿದ್ದು, ಅವರವರ ಇಚ್ಛೆಯಂತೆ ಒಟ್ಟಿಗೆ ಬಾಳಬಹುದಾಗಿದೆ ಎಂದು ಹೈಕೋರ್ಟ್​ ನಿನ್ನೆ (ಮೇ.31) ಮಹತ್ವದ ಆದೇಶ ಹೊರಡಿಸಿದೆ.
ತನ್ನ ಸಂಗಾತಿ ಫಾತಿಮಾ ನೋರಾಳನ್ನು ಸಂಬಂಧಿಕರು ಬಲವಂತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಆರೋಪಿಸಿ ಆಧಿಲಾ ನಸ್ರಿನ್​ ಮಂಗಳವಾರ (ಮೇ.31) ನ್ಯಾಯಾಲಯದ ಮೆಟ್ಟಿಲೇರಿದ್ದರು. 2018ರ ಸೆಪ್ಟೆಂಬರ್​ 6ರಂದು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಪ್ರಕಾರ ನಮಗೆ ಒಟ್ಟಿಗೆ ವಾಸಿಸುವ ಹಕ್ಕಿದೆ ಎಂದು ಆಧಿಲಾ ನಸ್ರಿನ್​ ಅರ್ಜಿಯಲ್ಲಿ ಪ್ರತಿಪಾದಿಸಿದ್ದರು. ನ್ಯಾಯಾಲಯ ಮತ್ತು ಪೊಲೀಸರು ತಮ್ಮ ಪರವಾಗಿ ನಿಲ್ಲುವಂತೆ ಅರ್ಜಿಯಲ್ಲಿ ಆಧಿಲಾ ಕೋರಿದ್ದರು. ಆಕೆಯ ಮನವಿಯನ್ನು ಪುರಸ್ಕರಿಸಿರುವ ಹೈಕೋರ್ಟ್​ ಒಟ್ಟಿಗೆ ಬಾಳಲು ಅನುಮತಿ ನೀಡಿದೆ. ಇಬ್ಬರಿಗೂ ರಕ್ಷಣೆ ಒದಗಿಸಬೇಕೆಂದು ಪೊಲೀಸರಿಗೆ ನಿರ್ದೇಶನ ನೀಡಿದೆ.
ಘಟನೆಯ ಹಿನ್ನೆಲೆ ಏನು?ಅಲುವಾ ಮೂಲದ ಆಧಿಲಾ ನಸ್ರಿನ್​ (22) ಮತ್ತು ಕೊಯಿಕ್ಕೋಡ್​ ಮೂಲದ ಫಾತಿಮಾ ನೋರಾ (23) ಪರಸ್ಪರ ಪ್ರೀತಿ ಮಾಡುತ್ತಿದ್ದಾರೆ. ಆದರೆ, ಎರಡು ಕುಟುಂಬ ಇಬ್ಬರ ಸಲಿಂಗಕಾಮಕ್ಕೆ ಬಲವಾಗಿ ವಿರೋಧ ವ್ಯಕ್ತಪಡಿಸಿದೆ. ಹೀಗಾಗಿ ಇಬ್ಬರು ಒಟ್ಟಿಗೆ ಬಾಳಲು ಸಾಕಷ್ಟು ಹೋರಾಟ ನಡೆಸುತ್ತಿದ್ದರು. ಪೊಲೀಸ್​ ಇಲಾಖೆ ಮತ್ತು ನ್ಯಾಯಾಲಯದ ನೆರವು ಕೋರಿದ್ದರು.
ಸೌದಿ ಅರೇಬಿಯಾದಲ್ಲಿ 11ನೇ ತರಗತಿ ಓದುವಾಗ ಆಧಿಲಾ, ನೋರಾಳನ್ನು ಭೇಟಿ ಮಾಡುತ್ತಾಳೆ. ಎಲ್ಲರಂತೆಯೇ ಇಬ್ಬರ ಸ್ನೇಹ ಆರಂಭವಾಗುತ್ತದೆ. ಆದರೆ, ದಿನ ಕಳೆದಂತೆ ಇಬ್ಬರ ಸ್ನೇಹ ಗಾಢವಾಗಿ ಮತ್ತೊಂದು ಮಜಲಿಗೆ ಹೊರಳುತ್ತದೆ. ಆಗ ಇಬ್ಬರದ್ದು ಸಲಿಂಗಕಾಮ ಎಂದು ಅರಿವಾಗುತ್ತದೆ. ಅಂದಿನಿಂದ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ತುಂಬಾ ಹತ್ತಿರವಾಗುತ್ತಾರೆ. ಇಬ್ಬರ ಪಾಲಕರು ಕೂಡ ಫ್ರೆಂಡ್ಸ್​ ಆಗಿರುವುದರಿಂದ ಆಧಿಲಾ ಮತ್ತು ನೋರಾಳನ್ನು ಉನ್ನತ ಶಿಕ್ಷಣಕ್ಕಾಗಿ ಕೊಯಿಕ್ಕೋಡ್​ನಲ್ಲಿರುವ ಕಾಲೇಜಿಗೆ ಕಳುಹಿಸಲು ನಿರ್ಧಾರ ಮಾಡುತ್ತಾರೆ. ಶಿಕ್ಷಣ ಮುಗಿದ ಬಳಿಕವೂ ಉಳಿದ ಜೀವನವನ್ನು ಒಟ್ಟಿಗೆ ಕಳೆಯಬೇಕೆಂದು ನಿರ್ಧಾರ ಮಾಡುವ ಆಧಿಲಾ ಮತ್ತು ನೋರಾ, ಡಿಗ್ರಿ ಪೂರ್ಣಗೊಳಿಸಿದ ಬಳಿಕ ಇಬ್ಬರ ವಿಚಾರವನ್ನು ಕುಟುಂಬದ ಮುಂದೆ ಪ್ರಸ್ತಾಪಿಸಲು ತೀರ್ಮಾನಿಸುತ್ತಾರೆ.
ಇದರ ನಡುವೆ ಎರಡು ಕುಟುಂಬಕ್ಕೆ ಇಬ್ಬರ ಸಂಬಂಧದ ಬಗ್ಗೆ ತಿಳಿಯುತ್ತದೆ. ಬಳಿಕ ಒಂದೇ ಕಾಲೇಜಿಗೆ ಇಬ್ಬರನ್ನು ಸೇರಿಸುವ ನಿರ್ಧಾರವನ್ನು ಹಿಂತೆಗೆದುಕೊಳ್ಳುತ್ತಾರೆ. ಇಬ್ಬರನ್ನು ಬೇರೆ ಬೇರೆ ಕಾಲೇಜಿಗೆ ಕಳುಹಿಸುತ್ತಾರೆ. ಇಬ್ಬರ ಮೇಲೆ ಸಾಕಷ್ಟು ನಿರ್ಬಂಧಗಳನ್ನು ಹೇರುತ್ತಾರೆ. ಇಬ್ಬರ ಪ್ರೀತಿ ಕೊನೆಯಾಗುತ್ತದೆ ಎಂದು ಪಾಲಕರು ಭಾವಿಸುತ್ತಾರೆ. ಆದರೆ, ಇಬ್ಬರು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕ ಬೆಳೆಸುತ್ತಾರೆ. ಅಲ್ಲದೆ, ಮತ್ತೆ ಭೇಟಿಯಾಗಿ, ಸಲಿಂಗ ಪ್ರೇಮಿಗಳು ಮತ್ತು ಸಲಿಂಗಕಾಮದ ಬಗ್ಗೆ ಹೆಚ್ಚು ಅರಿತುಕೊಂಡು ಒಟ್ಟಿಗೆ ವಾಸಿಸಲು ನಿರ್ಧರಿಸುತ್ತಾರೆ.
ನಿಮ್ಮ ಸಂಬಂಧ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ ಎಂದು ಅವರವರ ಪಾಲಕರು ಖಂಡಿಸುತ್ತಾರೆ. ಆದರೂ ತಮ್ಮ ಸಂಬಂಧವನ್ನು ಮುರಿದುಕೊಳ್ಳಲು ಇಬ್ಬರು ತಯಾರಿರುವುದಿಲ್ಲ. ಇದರ ನಡುವೆ ಇಬ್ಬರು ಮೇ 19ರಂದು ತಮ್ಮ ಮನೆಗಳನ್ನು ತೊರೆಯುತ್ತಾರೆ. ಆದರೆ, ಪಾಲಕರ ಕೈಗೆ ಮತ್ತೆ ಸಿಕ್ಕಿಬೀಳುತ್ತಾರೆ. ಇಬ್ಬರು ಕೊಯಿಕ್ಕೋಡ್‌ನ ಆಶ್ರಯಧಾಮದಲ್ಲಿ ಆಶ್ರಯ ಪಡೆದಿದ್ದರು. ಇಬ್ಬರು ಒಟ್ಟಿಗೆ ಬಾಳಲು ಅನುಮತಿ ನೀಡುವಾಗಿ ಭರವಸೆ ನೀಡಿ ನನ್ನನ್ನು ಆಶ್ರಯಧಾಮದಿಂದ ಪಾಲಕರು ಅಲುವಾಗೆ ಕರೆದೊಯ್ದರು ಎಂದು ಆಧಿಲಾ ಹೇಳಿದ್ದರು. ಆದರೆ, ಮನೆಯಲ್ಲಿ ಆಕೆಯ ಮೇಲೆ ಹಲ್ಲೆ ಮಾಡಿದರು ಎಂದು ಆಧಿಲಾ ಆರೋಪ ಸಹ ಮಾಡಿದ್ದಾರೆ.
ಇದರ ನಡುವೆ ನನ್ನ ಮಗಳನ್ನು ಅಪಹರಿಸಿದ್ದಾಳೆ ಎಂದು ಆಧಿಲಾ ವಿರುದ್ಧ ನೋರಾ ಪಾಲಕರು ದೂರು ನೀಡುತ್ತಾರೆ. ಇತ್ತ ತನ್ನ ಕುಟುಂಬ ಸದಸ್ಯರಿಂದಲೇ ಆಧಿಲಾ ತೀವ್ರ ದೈಹಿಕ ಹಿಂಸೆಗೆ ಒಳಗಾಗಿರುತ್ತಾಳೆ. ಆದರೆ, ಹೇಗೋ ಪೊಲೀಸರ ಸಹಾಯದಿಂದ ಆಧಿಲಾ ಆಶ್ರಯ ಮನೆಗೆ ಮರಳುತ್ತಾಳೆ. ನೋರಾಳನ್ನು ಅವಳ ಹೆತ್ತವರು ಕರೆದುಕೊಂಡು ಹೋದ ನಂತರ ಒಮ್ಮೆ ಮಾತ್ರ ಆಕೆಯಯೊಂದಿಗೆ ಆಧಿಲಾ ಮಾತನಾಡಿರುತ್ತಾಳೆ. ಈ ವೇಳೆ ನೋರಾ, ಆಧಿಲಾ ಜತೆ ಬದುಕಲು ಬಯಸಿರುವುದಾಗಿ ಹೇಳುತ್ತಾಳೆ. ಅದಾದ ಬಳಿಕ ಎಲ್ಲ ಸಂಪರ್ಕವನ್ನು ಆಧಿಲಾ ಕಳೆದುಕೊಳ್ಳುತ್ತಾಳೆ. ಅಂತಿಮವಾಗಿ ಆಧಿಲಾ, ನೋರಾಗಾಗಿ ಪೊಲೀಸ್​ ಠಾಣೆ ಹಾಗೂ ನ್ಯಾಯಾಲಯ ಮೆಟ್ಟಿಲೇರುತ್ತಾಳೆ. ನಡೆದ ಎಲ್ಲ ಘಟನೆಯನ್ನು ಆಧಿಲಾ ವಿಡಿಯೋ ರೆಕಾರ್ಡ್​ ಮಾಡಿ ಸಾಮಾಜಿಕ ಜಾಲತಾಣದಲ್ಲೂ ಹರಿಬಿಟ್ಟಿದ್ದಳು. ಅಂತಿಮವಾಗಿ ಕೋರ್ಟ್​ ನಿನ್ನೆ (ಮೇ.31) ಆದೇಶ ನೀಡಿದ್ದು, ಇಬ್ಬರು ಒಟ್ಟಿಗೆ ಬಾಳಬಹುದಾಗಿದೆ. ಆಧಿಲಾ ಮತ್ತು ನೋರಾ ಪಾಲಿಗೆ ಇದು ಸಂತಸದ ಸುದ್ದಿಯಾಗಿದೆ.(ಏಜೆನ್ಸೀಸ್​)
ಸಲಿಂಗಕಾಮ ಅಪರಾಧವಲ್ಲ… ಪ್ರೇಯಸಿಗಾಗಿ ಕಣ್ಣೀರಿಡುತ್ತಿರುವ ಯುವತಿಯ ನೋವಿನ ಮಾತಿದು!

ಕೆಜಿಎಫ್​ ಬ್ಯೂಟಿ ಶ್ರೀನಿಧಿ ಶೆಟ್ಟಿ ಸಂಭಾವನೆ ಡಿಮ್ಯಾಂಡ್​ ಕೇಳಿ ಶಾಕ್​ ಆದ ಟಾಲಿವುಡ್​ ಮಂದಿ!

ಕೆ.ಎಲ್​. ರಾಹುಲ್​ ಒಳಉಡುಪು ಜಾಹೀರಾತು ನೋಡಿ ನಟಿ ಕಸ್ತೂರಿ ಮಾಡಿದ ಹಾಟ್​ ಕಾಮೆಂಟ್​ ವೈರಲ್​!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 + four =
Remember me
